ವುಹಾನ್ ಲ್ಯಾಬ್ ಎಂಬ ವೈರಸ್ ತಾಣ
Team Udayavani, Apr 22, 2020, 10:27 AM IST
ಚೀನಾದ ವುಹಾನ್‌ನಲ್ಲಿ ಶುರವಾದ ಕೋವಿಡ್ ವೈರಸ್ ಈಗ ಜಗತ್ತಿನಲ್ಲಿ ಹರಡಿದೆ. ವುಹಾನ್‌ನ ಪ್ರಯೋಗ ಶಾಲೆಯಲ್ಲಿಯೇ ಅದನ್ನು ಸೃಷ್ಟಿಸಲಾಗಿದೆ ಎಂಬ ವಾದಗಳು ಈಗ ಜೋರಾಗಿಯೇ ಕೇಳಿ ಬರುತ್ತಿದೆ. ಅಲ್ಲಿನ ಮಾರುಕಟ್ಟೆಯೇ ವೈರಸ್ ಕೇಂದ್ರ ಸ್ಥಾನ ಎಂಬ ವಾದ ಒಂದೆಡೆಯಾದರೆ, ಅಲ್ಲಿರುವ ಪ್ರಯೋಗಾಲಯದಿಂದ ವೈರಸ್ ಸೋರಿಕೆಯಾಗಿರಬಹುದೇ ಎಂಬ ಮತ್ತೂಂದು ವಾದವೂ ಇದೆ. ಅಲ್ಲಿನ ಲ್ಯಾಬ್ ಬಗ್ಗೆ ಮಾಹಿತಿ ಇಲ್ಲಿದೆ.
2015 ಲ್ಯಾಬ್ ನಿರ್ಮಾಣ
2018 ಕಾರ್ಯ ಆರಂಭ
42 ದಶ ಲಕ್ಷ ಡಾಲರ್ ನಿರ್ಮಾಣ ವೆಚ್ಚ
32,000 ಚದರ ಅಡಿ. ಪಿ4 ಲ್ಯಾಬ್ ನ ವಿಸ್ತೀರ್ಣ
ಇದು ಎಲ್ಲಿದೆ?
ಚೀನಾದ ವುಹಾನ್ ನಗರದ ಹೊರವಲಯದಲ್ಲಿ ದಟ್ಟಾರಣ್ಯವನ್ನು ಒಳಗೊಂಡ ಪರ್ವತ ಪ್ರದೇಶದಲ್ಲಿ
ಅತ್ಯಧಿಕ ಸುರಕ್ಷತೆ
ಅಧ್ಯಯನಕ್ಕೆಂದೇ ವೈರಸ್‌ಗಳ ಸಂಗ್ರಹ. ಹಿಂದೆ ಪತ್ತೆಯಾಗಿರುವ ಕೊರೊನಾ ವೈರಸ್‌ಗಳ ಮಾದರಿಗಳು ಇಲ್ಲಿವೆ.
ಲ್ಯಾಬ್‌ನಿಂದ ಹೊರ ಹೋಗುವ ಗಾಳಿ, ನೀರನ್ನು ಸಂಸ್ಕರಣೆ ಮಾಡಿ ಹೊರ ಬಿಡಲಾಗುತ್ತದೆ.
ಲ್ಯಾಬ್‌ನಲ್ಲಿ ಸಂಶೋಧಕರು ತಮ್ಮ ಉಡುಪುಗಳನ್ನು ಬದಲಿಸಬೇಕು ಮತ್ತು ಸ್ನಾನ ಮಾಡಬೇಕು.
ವಿಜ್ಞಾನಿಗಳ ಅಭಿಪ್ರಾಯ ಏನಿದೆ?
1. ಅಪಾಯದಂಚಿನಲ್ಲಿರುವ ಪಂಗೋಲಿನ್ ಎಂಬ ಪ್ರಾಣಿಯನ್ನು ಔಷಧ ತಯಾರಿಕೆಗಾಗಿ ಚೀನದಲ್ಲಿ ಕಳ್ಳಸಾಗಣೆ ಮಾಡಲಾಗುತ್ತದೆ. ಅದರ ಮೂಲಕ ವೈರಸ್ ಮಾನವನ ದೇಹ ಸೇರಿರಬಹುದು.
2. ಲ್ಯಾಬ್‌ನಲ್ಲಿಯೇ ವೈರಸ್ ಸೋರಿಕೆಯಾಗಿದೆ ಎಂಬ ವಾದಕ್ಕೆ ಹೇಗೆ ಸಾಕ್ಷ್ಯ ಸಿಗುತ್ತಿಲ್ಲವೋ, ವುಹಾನ್ ಮಾರುಕಟ್ಟೆಯೇ ವೈರಸ್ ನ ಮೂಲ ಎಂಬುದು ಕೂಡ ಸಾಬೀತಾಗಿಲ್ಲ ಎನ್ನುತ್ತಾರೆ ಲಂಡನ್ ಸಂಶೋಧಕರು.
ಅಮೆರಿಕದ ಆರೋಪವೇನು?
– ಪ್ರಯೋಗಾಲಯದಿಂದಲೇ ಆಕಸ್ಮಿಕವಾಗಿ ಸೋರಿಕೆಯಾಗಿರಬಹುದು.
– ಚೀನಾ ಸರಕಾರವು ಇತರ ದೇಶಗಳ ವಿಜ್ಞಾನಿಗಳಿಗೆ ಅವಕಾಶ ಏಕೆ ನೀಡುತ್ತಿಲ್ಲ?
– ವೈರಸ್‌ಗಳನ್ನು ನಿಭಾಯಿಸುವ ಸುರಕ್ಷತಾ ಮಾನದಂಡಗಳು ಸಾಕಷ್ಟಿಲ್ಲ.
– ವೈರಸ್‌ನ ಕಣ ಹೇಗೋ ವುಹಾನ್‌ಗೆ ಸೇರಿ ಅಲ್ಲಿನ ಜನಕ್ಕೆ ವರ್ಗಾವಣೆಯಾಗಿರಬಹುದು
ಲ್ಯಾಬ್ ನಿರ್ದೇಶಕರ ವಾದ?
* ವೈರಸ್ ಮಾದರಿ ನಮ್ಮ ಕೈಸೇರಿದ್ದು ಡಿ.30ಕ್ಕೆ. ಜ.11ರಂದೇ ಡಬ್ಲ್ಯೂಎಚ್‌ಒಗೆ ಮಾಹಿತಿ ನೀಡಿದ್ದೇವೆ.
* ಪಿ4 ಲ್ಯಾಬ್ ನ ಮೂಲಕ ವೈರಸ್ ಸೋರಿಕೆಯಾಗಿದ್ದಕ್ಕೆ ಪುರಾವೆ ಇಲ್ಲವೆಂದು ಡಬ್ಲ್ಯೂಎಚ್‌ಒ ಹೇಳಿದೆ.
* ಕೆಲವು ದೇಶಗಳು ನಮ್ಮ ಮೇಲೆ ಆರೋಪ ಹೊರಿಸುತ್ತಿದೆ. ಇದೊಂದು ಸಂಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.