ಜಗತ್ತಿಗೀಗ ರೂಪಾಂತರಿಗಳ ಭೀತಿ : ಬಹುತೇಕ ದೇಶಗಳಲ್ಲಿ ಡೆಲ್ಟಾ ಅಬ್ಬರ


Team Udayavani, Jul 11, 2021, 7:15 AM IST

ಜಗತ್ತಿಗೀಗ ರೂಪಾಂತರಿಗಳ ಭೀತಿ : ಬಹುತೇಕ ದೇಶಗಳಲ್ಲಿ ಡೆಲ್ಟಾ ಅಬ್ಬರ

ನಿರ್ಬಂಧಗಳು ಸಡಿಲಿಕೆಯಾದಂತೆ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಅದರಲ್ಲೂ ಕೊರೊನಾದ ರೂಪಾಂತರಿಗಳು ಜಗತ್ತಿನ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದ್ದು, ಬಹುತೇಕ ದೇಶಗಳಲ್ಲಿ ಡೆಲ್ಟಾ ರೂಪಾಂತರಿಯು ಜನರ ನಿದ್ದೆಗೆಡಿಸಿದೆ. ಜೂನ್‌ 23ರ ಅನಂತರ ಸೋಂಕು ಪ್ರಕರಣ ಏರಿಕೆಯಾಗುತ್ತಾ ಸಾಗಿದೆ. ಜೂ. 22ರಂದು ಜಗತ್ತಿನಾದ್ಯಂತ 3.59 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿತ್ತು. ಜು.6ರ ವೇಳೆಗೆ ಇದು 4ಲಕ್ಷಕ್ಕೇರಿತ್ತು.

ಯುಕೆ
ಡೆಲ್ಟಾ ರೂಪಾಂತರಿಯು ಯುನೈಟೆಡ್‌ ಕಿಂಗ್‌ ಡಮ್‌ನಲ್ಲಿ ಹೊಸ ಆತಂಕ ಸೃಷ್ಟಿಸಿದೆ. ಶುಕ್ರವಾರ ಒಂದೇ ದಿನ ಬರೋಬ್ಬರಿ 54,268 ಪ್ರಕರಣಗಳು ದೃಢಪಟ್ಟಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಶೇ.32ರಷ್ಟು ಹೆಚ್ಚಳವಾಗಿದೆ. ಇಲ್ಲಿನ ಸೋಂಕಿತರ ಪೈಕಿ ಶೇ.99 ಮಂದಿಗೆ ಹರಡಿರುವುದು ಡೆಲ್ಟಾ ರೂಪಾಂತರಿ. ಇನ್ನು ಡೆಲ್ಟಾ ಪ್ಲಸ್‌ನ 44 ಪ್ರಕರಣಗಳೂ ಪತ್ತೆಯಾಗಿರುವುದು ಯು.ಕೆ. ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಅಮೆರಿಕ
ಅಮೆರಿಕದಲ್ಲೂ ಡೆಲ್ಟಾದಿಂದಾಗಿ ಕೇಸುಗಳು ಗಣನೀಯವಾಗಿ ಹೆಚ್ಚುತ್ತಿವೆೆ. ಜುಲೈ 6ರ ವೇಳೆಗೆ 7 ದಿನಗಳ ಸರಾಸರಿ ಪ್ರಕರಣ 13,859 ಆಗಿದ್ದು, ಹಿಂದಿನ ಎರಡು ವಾರಗಳಿಗೆ ಹೋಲಿಸಿದರೆ ಇದು ಶೇ.21ರಷ್ಟು ಹೆಚ್ಚಳವಾಗಿದೆ. ಸೋಂಕಿತರ ಪೈಕಿ ಶೇ.93 ಮಂದಿಗೆ ತಗಲಿರುವುದು ಡೆಲ್ಟಾ ವೇರಿಯೆಂಟ್‌. ಅಮೆರಿಕದಲ್ಲಿ ಸದ್ಯ 8 ರೂಪಾಂತರಿಗಳು ಸದ್ದು ಮಾಡುತ್ತಿವೆ.

ಕೆನಡಾ
ಕಳೆದ ವರ್ಷ ಪೆರುವಿನಲ್ಲಿ ಪತ್ತೆಯಾದ ಲಾಂಬಾx ರೂಪಾಂತರಿಯು ಈಗ ಕೆನಡಾದ ನಿದ್ದೆಗೆಡಿಸಿದೆ.
ಈಗಾಗಲೇ 27 ಪ್ರಕರಣಗಳು ಪತ್ತೆಯಾಗಿದ್ದು, ಇದು ಕೂಡ ಡೆಲ್ಟಾ ಮಾದರಿಯಲ್ಲೇ ಭಾರೀ ವೇಗವಾಗಿ ಹಬ್ಬುವ ರೂಪಾಂತರಿಯಾಗಿದೆ. ಒಟ್ಟಾರೆ 25 ದೇಶಗಳಲ್ಲಿ ಲಾಂಬಾx ಕಂಡುಬಂದಿದೆ.

ಪಾಕಿಸ್ಥಾನ
ಪಾಕ್‌ ನಲ್ಲೂ ಸೋಂಕು ಹೆಚ್ಚಳವಾಗುತ್ತಿದ್ದು, 24 ಗಂಟೆಗಳಲ್ಲಿ 1,828 ಪ್ರಕರಣ ಪತ್ತೆಯಾಗಿದೆ. ಈ ಪೈಕಿ ಸಿಂಧ್‌ ಪ್ರಾಂತ್ಯವೊಂದರಲ್ಲೇ 1,046 ಕೇಸುಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಲಸಿಕೆ ಪ್ರಮಾಣ ಪತ್ರ ಇರುವವರಿಗಷ್ಟೇ ಆಸ್ಪತ್ರೆಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯದವರು ಸರಕಾರಿ ಉದ್ಯೋಗದ ಸಂದರ್ಶನಕ್ಕೆ ಬರುವಂತಿಲ್ಲ, ಸರಕಾರಿ ಸಾರಿಗೆಗಳಲ್ಲಿ ಪ್ರಯಾಣಿಸುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ.

ಆಸ್ಟ್ರೇಲಿಯಾ
ಇಲ್ಲಿನ ನ್ಯೂ ಸೌತ್‌ ವೇಲ್ಸ್‌ನಲ್ಲಿ ಕೊರೊನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಸಿಡ್ನಿಯಲ್ಲಿ ಈಗಾಗಲೇ 2 ವಾರಗಳ ಲಾಕ್‌ ಡೌನ್‌ ಘೋಷಿಸಲಾಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ. ಡೆಲ್ಟಾ ರೂಪಾಂತರಿಯು ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಗ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ರಷ್ಯಾ
2020ರ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ ನಲ್ಲಿ ರಷ್ಯಾದಲ್ಲಿ ಸೋಂಕಿತರ ಸಾವು ಪ್ರಕರಣಗಳು ಶೇ.14ರಷ್ಟು ಹೆಚ್ಚಳವಾಗಿವೆೆ. ಸಾವು ಈ ಪ್ರಮಾಣದಲ್ಲಿ ಹೆಚ್ಚಲು ಡೆಲ್ಟಾ ರೂಪಾಂತರಿಯೇ ಕಾರಣ ಎಂದು ಕೋವಿಡ್‌ ಕಾರ್ಯಪಡೆ ಹೇಳಿದೆ. ಶುಕ್ರವಾರ ಒಂದೇ ದಿನ 25,766 ಪ್ರಕರಣಗಳು ಪತ್ತೆಯಾಗಿವೆೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.