ವರ್ಕ್ ಫ್ರಮ್ ಹೋಂ ಐಟಿ-ಬಿಟಿಗೆ ಮಾತ್ರ ಯಾಕೆ?
Team Udayavani, Apr 26, 2021, 12:10 PM IST
ಬೆಂಗಳೂರು: “ಕೊರೊನಾ ಮೊದಲನೆ ಅಲೆಯಲ್ಲಿ ರಾಜಧಾನಿಯ ಸೋಂಕು ಹತೋಟಿಗೆ ವರವಾಗಿದ್ದ”ವರ್ಕ್ ಫ್ರಮ್ ಹೋಂ’ಗೆ ಈ ಬಾರಿ ಬಹುತೇಕ ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಇದರಿಂದ ಉದ್ಯೋಗಿಗಳು, ನಿತ್ಯ ಜೀವ ಭಯದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ.”ವರ್ಕ್ ಫ್ರಮ್ ಹೋಂ’ಗೆ ಉದ್ಯಾನ ನಗರಿಯ ಅನೇಕ ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತಿವೆ.ಇದರಿಂದ ಉದ್ಯೋಗಿಗಳ ಸೋಂಕು ಹರಡುವಿಕೆ ಹೆಚ್ಚಳವಾಗಿದೆ.
“ಸರ್.. ಕಳೆದ ವರ್ಷ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಕಂಪನಿ “ವರ್ಕ್ ಫ್ರಮ್ ಹೋಂ’ಗೆ ಅವಕಾಶನೀಡಿತ್ತು. ಇದರಿಂದ ನಮ್ಮ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಎರಡನೇ ಅಲೆವ್ಯಾಪಕವಾಗಿ ಹಬ್ಬುತ್ತಿದೆ. ಸರಕಾರ ಇನ್ನೂ ಕಡ್ಡಾಯ ನಿಯಮಗಳನ್ನು ಜಾರಿ ಮಾಡುತ್ತಿಲ್ಲ. ನಿತ್ಯ ಮಾಧ್ಯಮಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಸಂಬಂಧಿಕರ ನೋವು ಕಣ್ಣಾರೆ ನೋಡುತ್ತಿದ್ದೇವೆ.
ಕೋಟಿರೂ. ಇದ್ದರೂ ಆಕ್ಸಿಜನ್, ಬೆಡ್ ಸಿಗದೆ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ… ಈ ಬಾರಿ ಮನೆಯಿಂದಲೇ ಕೆಲಸ ಜಾರಿಯಾದರೆ ಒಳಿತು.. ‘”ನಾನು ಒಬ್ಬಂಟಿ(ಅವಿವಾಹಿತ) ಸರ್.. ನಿತ್ಯಮನೆಯವರಿಗೆ ಕರೆಮಾಡಿದಾಗಲೆಲ್ಲ ಪೋಷಕರು, “ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಹೆಚ್ಚಾಗಿದೆ. ಆರೋಗ್ಯ ಹುಷಾರು. ಜೀವಮುಖ್ಯ ಕಣೋ, ಸಾಧ್ಯವಾದರೆ ಕೆಲಸ ಮಾಡು. ಇಲ್ಲವಾದರೆ ಊರಿಗೆ ವಾಪಸ್ ಬಂದು ಬಿಡು. ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡುಜೀವನ ನಡೆಸಬಹುದು’ ಎಂದು ಕಣ್ಣೀರಿಡುತ್ತಿದ್ದಾರೆ. ಕೆಲಸ ಮುಖ್ಯನಾ? ಜೀವಮುಖ್ಯನಾ? ಎಂಬ ಗೊಂದಲ ಮೂಡಿದೆ. ಕಂಪನಿಯವರು “ವರ್ಕ್ ಫ್ರಮ್ ಹೋಂ’ಗೆ ಅವಕಾಶ ಕೊಟ್ಟರೆ ಮನೆಯವರೂ ನಿಟ್ಟುಸಿರು ಬಿಡುತ್ತಾರೆ ಸರ್..’ಹೀಗೆ.. ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಬೆಳಗಾವಿ ಜಿಲ್ಲೆ ಮೂಲದ ಉದ್ಯೋಗಿಯೊಬ್ಬರು, ಕಂಪನಿ ಕೆಲಸ ಹಾಗೂ ಕೊರೊನಾ ಎರಡನೇ ಅಲೆಯಿಂದ ಕುಟುಂಬದವರಲ್ಲಿ ಉಂಟಾಗಿರುವ ಭಯದವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.
ಕೆಲವು ಕ್ಷೇತ್ರಗಳಿಗಿಲ್ಲ “ವರ್ಕ್ ಫ್ರಮ್ ಹೋಂ’:”ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೊಸ ಬಗೆಯಕೆಲಸದ ವಾತಾವರಣ ಸೃಷ್ಟಿಯಾಗಿದೆ. ಸಾಫ್ಟ್ವೇರ್ ಉದ್ಯೋಗಿಗಳಿಗೆ ಮಾತ್ರವೇ ಸೀಮಿತವಾಗಿದ್ದ “ವರ್ಕ್ ಫ್ರಮ್ ಹೋಂ’ ಸೌಲಭ್ಯ, ಇದೀಗ ಇತರೆ ಕಾರ್ಯಕ್ಷೇತ್ರಕ್ಕೂ ಹರಡಿದೆ. ಇಷ್ಟು ದಿನ “ವರ್ಕ್ ಫ್ರಮ್ ಹೋಂ’ ಎನ್ನುವುದು ಕೆಲವೇ ಕಾರ್ಯಕ್ಷೇತ್ರಗಳ ಉದ್ಯೋಗಿಗಳಿಗೆ ಮಾತ್ರವೇ ಲಭ್ಯವಿತ್ತು. ಇತರೆ ಕಾರ್ಯಕ್ಷೇತ್ರಗಳಲ್ಲಿ ಆ ಸೌಲಭ್ಯವನ್ನು ಒದಗಿಸುವುದು ಅಷ್ಟೇನೂ ಪರಿಣಾಮಕಾರಿ ತಂತ್ರವಲ್ಲ ಎಂದು ಭಾವಿಸಲಾಗಿತ್ತು. ಫೀಲ್ಡ್‌ನಲ್ಲಿ ಕೆಲಸ ಮಾಡುವ ಅನಿವಾರ್ಯತೆಯುಳ್ಳ ಕೆಲವೊಂದು ಉದ್ಯೋಗ ಕ್ಷೇತ್ರಗಳಲ್ಲಿ “ವರ್ಕ್ ಫ್ರಮ್ ಹೋಂ’ಸೌಲಭ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ,ಕೆಲವು ಸೆಕ್ಟರ್‌ಗಳ ಉದ್ಯೋಗಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ನಗರದ ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ಕಂಪನಿ-ನೌಕರರ ಮಧ್ಯೆ ವಿಶ್ವಾಸ ಅಗತ್ಯ: ಕಚೇರಿಯಲ್ಲೇ ಕೆಲಸ ನಿರ್ವಹಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕಚೇರಿ ವಾತಾವರಣ ಉತ್ಪಾದನೆಯ ಪರಿಸರ ಕಲ್ಪಿಸಿಕೊಡುತ್ತದೆ. ಸಹೋದ್ಯೋಗಿಗಳೊಡನೆ ಒಡನಾಟವಿರುತ್ತದೆ. ಅವರ ಸಹಾಯದಿಂದ ಆಫೀಸಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ,ಮನೆಯಲ್ಲಿ ಕುಳಿತವರು ಕಚೇರಿ ಕೆಲಸ ಬಿಟ್ಟು ಕಾಲಹರಣ ಮಾಡಬಹುದು ಎನ್ನುವ ಆತಂಕವೂ ಕಂಪನಿಗಳಿಗಿರುತ್ತದೆ. ಪ್ರಸ್ತುತ ಕೊರೊನಾ ವ್ಯಾಪಕತೆ ಬಿಗಡಾಯಿಸಿದೆ. ಇದರಿಂದ ಉದ್ಯೋಗಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಕಂಪನಿ ಹಾಗೂ ನೌಕರರು ಪರಸ್ಪರ ವಿಶ್ವಾಸ, ಜವಾಬ್ದಾರಿ ಅರಿತು ತಮ್ಮ ಕೆಲಸಗಳನ್ನು ನಡೆಸಿಕೊಂಡು ಜೊತೆಯಾಗಿ ಸಾಗಬೇಕಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಪರಿಸರ ಸ್ನೇಹಿ ವಾತಾವರಣ ಸೃಷ್ಟಿ
“ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ, ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಕಳೆದ ಬಾರಿಯಂತೆ “ವರ್ಕ್ ಫ್ರಮ್ ಹೋಂ’ ಸೌಲಭ್ಯ ಕಲ್ಪಿಸುವುದು ಸೂಕ್ತ. ಇದರಿಂದ ಸಿಬ್ಬಂದಿಗೆ ನಿರಾಳತೆ ಇರುತ್ತದೆ. ಮನೆಯಿಂದಕೆಲಸ ಮಾಡುವಾಗ, ಕಚೇರಿಯಲ್ಲಿ ದುಡಿಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಯಬೇಕಾಗಿ ಬಂದರೂ ಅಷ್ಟಾಗಿ ಒತ್ತಡ ಇರುವುದಿಲ್ಲ. ಇನ್ನು ಮಹಿಳಾ ಉದ್ಯೋಗಿಗಳಿಗೆ “ವರ್ಕ್ ಫ್ರಮ್ ಹೋಂ’ನಿಂದ ಸಾಕಷ್ಟು ಅನುಕೂಲಗಳಿವೆ. ಕುಟುಂಬಸ್ಥರ ಜತೆಗೆ ಹೆಚ್ಚು ಸಮಯ ಕಳೆಯುವ ಅವಕಾಶ ಲಭಿಸುತ್ತದೆ. ಅಲ್ಲದೆ ಮುಖ್ಯವಾಗಿ, ಐಟಿ, ಬಿಟಿ ಕಂಪನಿಗಳೇ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಇಳಿಮುಖವಾಗಿ,ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ವಿಕಾಸ್ ಆರ್ ಪಿಟ್ಲಾಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.