ಯಾದಗಿರಿ: ಸೋಂಕಿತರ ಸಂಖ್ಯೆ 916ಕ್ಕೆ ಏರಿಕೆ
ಸುರಪುರ ಸಾರಿಗೆ ಘಟಕದ ಚಾಲಕರಿಗೂ ಸೋಂಕು
Team Udayavani, Jun 26, 2020, 9:37 PM IST
ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದ ಸಂಪರ್ಕದಿಂದ ಹರಡುತ್ತಿದ್ದ ಸೋಂಕು, ಇದೀಗ ಸೋಂಕಿತರ ಸಂಪರ್ಕದಿಂದಲೂ ಹಬ್ಬುತ್ತಿದೆ. ಜೂನ್ 19ರಂದು ಸುರಪುರ ಸಾರಿಗೆ ಘಟಕದ 31 ವರ್ಷದ ಚಾಲಕ ( ಪಿ-8228)ಗೆ ಆತನ ಪತ್ನಿಯಿಂದ ಸೋಂಕು ದೃಢವಾಗಿತ್ತು, ಅವರ ಸಂಪರ್ಕದಿಂದ ಈಗ ಸುರಪುರ ಸಾರಿಗೆ ಘಟಕದ ನಾಲ್ವರು ಸಿಬ್ಬಂದಿಗಳಲ್ಲಿ ಸೋಂಕು ಹರಡಿದೆ.
ಚಾಲಕನ ಸಂಪರ್ಕಕ್ಕೆ ಬಂದಿದ್ದ 8 ಜನರನ್ನು ಕ್ವಾರಂಟೈನ್‌ನಲ್ಲಿರಿಸಿ, ಘಟಕವನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಇದೀಗ ಸುರಪುರ ಬಸ್ ಡಿಪೋದ 58 ವರ್ಷದ ಪುರುಷ (ಪಿ-10657), 54 ವರ್ಷದ ಪುರುಷ (ಪಿ-10658), 44 ವರ್ಷದ ಪುರುಷ (ಪಿ-10659) ಹಾಗೂ 50 ವರ್ಷದ ಪುರುಷ (ಪಿ-10660)ಗೆ ಸೋಂಕು ದೃಢವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಇನ್ನು ಶಹಾಪುರ ತಾಲೂಕಿನ ಹೋತಪೇಟ ಗ್ರಾಮದ 35 ವರ್ಷದ ಪುರುಷ (ಪಿ-10655), ಸುರಪುರ ತಾಲೂಕಿನ ಲಕ್ಷ್ಮೀ ದೇವಸ್ಥಾನ ಸಮೀಪದ 55 ವರ್ಷದ ಮಹಿಳೆ (ಪಿ-10656), ಹುಣಸಗಿ ಲಕ್ಷ್ಮೀ ದೇವಸ್ಥಾನ ಸಮೀಪದ 53 ವರ್ಷದ ಪುರುಷ (ಪಿ-10661) ಕೋವಿಡ್ 19 ಸೋಂಕಿಗೆ ತುತ್ತಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-10655 ಮತ್ತು ಪಿ-10656ರ ವ್ಯಕ್ತಿಗಳು ಮಹಾರಾಷ್ಟ್ರದ ಪುಣೆ ಹಾಗೂ ಮುಂಬಯಿನಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ. ಪಿ-10661 ಐಎಲ್‌ಐ ಪ್ರಕರಣವಾಗಿದ್ದು ಒಟ್ಟು 7 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ916ಕ್ಕೆ ಏರಿಕೆಯಾಗಿದೆ.
70 ಜನ ಗುಣಮುಖ: ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 916 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ 70 ಜನ ಸೇರಿ ಈವರೆಗೆ ಒಟ್ಟು 785 ಜನ ಗುಣಮುಖರಾಗಿದ್ದು ಉಳಿದ 130 ಪ್ರಕರಣಗಳು ಸಕ್ರಿಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.