ಬೀಡಾಡಿ ದನಗಳ ಸಾಕುವ ರೈತರಿಗೆ 900 ರೂ. ಸಹಾಯ ಧನ: ಉತ್ತರ ಪ್ರದೇಶ ಸಿಎಂ
Team Udayavani, Nov 22, 2020, 10:46 PM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಭೋಪಾಲ/ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರದ ತಾಂಡಾ ಫಾಲ್ಸ್ ಎಂಬಲ್ಲಿ ಗೋಪಾಷ್ಟಮಿ ಪ್ರಯುಕ್ತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋವುಗಳಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೀಡಾಡಿ ದನಗಳನ್ನು ಗೋ ಶಾಲೆಯಲ್ಲಿ ಇರಿಸಬೇಕು. ನಂತರ ಅವುಗಳನ್ನು ರೈತರಿಗೆ ಹಂಚುವ ವ್ಯವಸ್ಥೆಯಾಗಬೇಕು. ಬೀಡಾಡಿ ದನಗಳನ್ನು ಸಾಕುವ ಪ್ರತಿ ರೈತರಿಗೆ ಪ್ರತಿ ದನಕ್ಕೆ 900 ರೂ. ಸಿಗುವಂತಾಗಬೇಕು ಎಂದು ಹೇಳಿದ್ದಾರೆ.
ಮೊದಲ ಸಭೆ: ಮಧ್ಯಪ್ರದೇಶದಲ್ಲಿ ನೂತನವಾಗಿ ರಚಿಸಿರುವ ಗೋ ಸಂಪುಟ (ಕೌ ಕ್ಯಾಬಿನೆಟ್)ದ ಮೊದಲ ಸಭೆ ಭಾನುವಾರ ನಡೆಯಿತು. ಅಧಿಕೃತ ನಿವಾಸದಲ್ಲಿ ಆರಂಭದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಗೋವುಗಳಿಗೆ ಪತ್ನಿಸಮೇತರಾಗಿ ಪೂಜೆ ಸಲ್ಲಿಸಿದರು.
ಗೋಪಾಷ್ಟಮಿ ದಿನವೇ ಈ ಸಭೆ ನಡೆದಿರುವುದು ಮಹತ್ವ ಪಡೆದಿದೆ. ಪಶು ಸಂಗೋಪನೆ, ಅರಣ್ಯ, ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಮತ್ತು ರೈತರ ಕಲ್ಯಾಣ ಸಚಿವಾಲಯಗಳನ್ನು ಸೇರಿಸಿ ಗೋ ಸಂಪುಟವನ್ನು ಬುಧವಾರ ಸಿಎಂ ಚೌಹಾಣ್ ಘೋಷಿಸಿದ್ದರು. ಗ್ರಾಮೀಣ ಪ್ರದೇಶದ ಅರ್ಥ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಸರ್ಕಾರ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.