ಯಶ್ ಧುಲ್ ಸಾಧನೆಗೆ ಕೋಚ್ ಫುಲ್ ಖುಷ್!
Team Udayavani, Feb 8, 2022, 6:20 AM IST
ಹೊಸದಿಲ್ಲಿ: ತಂಡದ ನಾಯಕನ ಯಶಸ್ಸು ಸಹಜ ವಾಗಿಯೇ ಆತನ ಕೋಚ್‌ಗೆ ಅತ್ಯಂತ ಖುಷಿ ಕೊಡುತ್ತದೆ. ಅದು ಕೋಚಿಂಗ್ ಬಾಳ್ವೆಯ ಸಾರ್ಥಕ ಹಾಗೂ ಸ್ಮರಣೀಯ ಕ್ಷಣಗಳು.
ಈಗಾ ಭಾರತದಲ್ಲಿ ಇಂಥದೊಂದು ಸಂಭ್ರ ಮದಲ್ಲಿ ತೇಲಾಡುತ್ತಿರುವವರು ರಾಜೇಶ್ ನಾಗರ್. ಇವರು ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಲ್ ಅವರ ಕೋಚ್.
“ಮುಜೇ ವಿರಾಟ್ ಭಯ್ಯಾ ಜೈಸೆ ಕ್ರಿಕೆಟರ್ ಬನಾನಾ ಹೈ.. (ನಾನು ವಿರಾಟ್ ಕೊಹ್ಲಿಯಂಥ ಕ್ರಿಕೆಟರ್ ಆಗಬೇಕು) ಎಂದು ಶಾಲಾ ದಿನಗಳಲ್ಲಿ ಯಶ್ ಧುಲ್ ಹೇಳುತ್ತಲೇ ಇರುತ್ತಿದ್ದ. ಅವನ ಅಭಿಲಾಷೆಯೀಗ ಈಡೇರುವ ಹಂತದಲ್ಲಿದೆ’ ಎಂದು ರಾಜೇಶ್ ನಾಗರ್ ಹೇಳುತ್ತಾರೆ.
“ಯಶ್ ಧುಲ್ ಭಾರತಕ್ಕಾಗಿ ಖಂಡಿತ ವಿಶ್ವಕಪ್ ಗೆದ್ದು ತರಬಲ್ಲರು ಎಂಬ ನಂಬಿಕೆ ನನ್ನಲ್ಲಿತ್ತು. ಅವನದ್ದು ಯಾವತ್ತೂ ಗೆಲುವಿನ ಹಸಿವು. ಆತನ ಈ ಯಶಸ್ಸು ಎಲ್ಲರಲ್ಲೂ ಹೆಮ್ಮೆ ಮೂಡಿಸಿದೆ. ಅವರ ಕೋಚ್ ಆಗಿರುವ ನನಗೂ ಇದು ಹೆಮ್ಮೆಯ ಕ್ಷಣ. ನಮ್ಮದು ಕೂಟದಲ್ಲೇ ಅತ್ಯಂತ ಬಲಿಷ್ಠ ತಂಡವಾಗಿತ್ತು’ ಎಂದು ನಾಗರ್ ಹೇಳಿದರು.
ಕೊಹ್ಲಿ ರೋಲ್ ಮಾಡೆಲ್
“ಯಶ್‌ಗೆ ವಿರಾಟ್ ಕೊಹ್ಲಿಯೇ ರೋಲ್ ಮಾಡೆಲ್. ಕೊಹ್ಲಿಯ ಆಕ್ರ ಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಈತನಲ್ಲೂ ಕಾಣಬಹುದು. ಅಷ್ಟೇ ಉತ್ತಮ ಫೀಲ್ಡರ್ ಕೂಡ. ಆದರೆ ನಾಯಕತ್ವದಲ್ಲಿ ಧೋನಿಯ ಛಾಯೆ ಇದೆ. ಕಾಮ್ ಆ್ಯಂಡ್ ಕೂಲ್. ಆಟಗಾರರನ್ನು ಬೆಂಬಲಿಸುವಲ್ಲಿ, ಕೆಲವು ದಿಟ್ಟ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಯಶ್ ಯಾವತ್ತೂ ಮುಂದು. ಇಂತಿಂಥ ಆಟಗಾರರು ತಂಡದಲ್ಲಿರಬೇಕು ಎಂದರೆ ಅವರು ಬೇಕೇ ಬೇಕು. ಇಲ್ಲವಾದರೆ ಜಗಳಕ್ಕೇ ನಿಲ್ಲುತ್ತಿದ್ದ. ಬಹುಶಃ ಈ ವಿಷಯದಲ್ಲಿ ಸೌರವ್ ಗಂಗೂಲಿಯೇ ಮಾದರಿ…’ ಎಂದರು.
“ಯಶ್ ಅತ್ಯುತ್ತಮ ಲೀಡರ್. ಓರ್ವ ಅತ್ಯುತ್ತಮ ಲೀಡರ್ ಯಾವತ್ತೂ ಉತ್ತಮ ನಾಯಕ ನಾಗಬಲ್ಲ. ಆದರೆ ಅತ್ಯುತ್ತಮ ನಾಯಕ ಯಾವತ್ತೂ ಉತ್ತಮ ಲೀಡರ್ ಆಗಲಾರ…’ ಎಂದು ಶಿಷ್ಯನ ಕುರಿತು ರಾಜೇಶ್ ನಾಗರ್‌ಅಭಿಪ್ರಾಯಪಡುತ್ತಾರೆ.
ಅಜ್ಜನೊಂದಿಗೆ ಆಗಮನ
“ಯಶ್ ಧುಲ್ 9 ವರ್ಷದ ಬಾಲಕನಾಗಿದ್ದಾಗ ಅಜ್ಜ ಆತನನ್ನು ಹೊಸದಿಲ್ಲಿಯ ದ್ವಾರಕಾದಲ್ಲಿರುವ ಬಾಲಭವನ್ ಸ್ಕೂಲ್ ಕ್ರಿಕೆಟ್ ಅಕಾಡೆಮಿಗೆ ಕರೆತಂದಿದ್ದರು. ಎಲ್ಲ ಬಾಲಕರಂತೆ ಇದ್ದ. ಆದರೆ ಆತನ ಬ್ಯಾಟಿಂಗ್ ಟೆಕ್ನಿಕ್ ಗಮನ ಸೆಳೆಯಿತು. ಎಷ್ಟೇ ಕಠಿನ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ಬಡಿದಟ್ಟುತ್ತಿದ್ದ. ಕೂಡಲೇ ಟೂರ್ನಿಯೊಂದರಲ್ಲಿ ಆಡುವ ಅವಕಾಶ ನೀಡಿದೆ. ಜತೆಗೆ, ಇಲ್ಲಿ ಉತ್ತಮ ಸ್ಕೋರ್ ದಾಖಲಿಸಿದರೆ ನಿನ್ನನ್ನು ಅಕಾಡೆಮಿಗೆ ಸೇರಿಸಿಕೊಳ್ಳುವೆ ಎಂದೆ. ಆತ ಶತಕವನ್ನೇ ಬಾರಿಸಿದ. ಮುಂದಿನದು ಇತಿಹಾಸ…’ ಎಂದು ಶಿಷ್ಯನ ಸಾಹಸವನ್ನು ನೆನಪಿಸಿಕೊಂಡರು ರಾಜೇಶ್‌ನಾಗರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.