ಊರಿಗೆ ನೀರಿಲ್ಲದೆ ಎಂಟು ದಿನವಾಯ್ತು: ಗ್ರಾಮಪಂಚಾಯಿತಿ ಎದುರು ಮಹಿಳೆಯರಿಂದ ಪ್ರತಿಭಟನೆ
Team Udayavani, Feb 6, 2023, 3:59 PM IST
ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲ ನಗರದಲ್ಲಿ ಕಳೆದ ಎಂಟು ಹತ್ತು ದಿನಗಳಿಂದ ಕುಡಿಯುವ ನೀರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದು ರೊಚ್ಚಿಗೆದ್ದ ಊರಿನ ವಿಠಲನಗರದ ಮಹಿಳೆಯರು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಕಛೇರಿ ಮುಂದೆ ಖಾಲಿ ಕೊಡಪಾನ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವುದು ತುಂಗಾನದಿ ಹರಿಯುತ್ತಾಇದೆ ವಿಠಲನಗರ ತುಂಗಾ ನದಿಯ ದಡದಲ್ಲಿ ಇದ್ದರೂ ಕೂಡ ವಿಠಲನಗರದ ಜನತೆಗೆ ಕುಡಿಯಲು ನೀರಿಲ್ಲದೆ ಪರಿತಪ್ಪಿಸುವಂತಾಗಿದೆ ತುಂಗಾ ನದಿಯ ಪಾತ್ರದಲ್ಲಿ ಇರುವ ಜನರ ಕಷ್ಟ ಇದಾದರೆ ಇನ್ನೂ ಗ್ರಾಮ ಪಂಚಾಯಿತಿ ಯಿಂದ ದೂರ ದೂರ ಇರುವ ಊರಿನ ಜನರ ನೀರಿನ ಸಮಸ್ಯೆ ಹೇಳತೀರಾದಾಗಿದೆ. ಆದರೂ ಗ್ರಾಮ ಪಂಚಾಯತಿ ಇತ್ತ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದೆ ವಿಠಲನಗರ ಊರಿಗೆ ನೀರಿಲ್ಲದೆ ಎಂಟು ಹತ್ತು ದಿನಗಳಾದರೂ ಇತ್ತ ಗ್ರಾಮ ಪಂಚಾಯಿತಿ ನೀರಿನ ಸಮಿತಿಯ ಇದರ ಬಗ್ಗೆ ಗಮನ ವಹಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಮೂಲಭೂತ ಸೌಕರ್ಯ ಕೊಡುತ್ತೇವೆ ಎಂದು ಚುನಾವಣೆಗೆ ನಿಲ್ಲುವಾಗ ಆಶ್ವಾಸನೆ ಕೊಡುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಸಾರ್ವಜನಿಕರ ಬಗ್ಗೆ ಕಿಂಚಿತ್ತು ಯೋಚನೆ ಮಾಡುವುದಿಲ್ಲ ಎಂದು ವಿಠಲನಗರದ ಪ್ರತಿಭಟನಾ ನಿರತರಾದ ಮಹಿಳೆಯರಿಂದ ಮಾತು ಕೇಳಿ ಬರುತ್ತಿದೆ. ವಾರದಿಂದ ನೀರಿಲ್ಲದ ವಿಷಯ ತಿಳಿದು ಬಾನುವಾರ ಸಂಜೆ ಟ್ಯಾಂಕರ್ ಒಂದರಲ್ಲಿ ನೀರು ವಿಠಲನಗರ ಜನರಿಗೆ ಕೊಟ್ಟ ರಾದರು ಒಬ್ಬರಿಗೆ ಕೊಟ್ಟರೆ ಒಬ್ಬರಿಗೆ ಕೊಟ್ಟಿಲ್ಲ ಎಂದು ಮಹಿಳೆಯರು ದೂರಿದ್ದಾರೆ . ಇಂದು ಸಂಜೆಯ ಒಳಗೆ ನೀರು ಬರದೇ ಇದ್ದರೆ ಸಂಜೆಯ ವೇಳೆ ಮತ್ತೊಮ್ಮೆ ಪ್ರತಿಭಟನೆ ನಡೆಸುತ್ತೇವೆ. ಎಂದು ಗ್ರಾಮ ಪಂಚಾಯಿತಿ ಕಛೇರಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನೀರಿನ ಕಮಿಟಿ ಅದ್ಯಕ್ಷರಾದ ಅಣ್ಣಪ್ಪ ರವರನ್ನು ಈ ಬಗ್ಗೆ ವಿಚಾರಿಸಿದಾಗ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾರದೆ ಮೂರು ನಾಲ್ಕು ತಿಂಗಳು ಆಗಿದೆ ಇದರಿಂದ ತುಂಬಾ ಗ್ರಾಮ ಪಂಚಾಯಿತಿಯ ಅಬಿರುದ್ದಿ ಕುಂಟಿತವಾಗಿದೆ.ಪಂಚಾಯಿತಿ ಯಾವುದೇ ಚಕ್ ಕೂಡ ಅದ್ಯಕ್ಷರು ಬಂದು ಸಹಿ ಮಾಡುತ್ತ ಇಲ್ಲ ಮತ್ತು ನೀರಿನ ಸಂಬಂಧ ಪಟ್ಟ ವಿಷಯಕ್ಕೆ ಸ್ಪಂದಿಸದೇ ಇರುವ ಕಾರಣ ಇಷ್ಟು ದಿನ ವಿಳಂಬ ವಾಗಿದೆ . ನಾವು ಮತ್ತೆ ಪಿ ಡಿ ಓ ಜವಾಬ್ದಾರಿ ಹೊತ್ತುಕೊಂಡು ಈ ಊರಿನ ನೀರಿನ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಾ ಇದ್ದೆವೆ ಸೋಮವಾರ ಸಂಜೆ ವಳಗೆ ವಿಠಲನಗರದ ನೀರಿನ ಸಮಸ್ಯೆ ಬಗೆಹರಿಸುತ್ತೆನೆ ಎಂದು ತಿಳಿಸಿದರು.
ಇದನ್ನೂ ಓದಿ: ದಲಿತ ಸಿ.ಎಂ ವಿಚಾರದಲ್ಲಿ ಬಂದ್ರೆ ಚಾರಾಣೆ, ಹೋದ್ರೆ ಬಾರಾಣೆ: ರಮೇಶ ಜಿಗಜಿಣಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.