ವಿಶ್ವ ನ್ಯೂಮೋನಿಯಾ ದಿನ 2020: ನ್ಯುಮೋನಿಯಾ ಅಂದರೇನು?

ಪ್ರತಿ ವರ್ಷ ನವೆಂಬರ್‌ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ.

Team Udayavani, Nov 12, 2020, 11:43 AM IST

ವಿಶ್ವ ನ್ಯೂಮೋನಿಯಾ ದಿನ 2020: ನ್ಯುಮೋನಿಯಾ ಅಂದರೇನು?

ಪ್ರತಿ ವರ್ಷ ನವೆಂಬರ್‌ 12ನ್ನು ಜಾಗತಿಕ ನ್ಯುಮೋನಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ನ್ಯುಮೋನಿಯಾ ಮತ್ತದರ ಲಕ್ಷಣಗಳು, ಚಿಕಿತ್ಸೆ ಹಾಗೂ ಅದರ ತಡೆ, ನಿಯಂತ್ರಣದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಹೆಚ್ಚಿಸುವುದಕ್ಕಾಗಿ ಈ ದಿನಾಚರಣೆ ನಡೆಸಲಾಗುತ್ತದೆ. ಶ್ವಾಸಕೋಶಗಳಿಗೆ ತಗಲುವ ಈ ಮಾರಕ ಸೋಂಕು ರೋಗದ ಬಗ್ಗೆ ಮಾಹಿತಿ ಮತ್ತು ಎಚ್ಚರ ಸದಾ ಜಾಗೃತವಾಗಿರಬೇಕಾಗಿದೆ.

ನ್ಯುಮೋನಿಯಾ ಅಂದರೇನು?
ನ್ಯುಮೋನಿಯಾವು ಶ್ವಾಸಕೋಶಗಳಿಗೆ ತಗಲುವ ಒಂದು ಸೋಂಕು. ಬಾಯಿ ಅಥವಾ ಮೂಗಿನ ಮೂಲಕ ನಡೆಸುವ ಉಚ್ಛಾಸದ ಮೂಲಕ ಶ್ವಾಸಕೋಶಗಳ ಒಳಕ್ಕೆ ಸೇರುವ ಸೂಕ್ಷ್ಮಜೀವಿಗಳಿಂದಾಗಿ ಈ ಸೋಂಕು ಉಂಟಾಗುತ್ತದೆ. 2016ರ ಗ್ಲೋಬಲ್‌ ಬರ್ಡನ್‌ ಆಫ್ ಡಿಸೀಸಸ್‌ (ಜಿಬಿಡಿ) ಪ್ರಕಾರ ಜಾಗತಿಕವಾಗಿ ಮೃತ್ಯು ಮತ್ತು ಆರೋಗ್ಯ ಹಾನಿ ಉಂಟಾಗುವ ಕಾರಣಗಳಲ್ಲಿ ನ್ಯುಮೋನಿಯಾ ಮುಂಚೂಣಿಯಲ್ಲಿದೆ.

ನಾನು ಆರೋಗ್ಯವಾಗಿದ್ದೇನೆ. ನನಗೂ ನ್ಯುಮೋನಿಯಾ ಬರಬಹುದೇ?
ನ್ಯುಮೋನಿಯಾ ಯಾರಿಗೂ ಬರಬಹುದು. ಆದರೆ ಐದು ವರ್ಷಕ್ಕಿಂತ ಕೆಳಗಿನ, 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ; ಹೃದ್ರೋಗ, ಪಿತ್ತಜನಕಾಂಗ, ಮೂತ್ರಪಿಂಡ, ಶ್ವಾಸಕೋಶಗಳ ಕಾಯಿಲೆಗಳು, ಮಧುಮೇಹ ಹೊಂದಿರುವ, ದೀರ್ಘ‌ಕಾಲೀನವಾಗಿ ಸ್ಟಿರಾಯ್ಡ ಔಷಧಗಳನ್ನು ಸೇವಿಸುತ್ತಿರುವವರು ಅಥವಾ ಧೂಮಪಾನಿಗಳಿಗೆ ನ್ಯುಮೋನಿಯಾ ಉಂಟಾಗುವ ಅಪಾಯ ಹೆಚ್ಚಿರುತ್ತದೆ.

ನ್ಯುಮೋನಿಯಾ ಯಾವುದರಿಂದ ಉಂಟಾಗುತ್ತದೆ?
ಬ್ಯಾಕ್ಟೀರಿಯಾಗಳಿಂದ ನ್ಯುಮೋನಿಯಾ ಉಂಟಾಗುತ್ತದೆ. ವೈರಸ್‌ಗಳೂ ಕಾರಣವಾಗುತ್ತವೆ. ಅಪರೂಪವಾಗಿ ಶಿಲೀಂಧ್ರಗಳೂ ನ್ಯುಮೋನಿಯಾವನ್ನು ಉಂಟು ಮಾಡುತ್ತವೆ.

ನ್ಯುಮೋನಿಯಾದ ಲಕ್ಷಣಗಳೇನು?
ಜ್ವರ, ಚಳಿ ನಡುಕ, ಕೆಮ್ಮು, ಉಸಿರಾಡಲು ತೊಂದರೆ, ಹೃದಯ ಬಡಿತ ಮತ್ತು ಉಸಿರಾಟದ ವೇಗ ಹೆಚ್ಚುವುದು, ಅಪರೂಪಕ್ಕೆ ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಭೇದಿ – ಇವು ನ್ಯುಮೋನಿಯಾದ ಲಕ್ಷಣಗಳು. ರೋಗದ ಮುಂದುವರಿದ ಹಂತಗಳಲ್ಲಿ ರೋಗಿಯು ಗೊಂದಲಕ್ಕೀಡಾಗಬಹುದು, ಉದ್ವಿಗ್ನಗೊಳ್ಳಬಹುದು.

ವೈದ್ಯರು ಹೇಗೆ ರೋಗ ಪತ್ತೆ ಮಾಡುತ್ತಾರೆ?
ವೈದ್ಯರು ರೋಗ ಲಕ್ಷಣಗಳ ಬಗ್ಗೆ ರೋಗಿಯಿಂದ ಮಾಹಿತಿ ಸಂಗ್ರಹಿಸುತ್ತಾರೆ. ದೇಹವನ್ನು ಅದರಲ್ಲೂ ವಿಶೇಷವಾಗಿ ಎದೆಯನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುತ್ತಾರೆ. ರಕ್ತಪರೀಕ್ಷೆ, ಕಫ‌ದ ಪರೀಕ್ಷೆ ಮತ್ತು ಎದೆಯ ಎಕ್ಸ್‌ ರೇಗಳು ಕಾಯಿಲೆಯನ್ನು ಖಚಿತಪಡಿಸುವಲ್ಲಿ ಸಹಾಯ ಮಾಡುತ್ತವೆ. ರೋಗಿಯ ಸ್ಥಿತಿಯ ಗಂಭೀರತೆಯನ್ನು ಅವಲಂಬಿಸಿ ಮುಂದುವರಿದ ಉನ್ನತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ:ಕೋವಿಡ್ 2ನೇ ಅಲೆ, ಜನರ ಕೈಯಲ್ಲೇ ಆರೋಗ್ಯ: ಚಳಿಗಾಲದಲ್ಲಿ ವೈರಸ್‌ಗಳು ಶೇ.50ರಷ್ಟು ವೃದ್ಧಿ

ನ್ಯುಮೋನಿಯಾಕ್ಕೆ ಚಿಕಿತ್ಸೆ ಒದಗಿಸುವುದು ಹೇಗೆ?
ನ್ಯುಮೋನಿಯಾಕ್ಕೆ ಕಾರಣವನ್ನು ಅವಲಂಬಿಸಿ ಬ್ಯಾಕ್ಟೀರಿಯಾದಿಂದ ಉಂಟಾದುದಕ್ಕೆ ಆ್ಯಂಟಿ ಬಯಾಟಿಕ್‌ ಔಷಧವನ್ನು ನೀಡಲಾಗುತ್ತದೆ. ವೈರಸ್‌ಗಳಿಂದ ಉಂಟಾಗಿರುವ ನ್ಯುಮೋನಿಯಾಕ್ಕೆ ಆ್ಯಂಟಿ ವೈರಲ್‌ ಮತ್ತು ಶಿಲೀಂಧ್ರಗಳಿಂದ ಉಂಟಾಗಿರುವುದಕ್ಕೆ ಆ್ಯಂಟಿ ಫ‌ಂಗಲ್‌ ಔಷಧಗಳನ್ನು ನೀಡಲಾಗುತ್ತದೆ. ಐವಿ ಫ‌ೂಯಿಡ್‌, ಆಕ್ಸಿಜನ್‌ ಥೆರಪಿ ಮತ್ತು ಕೃತಕ ಶ್ವಾಸೋಚ್ಛಾ ಸಹಾಯವೂ ಬೇಕಾಗಬಹುದು, ಇದು ರೋಗಿಯ ಸ್ಥಿತಿಯ ಗಂಭೀರತೆಯನ್ನು ಆಧರಿಸಿರುತ್ತದೆ.

ಆಸ್ಪತ್ರೆಗೆ ದಾಖಲಾದ ಬಳಿಕ ಉಂಟಾಗುವ ನ್ಯುಮೋನಿಯಾ ಮತ್ತು ಮನೆಯಲ್ಲಿ ಉಂಟಾಗುವ ನ್ಯುಮೋನಿಯಾ – ಎರಡೂ ಒಂದೆಯೇ ಅಥವಾ ಭಿನ್ನವೇ?
ಇಲ್ಲ. ಇಲ್ಲಿ ನ್ಯುಮೋನಿಯಾವನ್ನು ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಅವಲಂಬಿಸಿ ಇವೆರಡೂ ಬೇರೆ ಬೇರೆಯಾಗಿರುತ್ತವೆ. ಆಸ್ಪತ್ರೆಯಲ್ಲಿ ಇರುವ ಬ್ಯಾಕ್ಟೀರಿಯಾಗಳು ಸಾಮಾನ್ಯ ಆ್ಯಂಟಿ ಬಯಾಟಿಕ್‌ ಔಷಧಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಯಿಸಿಕೊಂಡಿರುವ ಕಾರಣದಿಂದ ಆಸ್ಪತ್ರೆಯಲ್ಲಿ ಉಂಟಾಗುವ ನ್ಯುಮೋನಿಯಾವನ್ನು ಚಿಕಿತ್ಸೆಗೊಳಪಡಿಸಿ ಗುಣಪಡಿಸುವುದು ಹೆಚ್ಚು ಕಷ್ಟವಾಗಿರುತ್ತದೆ.

ಮನೆಯಲ್ಲಿಯೇ ಇದ್ದು ನ್ಯುಮೋನಿಯಾವನ್ನು ನಿಭಾಯಿಸಬಹುದೇ?
ಇದು ರೋಗಿಯ ವೈದ್ಯಕೀಯ ಸ್ಥಿತಿಗತಿಯನ್ನು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಬೆಳೆಸಿಕೊಳ್ಳುವ ಅಪಾಯವನ್ನು ಅವಲಂಬಿಸಿರುತ್ತದೆ. ಮನೆಯಲ್ಲಿಯೇ ನ್ಯುಮೋನಿಯಾಕ್ಕೆ ಚಿಕಿತ್ಸೆ ಒದಗಿಸುವುದಾಗಿ ನಿಮಗೆ ನೀವೇ ನಿರ್ಣಯಿಸಿಕೊಳ್ಳಬೇಡಿ. ನಿಮ್ಮ ವೈದ್ಯರ ಸಲಹೆ ಪಡೆಯಿರಿ; ಅವರು ನಿಮ್ಮ ಆರೋಗ್ಯ ಸ್ಥಿತಿಗತಿಯನ್ನು ಗಮನದಲ್ಲಿ ಇರಿಸಿಕೊಂಡು ಸೂಕ್ತ ಸಲಹೆಗಳನ್ನು ನೀಡುತ್ತಾರೆ.

ನ್ಯುಮೋನಿಯಾ ಗುಣ ಹೊಂದುವುದನ್ನು ಯಾವಾಗ ನಿರೀಕ್ಷಿಸಬಹುದು?
ಜ್ವರ ಮತ್ತು ಉಸಿರಾಡಲು ಕಷ್ಟವಾಗುವುದು ಸಾಮಾನ್ಯವಾಗಿ 2-3 ದಿನಗಳಲ್ಲಿ ಔಷಧಕ್ಕೆ ಪ್ರತಿಸ್ಪಂದಿಸಿ ಗುಣ ಕಾಣುತ್ತದೆ. ಕಫ‌ವು ಸಾಮಾನ್ಯವಾಗಿ ಮೂರ್ನಾಲ್ಕು ವಾರಗಳ ತನಕ ಇರುತ್ತದೆ. ನ್ಯುಮೋನಿಯಾ ಉಂಟಾದ ಬಳಿಕ ಕೆಲವರಿಗೆ ಕೆಲವು ವಾರಗಳ ವರೆಗೆ ದಣಿವು, ದೌರ್ಬಲ್ಯ ಇರುತ್ತದೆ.

ಇದನ್ನೂ ಓದಿ:ಆರೋಗ್ಯ ಕೇಂದ್ರದಲ್ಲಿ ಕೈಕೊಟ್ಟ ವಿದ್ಯುತ್! ಮೊಬೈಲ್ ಬೆಳಕಿನಲ್ಲೇ ನಡೆಯಿತು ಹೆರಿಗೆ

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ನ್ಯುಮೋನಿಯಾದ ಲಕ್ಷಣಗಳು ಕಂಡುಬಂದರೆ, ಅದರಲ್ಲೂ ವಿಶೇಷವಾಗಿ ನೀವು ನ್ಯುಮೋನಿಯಾಕ್ಕೆ ಒಳಗಾಗುವ ಹೆಚ್ಚು ಅಪಾಯವುಳ್ಳ ವ್ಯಕ್ತಿಯಾಗಿದ್ದಲ್ಲಿ ನೀವು ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಅದು ಮಾರಣಾಂತಿಕವಾಗುವ ಅಪಾಯವಿದೆ. ನ್ಯುಮೋನಿಯಾವನ್ನು ತಡೆಯುವ ಲಸಿಕೆಯನ್ನೂ ವೈದ್ಯರು ನಿಮಗೆ ಶಿಫಾರಸು ಮಾಡಬಹುದಾಗಿದೆ.

ನ್ಯುಮೋನಿಯಾ ಸೋಂಕನ್ನು ತಡೆಯುವುದಕ್ಕೆ ನಾನು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು?
ಸಾಮಾನ್ಯ ಕ್ರಮಗಳು: ನೀರು ಮತ್ತು ಸಾಬೂನು ಉಪಯೋಗಿಸಿ ಕೈಗಳನ್ನು ಸ್ವತ್ಛವಾಗಿ ತೊಳೆದುಕೊಳ್ಳುವುದು ಅಥವಾ ಆಗಾಗ ಮದ್ಯಸಾರಯುಕ್ತ ಹ್ಯಾಂಡ್‌ ರಬ್‌ ಉಪಯೋಗಿಸುವುದು ಸೂಕ್ತ. ಮಧುಮೇಹ, ಅಸ್ತಮಾ, ಮೂತ್ರಪಿಂಡ ಕಾಯಿಲೆಗಳು, ಪಿತ್ತ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ನ್ಯುಮೋನಿಯಾ ಉಂಟಾಗದಂತೆ ತಡೆಯುವುದಕ್ಕೂ ಸಹಕಾರಿಯಾಗಿದೆ. ನಿಮಗೆ ನ್ಯುಮೋನಿಯಾ ಲಕ್ಷಣಗಳಿದ್ದಲ್ಲಿ ಕೆಮ್ಮುವಾಗ ಅಥವಾ ಸೀನುವ ಸಂದರ್ಭದಲ್ಲಿ ಮೂಗು ಮತ್ತು ಬಾಯಿಗಳನ್ನು ಕರವಸ್ತ್ರ ಅಥವಾ ಕೈಗಳಿಂದ ಮುಚ್ಚಿಕೊಳ್ಳಬೇಕು. ಇದರಿಂದ ರೋಗವು ನಿಮ್ಮ ಕುಟುಂಬ ಸದಸ್ಯರು ಅಥವಾ ಜತೆಗಿದ್ದವರಿಗೆ ಹರಡುವುದನ್ನು ತಪ್ಪಿಸಬಹುದು.

ವಯಸ್ಕರಲ್ಲಿ ನ್ಯುಮೋನಿಯಾ ಉಂಟಾಗುವುದನ್ನು ತಡೆಯುವುದಕ್ಕೆ ಯಾವುದಾದರೂ ಲಸಿಕೆಗಳು ಇವೆಯೇ?
ಇದೆ. ಸಾಮಾನ್ಯವಾಗಿ ನ್ಯುಮೋನಿಯಾವನ್ನು ಉಂಟು ಮಾಡುವ ಸ್ಟ್ರೆಪ್ಟೊಕಾಕಸ್‌ ನ್ಯುಮೋನಿಯಾಯಿ ಬ್ಯಾಕ್ಟೀರಿಯಾದ ವಿರುದ್ಧ ಲಸಿಕೆಗಳು ಲಭ್ಯವಿವೆ. ನ್ಯುಮೋನಿಯಾ ಸೋಂಕು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ಹೆಚ್ಚಿಸಬಲ್ಲ ಇನ್‌ಫ‌ುಯೆಂಜಾ ವಿರುದ್ಧವೂ ಲಸಿಕೆ ಇದೆ. ಲಸಿಕೆಯ ಬೆಲೆಯು ಸಾಮಾನ್ಯವಾಗಿ 1,000 ರೂ.ಗಳಿಂದ 3,000 ರೂ.ಗಳ ವರೆಗೆ ಇರುತ್ತದೆ. ನಿಮ್ಮ ವಯಸ್ಸು ಮತ್ತು ನಿಮಗೆ ಈಗಾಗಲೇ ಇರುವ ಅನಾರೋಗ್ಯಗಳನ್ನು ಗಣನೆಯಲ್ಲಿ ಇರಿಸಿಕೊಂಡು ವೈದ್ಯರು ನಿಮಗೆ ಲಸಿಕೆಯನ್ನು ಶಿಫಾರಸು ಮಾಡುತ್ತಾರೆ.

ಈ ಲಸಿಕೆಗಳನ್ನು ಯಾವಾಗ, ಎಷ್ಟು ತೆಗೆದುಕೊಳ್ಳಬೇಕು?
ಸಮುದಾಯದಲ್ಲಿ ಇರುವ ನ್ಯುಮೋನಿಯಾ ಬ್ಯಾಕ್ಟೀರಿಯಾವು ಪರಿವರ್ತನೆ ಹೊಂದುತ್ತಲೇ ಇರುವುದರಿಂದ ಲಸಿಕೆಯನ್ನು ಪ್ರತೀವರ್ಷ ತೆಗೆದುಕೊಳ್ಳಬೇಕಾಗುತ್ತದೆ. ನ್ಯುಮೊಕಾಕಲ್‌ ಲಸಿಕೆಯನ್ನು ಮೂರು ಬಾರಿ ಪ್ರತೀ ಐದು ವರ್ಷಗಳಿಗೊಮ್ಮೆ ತೆಗೆದುಕೊಳ್ಳಬೇಕು, ಆ ಬಳಿಕ ಅದರ ಪರಿಣಾಮಕಾರಿತ್ವ ಕಡಿಮೆಯಾಗುತ್ತ ಹೋಗುತ್ತದೆ.

ಲಸಿಕೆಯನ್ನು ತೆಗೆದುಕೊಂಡ ಬಳಿಕ ನನಗೆ ನ್ಯುಮೋನಿಯಾ ತಗಲುವುದಿಲ್ಲವೇ? ಈ ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿವೆ?
ಇಲ್ಲ. ಸ್ಟ್ರೆಪ್ಟೊಕಾಕಸ್‌ ನ್ಯುಮೋನಿಯಾಯಿ ಬ್ಯಾಕ್ಟೀರಿಯಾ ಮತ್ತು ಇನ್‌ಫ‌ುಯೆಂಜಾದಿಂದ ಉಂಟಾಗುವ ನ್ಯುಮೋನಿಯಾಗಳನ್ನು ಮಾತ್ರ ಈ ಲಸಿಕೆಗಳು ತಡೆಯುತ್ತವೆ. ನ್ಯುಮೋನಿಯಾವನ್ನು ಉಂಟು ಮಾಡುವ ಇನ್ನೂ ಅನೇಕ ಸೂಕ್ಷ್ಮಜೀವಿಗಳಿದ್ದು, ಈ ಎಲ್ಲವುಗಳಿಂದಲೂ ರಕ್ಷಣೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ನ್ಯುಮೊಕಾಕಲ್‌ ಲಸಿಕೆಗಳಿಂದ ನ್ಯುಮೋನಿಯಾ ಉಂಟಾಗಿ ಆಸ್ಪತ್ರೆಗೆ ದಾಖಲಾಗುವುದು ಮತ್ತು ಮರಣ ಹೊಂದುವುದರಿಂದ ಶೇ.40ರಷ್ಟು ಮಾತ್ರ ಇಳಿಕೆ ಉಂಟಾಗಿದೆ ಎಂಬುದಾಗಿ ಅಧ್ಯಯನಗಳ ಅಂಕಿಅಂಶಗಳು ಹೇಳುತ್ತವೆ.

ಡಾ| ಫ‌ರ್ಹಾನ್‌ ಫ‌ಜಲ್‌
ಕನ್ಸಲ್ಟೆಂಟ್‌, ಸೋಂಕು ರೋಗಗಳುಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.