Most polluted;ವಿಶ್ವದಲ್ಲೇ ಅತಿ ಮಲಿನ ನಗರವಿದು: ಮಾಸ್ಕ್ ಕಡ್ಡಾಯ, ಶಾಲೆಗೆ ರಜೆ!
ಇತಿಹಾಸದಲ್ಲೇ ಮೊದಲಿಗೆ ವಾಯು ಗುಣಮಟ್ಟ ಸೂಚ್ಯಂಕ 1900ರ ದಾಖಲೆ
Team Udayavani, Nov 5, 2024, 6:45 AM IST
ಇಸ್ಲಾಮಾಬಾದ್: ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದಲ್ಲಿ 1900 ದಾಖಲೆ ಜತೆ ಸೋಮವಾರ, ಪಾಕಿಸ್ತಾನದ ಲಾಹೋರ್ ವಿಶ್ವದ ಅತಿ ಮಲಿನ ನಗರ ಎನಿಸಿಕೊಂಡಿ ದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಲಾಹೋರ್ನಲ್ಲಿ ಈ ಮಟ್ಟದ ಮಾಲಿನ್ಯ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ, ಲಾಹೋರ್ನಲ್ಲಿ “ಹಸಿರು ಲಾಕ್ಡೌನ್’ ಮಾಡಲಾಗಿದ್ದು, ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫÅಮ್ ಹೋಮ್ ನೀಡಲಾಗಿದೆ. 5ನೇ ತರಗತಿ ವರೆಗೆ ಎಲ್ಲಾ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಅನವಶ್ಯ ಕವಾಗಿ ಪ್ರಯಾಣಿಸದಂತೆ ಸೂಚಿಲಾಗಿದೆ. ತ್ರಿಚಕ್ರ ವಾಹನ(ರಿಕ್ಷಾ)ಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಆಸ್ಪತ್ರೆಗಳಲ್ಲಿ ಸ್ಮಾಗ್ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ.
ಮಾಲಿನ್ಯಕ್ಕೆ ಭಾರತ ಕಾರಣ: ಸಚಿವೆ!
ಲಾಹೋರ್ ಮಾಲಿನ್ಯಕ್ಕೆ ಭಾರತದಿಂದ ಬೀಸುತ್ತಿರುವ ಗಾಳಿ ಕಾರಣ ಎಂದು ಪಂಜಾಬ್ ಪ್ರಾಂತ್ಯದ ಸಚಿವೆ ಮರಿಯಮ್ ಔರಂಗಜೇಬ್ ಆರೋಪಿಸಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ಮೂಲಕ ಭಾರತದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ. ಜತೆಗೆ, ದಿಲ್ಲಿಯಲ್ಲಿ ಸೋಮವಾರ ಎಕ್ಯೂಐ 373ರೊಂದಿಗೆ “ಅತಿ ಕಳಪೆ’ ಮಟ್ಟಕ್ಕೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.