ಏಕದಿನ ಪಂದ್ಯ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಸೋಲು
Team Udayavani, Jun 27, 2021, 10:15 PM IST
ಬ್ರಿಸ್ಟಲ್ : ನಿಧಾನ ಗತಿಯ ಬ್ಯಾಟಿಂಗ್ ಹಾಗೂ ಕಳಪೆ ಬೌಲಿಂಗಿಗೆ ಬೆಲೆ ತೆತ್ತ ಭಾರತದ ವನಿತಾ ತಂಡ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ.
ನಾಯಕಿ ಮಿಥಾಲಿ ರಾಜ್ ಅವರ ಬ್ಯಾಟಿಂಗ್ ಹೋರಾಟದ ಫಲವಾಗಿ ಭಾರತ 8 ವಿಕೆಟಿಗೆ 201 ರನ್ನುಗಳ ಸಾಮಾನ್ಯ ಸ್ಕೋರ್ ದಾಖಲಿಸಿದರೆ, ಇಂಗ್ಲೆಂಡ್ 34.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 202 ರನ್ ಬಾರಿಸಿತು. ಓಪನರ್ ಟಾಮಿ ಬ್ಯೂಮಂಟ್ (ಅಜೇಯ 87) ಮತ್ತು ನಥಾಲಿ ಶಿವರ್ (ಅಜೇಯ 74) ಮುರಿಯದ 3ನೇ ವಿಕೆಟಿಗೆ 119 ರನ್ ಪೇರಿಸಿ ಗೆಲುವು ಸಾರಿದರು. ಬ್ಯಾಟಿಂಗಿನಂತೆ ಭಾರತದ ಬೌಲಿಂಗ್ ಕೂಡ ವಿಫಲಗೊಂಡಿತು.
ಈ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದ ಶಫಾಲಿ ವರ್ಮ (15) ಮತ್ತು ಅನುಭವಿ ಸ್ಮತಿ ಮಂಧನಾ (10) 27 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡ ಪರಿಣಾಮ ಭಾರತದ ಮೇಲೆ ಒತ್ತಡ ಬಿತ್ತು.
ನಾಯಕಿಯ ಆಟವಾಡಿದ ಮಿಥಾಲಿ ಎರಡು ಉಪಯುಕ್ತ ಜತೆಯಾಟಗಳಲ್ಲಿ ಪಾಲ್ಗೊಂಡರು.
ಇದನ್ನೂ ಓದಿ :ಟ್ವಿಟರ್ ಕುಂದುಕೊರತೆ ಅಧಿಕಾರಿ ಧರ್ಮೇಂದ್ರ ಚತುರ್ ರಾಜೀನಾಮೆ
ಪೂನಂ ರಾವುತ್ (32) ಜತೆ 3ನೇ ವಿಕೆಟಿಗೆ 56 ರನ್, ದೀಪ್ತಿ ಶರ್ಮ (30) ಜತೆ 4ನೇ ವಿಕೆಟಿಗೆ 65 ರನ್ ಪೇರಿಸಿದರು. 46ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ನಿಂತ ಮಿಥಾಲಿ ಗಳಿಕೆ 108 ಎಸೆತಗಳಿಂದ 72 ರನ್. ಇದು ಅವರ 56ನೇ ಅರ್ಧ ಶತಕ. ಅಂತಿಮವಾಗಿ ಸ್ಪಿನ್ನರ್ ಎಕ್ ಸ್ಟೋನ್ ಎಸೆತದಲ್ಲಿ ಬೌಲ್ಡ್ ಆಗಿ ವಾಪಸಾದರು. 40ಕ್ಕೆ 3 ವಿಕೆಟ್ ಕಿತ್ತ ಎಕ್‌ಸ್ಟೋನ್ ಇಂಗ್ಲೆಂಡಿನ ಯಶಸ್ವಿ ಬೌಲರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್ ?
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.