Yakshagana Jayarama Acharya: ‘ಆರೋಗ್ಯಕರ ಹಾಸ್ಯ ಹಂಚಿದ ಕಲಾವಿದ ಜಯರಾಮಣ್ಣ’

ಜಯರಾಮಣ್ಣರ ಹಾಸ್ಯದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇರ್ತಿತ್ತು: ಹಿರಿಯ ಕಲಾವಿದ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ನುಡಿನಮನ

Team Udayavani, Oct 22, 2024, 7:50 AM IST

jayarama-Acharya

ಬಂಟ್ವಾಳ: ಹಲವು ದಶಕಗಳ ಕಾಲ ಯಕ್ಷ ರಂಗದ ಹಾಸ್ಯ ಲೋಕವನ್ನು ಆಳಿದ ಮೇರು ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಪರಂಪರೆಯ ಛಾಯೆಯನ್ನು ಬಿಡದೆ ಈಗಿನ ತಲೆಮಾರಿಗೆ ಒಗ್ಗುವಂಥ ಆರೋಗ್ಯ ಪೂರ್ಣ ಹಾಸ್ಯವನ್ನು ಸಮಾಜಕ್ಕೆ ತಲುಪಿಸಿದ ಹೆಗ್ಗಳಿಕೆ ಹೊಂದಿದ್ದು, ಅವರ ಅಗಲುವಿಕೆ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ. ಕೆಲವು ಪ್ರಸಂಗ-ಪಾತ್ರಗಳಿಗೆ “ಜಯರಾಮಣ್ಣನೇ ಬೇಕು’ ಎಂಬಂಥ ಬೇಡಿಕೆಯ ಕಲಾವಿದರಾಗಿದ್ದರು.

ಎಂದಿಗೂ ಹಾಸ್ಯದಲ್ಲಿ ಯಕ್ಷ ಪರಂಪರೆಯನ್ನು ಮೀರಿದವರಲ್ಲ. ಹಾಗಂತ ಅದೇ ಹಿಂದಿನ ಹಳೆಯ ಹಾಸ್ಯವನ್ನೇ ನೀಡುತ್ತಿದ್ದವರೂ ಅಲ್ಲ. ಈಗಿನ ಸಮುದಾಯಕ್ಕೂ ಹಿತವಾಗುವ ಹಾಸ್ಯವನ್ನು ತಲುಪಿಸುತ್ತಿದ್ದು, ಹೀಗಾಗಿ ಜಯರಾಮಣ್ಣರ ಹಾಸ್ಯವನ್ನು ಪ್ರೇಕ್ಷಕರು ಯಾವತ್ತೂ ಸ್ವೀಕರಿಸುತ್ತಿದ್ದರು. ಅವರ ಹಾಸ್ಯದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇತ್ತು ಎಂದೂ ರಂಗದಲ್ಲಿ ರಾಜಕೀಯ ಮಾತನಾಡಿದವರಲ್ಲ.

ಅತ್ಯುತ್ತಮ ಲಯ ಜ್ಞಾನದ ಹಾಸ್ಯ ಕಲಾವಿದ
ಪ್ರತಿಸ್ಪಂದನೆ, ಪ್ರತ್ಯುತ್ಪನ್ನಮತಿ ಇದ್ದ ಹಾಸ್ಯ ಕಲಾವಿದರಾಗಿದ್ದು, ಅಪಾರ ಅಭಿಮಾನಿ ವರ್ಗವೇ ಅವರ ದೊಡ್ಡ ಸಂಪಾದನೆಯಾಗಿತ್ತು. ಮಿಜಾರು ಅಣ್ಣಪ್ಪ, ಪುಳಿಂಚದವರ ಸಮಯದಲ್ಲೇ ಹಾಸ್ಯದಲ್ಲಿ ಹೆಸರು ಮಾಡಿದ್ದ ಜಯರಾಮಣ್ಣ, ಆ ಬಳಿಕ ತೆಂಕುತಿಟ್ಟಿನ ಹಾಸ್ಯ ಕಲಾವಿದರಲ್ಲಿ ಅಗ್ರಮಾನ್ಯರಾಗಿ ಗುರುತಿಸಿಕೊಂಡಿದ್ದರು. ಅತ್ಯುತ್ತಮ ಲಯ ಜ್ಞಾನದ ಹಾಸ್ಯ ಕಲಾವಿದರಾಗಿದ್ದ ಅವರು ನಾಟ್ಯಕ್ಕೆ ವಿಶೇಷ ಪ್ರಾಶಸ್ತ್ಯ ಕೊಡದೇ ಇದ್ದರೂ ತನ್ನ ಮಾತಿನ ಶೈಲಿಯ ಮೂಲಕ ಕಲಾಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದ್ದರು.

ನಾನು ಕೂಡ ಸಾಕಷ್ಟು ಯಕ್ಷಗಾನಗಳನ್ನು ಸಂಘಟನೆ ಮಾಡುತ್ತಿದ್ದು, ಆಗ ಜಯರಾಯ ಆಚಾರ್ಯರು ಇದ್ದಾರಾ ಎಂದು ಕೇಳಿ ಬರುವವರು ದೊಡ್ಡ ಸಂಖ್ಯೆಯಲ್ಲಿದ್ದರು. ಮೇಳದ ಪ್ರಸಂಗದ ಸಂದರ್ಭದಲ್ಲೂ ಅವರ ಪಾತ್ರದ ಕುರಿತು ಅಭಿಮಾನಿಗಳು ವಿಚಾರಿಸುವ ಮೇರು ಕಲಾವಿದ ಅವರಾಗಿದ್ದರು. ಸಾಕಷ್ಟು ಪ್ರಸಂಗಗಳಲ್ಲಿ ಹಿರಿಯ ಕಲಾವಿದರು ಅವರಲ್ಲಿ ಸಲಹೆ ಪಡೆಯುತ್ತಿದ್ದರು. ಪಾತ್ರವೊಂದು ಅವರಿಗೆ ಇಷ್ಟವಾಗಿದೆ ಎಂದರೆ ಅವರ ಅಭಿನಯ ಮನೋಜ್ಞ ವಾಗಿರುತ್ತಿತ್ತು.

ಆರೋಗ್ಯ ತೊಂದರೆ ಪರಿಣಾಮ ಅಭಿನಯದಲ್ಲಿ ಬದಲಾವಣೆ:
ವೇಷಭೂಷಣ ಸಾಮಾನ್ಯವಾಗಿದ್ದರೂ, ಲೌಕಿಕ ಜೀವನದಲ್ಲಿ ವಸ್ತ್ರ ಸಂಹಿತೆಗೆ ವಿಶೇಷ ಮಹತ್ವ ನೀಡುತ್ತಿದ್ದರು. ಯಕ್ಷಗಾನಕ್ಕೆ ಬರುವಾಗ ಅವರು ಉಡುಗೆ ತೊಡುಗೆಯೇ ಅವರಿಗೆ ಹೊಸ ಘನತೆ ತರಿಸುತ್ತಿತ್ತು. ಅದನ್ನು ನೋಡುವುದೇ ವಿಶೇಷವಾಗಿತ್ತು. ಆರೋಗ್ಯ ತೊಂದರೆಯ ಪರಿಣಾಮ ಕಳೆದ 2-3 ವರ್ಷಗಳಲ್ಲಿ ಅವರ ಅಭಿನಯದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು. ಅವರ ಹೃದಯದ ಸಮಸ್ಯೆ ಕುರಿತು ವೈದ್ಯರು ಕೂಡ ಸಲಹೆ ನೀಡಿದ್ದರು. ಕಳೆದ ವರ್ಷ ತಿರುಗಾಟದ ಸಂದರ್ಭ ಆರೋಗ್ಯ ಸಮಸ್ಯೆಯಿಂದ ಅವರ ವೇಷ ಬಾಕಿಯಾದ ಘಟನೆಗಳು ಸಾಕಷ್ಟಿದ್ದು, ಹೀಗಾಗಿ ಅವರಿಗೆ ಮೇಳದಿಂದ ನಿವೃತ್ತಿಯನ್ನೂ ನೀಡಲಾಗಿತ್ತು.

– ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ (ಯಕ್ಷಗಾನದ ಹಿರಿಯ ಕಲಾವಿದರು)

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.