ಜನಸಂಖ್ಯೆ ಹೆಚ್ಚಳವು ದೇಶದ ಅಭಿವೃದ್ಧಿಗೆ ಮಾರಕ, ನಿಯಂತ್ರಿಸಬೇಕಾದ ಅಗತ್ಯವಿದೆ : ಯೋಗಿ
Team Udayavani, Jul 11, 2021, 8:15 PM IST
ಲಕ್ನೋ: “ಜನಸಂಖ್ಯೆಯ ಹೆಚ್ಚಳವು ಅಭಿವೃದ್ಧಿಗೆ ಮಾರಕವಾಗಿದ್ದು, ಅದನ್ನು ನಿಯಂತ್ರಿಸಬೇಕಾದ ಅಗತ್ಯವಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿಶ್ವ ಜನಸಂಖ್ಯಾ ದಿನವಾದ ಭಾನುವಾರ ಲಕ್ನೋದಲ್ಲಿ “ಉತ್ತರ ಪ್ರದೇಶ ಜನಸಂಖ್ಯಾ ನೀತಿ 2021-2030′ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ.
ಜನಸಂಖ್ಯೆಯ ಹೆಚ್ಚಳವು ಪ್ರಗತಿಗೆ ಅಡ್ಡಿಯಾಗುತ್ತಲೇ ಇದೆ. ಕಳೆದ 4 ದಶಕಗಳಿಂದಲೂ ಈ ಬಗ್ಗೆ ಚರ್ಚಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳನ್ನೂ ಗಮನದಲ್ಲಿ ಇರಿಸಿಕೊಂಡು ನಮ್ಮ ಸರ್ಕಾರ ಈ ನೀತಿ ಜಾರಿ ಮಾಡುತ್ತಿದೆ. ರಾಜ್ಯದ ಜನಸಂಖ್ಯೆಯಲ್ಲಿ ನಿಯಂತ್ರಣ ಹಾಗೂ ಸ್ಥಿರತೆ ತಂದು, ಆ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಜತೆಗೆ, 2026ರ ವೇಳೆಗೆ ರಾಜ್ಯದಲ್ಲಿ ಜನನ ಪ್ರಮಾಣವನ್ನು 2.1ಕ್ಕಿಳಿಸುವುದು ನಮ್ಮ ಗುರಿ ಎಂದೂ ಹೇಳಿದ್ದಾರೆ.
ಇದನ್ನೂ ಓದಿ :ಸೆಪ್ಪೆಂಬರ್ ಹೊತ್ತಿಗೆ ಕೋವಿಡ್ ಲಸಿಕೆ ಹಾಕಿಸಿ 3ನೇ ಅಲೆ ತಡೆಗಟ್ಟಿ: ಸುರೇಶ್ ಕುಮಾರ್
ಇದೇ ವೇಳೆ, ಹೊಸ ಜನಸಂಖ್ಯಾ ಕರಡು ನೀತಿಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, “ಇದೊಂದು ರಾಜಕೀಯ ಅಜೆಂಡಾ’ ಎಂದು ಕರೆದರೆ, ಸಮಾಜವಾದಿ ಪಕ್ಷವು ಈ ನೀತಿಯನ್ನು “ಪ್ರಜಾಸತ್ತೆಯ ಕಗ್ಗೊಲೆ’ ಎಂದು ಬಣ್ಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.