ಅಂಟಾರ್ಟಿಕದಲ್ಲಿ ಬಿರುಕು: ವಿಶ್ವದ ಬೃಹತ್ ಹಿಮಗಡ್ಡೆ ಸೃಷ್ಟಿ
ವೆಡ್ಡೆಲ್ ಸಮುದ್ರದತ್ತ ತೇಲಿಹೋಗುತ್ತದೆ ದ್ವೀಪದಷ್ಟು ದೊಡ್ಡದಾದ ಗಡ್ಡೆ
Team Udayavani, May 19, 2021, 10:58 PM IST
ನವದೆಹಲಿ: ಅಂಟಾರ್ಟಿಕ ಖಂಡದಲ್ಲಿ ಒಂದು ಬೃಹತ್ ದ್ವೀಪದಷ್ಟು ದೊಡ್ಡದಾದ ಹಿಮಗಡ್ಡೆಯೊಂದು, ಬೇರ್ಪಟ್ಟಿದೆ. ಮೂಲ ಹಿಮರಾಶಿಯಿಂದ ಬೇರ್ಪಟ್ಟ ವಿಶ್ವದ ಬೃಹತ್ ಹಿಮಗಡ್ಡೆ ಇದೆಂದು ಹೇಳಲಾಗಿದೆ. ಈ ಘಟನೆ ನಡೆದಿರುವುದು ರಾನ್ ಹಿಮಶ್ರೇಣಿಯ ಪಶ್ಚಿಮಭಾಗದಲ್ಲಿ. ಸದ್ಯ ಹೀಗೆ ಬೇರ್ಪಟ್ಟ ಹಿಮಗಡ್ಡೆ ವೆಡ್ಡೆಲ್ ಸಮುದ್ರದ ಬಳಿಗೆ ತೇಲಿಕೊಂಡು ಹೋಗುತ್ತಿದೆ.
ಇದರ ಗಾತ್ರ 170 ಕಿ.ಮೀ. ಉದ್ದ, 25 ಕಿ.ಮೀ. ಅಗಲ. ಇದು ಸ್ಪೇನಿನ ಮಜೋರ್ಕಾ ದ್ವೀಪದ ಗಾತ್ರಕ್ಕೆ ಸಮ. ನ್ಯೂಯಾರ್ಕ್‌ನ ಲಾಂಗ್ ದ್ವೀಪಕ್ಕಿಂತ ದೊಡ್ಡದು, ಪ್ಯೂಯೆರ್ಟಿರಿಕೊ ದ್ವೀಪದ ಅರ್ಧದಷ್ಟಾಗಿದೆ. ಈಗ ಇದರ ವಿಸ್ತಾರವನ್ನು ಊಹಿಸಿ! ನಿಧಾನಕ್ಕೆ ಅಂಟಾರ್ಟಿಕದಲ್ಲಿ ಹಿಮಕರಗುತ್ತಿದೆ. ಇದರಿಂದ ವೆಡ್ಡೆಲ್ ಸಮುದ್ರದ ಆಸುಪಾಸು ನೀರ್ಗಲ್ಲುಗಳು ಹಿಂದೆ ಸರಿಯುತ್ತಿವೆ. ಇದರ ಪರಿಣಾಮ ಬೃಹತ್ ಹಿಮಗಡ್ಡೆಗಳ ತುಣುಕುಗಳು ತೇಲಿಕೊಂಡು ಹೋಗುತ್ತಿವೆ.
ಇದನ್ನೂ ಓದಿ :ಅಧಿಕಾರ ದುರಪಯೋಗ, ಕರ್ತವ್ಯಲೋಪ : ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಅಮಾನತು
ಕಳೆದವರ್ಷವೂ ಇಂತಹದ್ದೇ ಘಟನೆ ಅಂಟಾರ್ಟಿಕದ ದಕ್ಷಿಣ ಜಾರ್ಜಿಯ ಕರಾವಳಿ ತೀರದಲ್ಲಿ ನಡೆದಿತ್ತು. ಆಗ ವಿಜ್ಞಾನಿಗಳು ಈ ಹಿಮಗಡ್ಡೆ ಪೆಂಗ್ವಿನ್, ಸಮುದ್ರದ ಸಿಂಹಗಳ ತಾಣವಾದ ದ್ವೀಪವೊಂದಕ್ಕೆ ಡಿಕ್ಕಿ ಹೊಡೆದು ಅನಾಹುತಕ್ಕೆ ಕಾರಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಅದೃಷ್ಟವಶಾತ್ ಹಾಗಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.