RTOಗೆ ಹೋಗದೇ ಚಾಲನಾ ಪರವಾನಗಿ ಪಡೆಯಿರಿ! ಜು.1ರಿಂದಲೇ ಈ ಕ್ರಮ ಜಾರಿ
Team Udayavani, Jun 12, 2021, 10:00 PM IST
ನವ ದೆಹಲಿ: ಇನ್ನು ಕೆಲವೇ ದಿನ… ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್‌ಗಾಗಿ ಆರ್‌ಟಿಒಗೆ ಅಲೆದಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಪಡೆಯಬಹುದು…!
ಹೌದು, ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಜು.1ರಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ. ಅಲ್ಲದೇ, ಖಾಸಗಿಯವರೇ ನಿಮಗೆ ಡ್ರೈವಿಂಗ್ ಲೈಸೆನ್ಸ್ ಅನ್ನೂ ನೀಡಬಹುದಾಗಿದೆ. ಚಾಲನಾ ಪರವಾನಗಿಗಾಗಿ ನೀವು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಪರೀಕ್ಷೆಯನ್ನೂ ಕೊಡಬೇಕಾಗಿಲ್ಲ ಎಂಬುದು ವಿಶೇಷ.
ಇಲ್ಲಿ ಇನ್ನೊಂದು ಸಂಗತಿ ಇದೆ; ನಿಮ್ಮ ಸಂಪೂರ್ಣ ತರಬೇತಿ, ಪರೀಕ್ಷೆ ಮತ್ತು ಉತ್ತೀರ್ಣವಾಗುವ ಎಲ್ಲಾ ವಿಧಾನವೂ ಎಲೆಕ್ಟ್ರಾನಿಕ್ ಆಗಿ ರೆಕಾರ್ಡ್ ಆಗುತ್ತದೆ. ಇದನ್ನು ಸರ್ಕಾರ ಆಡಿಟ್ ಕೂಡ ಮಾಡಲಿದೆ. ಹೀಗಾಗಿ, ಖಾಸಗಿಯವರಿಂದ ಚಾಲನಾ ಪರವಾನಗಿ ಪಡೆಯುವಾಗ ಯಾವುದೇ ಅಡ್ಡದಾರಿಗಳಿಗೆ ಅವಕಾಶವಿಲ್ಲದಂತಾಗಿದೆ.
ಡ್ರೈವಿಂಗ್ ಲೈಸೆನ್ಸ್ ಹೇಗೆ?
ಇಡೀ ಪ್ರಕ್ರಿಯೆ ಮಾನವ ರಹಿತವಾಗಿ ನಡೆಯುತ್ತದೆ. ಅಲ್ಲದೆ, ಚಾಲನಾ ಪರವಾನಗಿ ನೀಡುವ ಖಾಸಗಿ ಸಂಸ್ಥೆಗಳಿಗೂ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಅಂದರೆ, ಅವರು ಹೊಂದಿರುವ ಸ್ಥಳಾವಕಾಶ, ಡ್ರೈವಿಂಗ್ ಟ್ರ್ಯಾಕ್, ಮಾಹಿತಿ ಮತ್ತು ತಂತ್ರ ಜ್ಞಾನ ವ್ಯವಸ್ಥೆ, ಬಯೋಮೆಟ್ರಿಕ್ ವ್ಯವಸ್ಥೆ ಹೊಂದಿರಬೇಕು. ಇಂಥ ಕಂಪನಿಗಳಿಗೆ ಮಾತ್ರ ಸರ್ಕಾರ ಮಾನ್ಯತೆ ನೀಡುತ್ತದೆ. ಇವರು ಸರ್ಕಾರ ನೀಡಿರುವ ಪಠ್ಯಕ್ರಮದ ಆಧಾರದ ಮೇರೆಗೆ ತರಬೇತಿ ಕೊಟ್ಟು, ಪರೀಕ್ಷೆ ನಡೆಸಿ ಪಾಸ್ ಮಾಡಬೇಕು. ಈ ಕೇಂದ್ರ ಒಮ್ಮೆ ಇವರು ಪಾಸಾಗಿದ್ದಾರೆ ಎಂದು ಪ್ರಮಾಣ ಪತ್ರ ನೀಡಿದರೆ ಸಾಕು, ಅದು ಸಂಬಂಧ ಪಟ್ಟ ಅಧಿಕಾರಿಯ ಬಳಿಗೆ ಹೋಗುತ್ತದೆ.
ಇದನ್ನೂ ಓದಿ : ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ ಅಟರ್ನಿಯಾದ ಕುಮಟಾದ ದಿಶಾ
ಕೇಂದ್ರಕ್ಕಾಗಿ ಅರ್ಜಿ ಸಲ್ಲಿಸಬಹುದು
ಇಂಥ ಚಾಲನಾ ಪರವಾನಗಿ ನೀಡುವ ಕೇಂದ್ರ ಆರಂಭಿಸುವ ಸಲುವಾಗಿ ಖಾಸಗಿಯವರು ಈಗಿನಿಂದಲೇ ಅರ್ಜಿ ಸಲ್ಲಿಸಬಹುದು. ಇದನ್ನು ಆಯಾ ರಾಜ್ಯ ಸರ್ಕಾರಗಳಿಗೆ ಸಲ್ಲಿಕೆ ಮಾಡಬೇಕು. ಅವರು ಪರಿಶೀಲಿಸಿ ಅನುಮತಿ ನೀಡುತ್ತಾರೆ.
ಅನುಕೂಲವೇನು?
1. ಆರ್‌ಟಿಒ ಕಚೇರಿಗೆ ಹೋಗಿ ದಿನಗಟ್ಟಲೇ ಕಾಯಬೇಕಾಗಿಲ್ಲ
2. ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ
3. ತರಬೇತಿ ಮತ್ತು ಪರೀಕ್ಷೆ ಒಂದೇ ಕಡೆ ನಡೆಯುತ್ತದೆ.
4. ಖಾಸಗಿಯವರು ಕಟ್ಟುನಿಟ್ಟಾಗಿ ನಿಯಮ ಪಾಲಿಸಬಹುದು.
ಅನಾನುಕೂಲವೇನು?
1. ಸಾರಿಗೆ ಇಲಾಖೆಯನ್ನೂ ಖಾಸಗೀಕರಣ ಮಾಡಿದಂತೆ ಆಗುತ್ತದೆ.
2. ಪರವಾನಗಿ ಪಡೆಯುವ ಶುಲ್ಕ ಹೆಚ್ಚಿಸಬಹುದು.
3. ತರಬೇತಿ ಮತ್ತು ಪರವಾನಗಿ ನೀಡಲು ಅತ್ಯಧಿಕ ಹಣ ಪಡೆಯಬಹುದು.
4. ಡ್ರೈವಿಂಗ್ ಟ್ರ್ಯಾಕ್‌ಗೆ ಜಾಗ ಹೊಂದಿಸುವುದು ಕಷ್ಟಕರ
ಎಲೆಕ್ಟ್ರಿಕ್ ಸ್ಕೂಟರ್ ಸಬ್ಸಿಡಿ ಹೆಚ್ಚಳ
ಮುಖ್ಯಾಂಶಗಳು
– ಫೇಮ್-2 ಯೋಜನೆಯ ಪ್ರೋತ್ಸಾಹ ಧನ ಪರಿಷ್ಕರಣೆ
– ಕೇಂದ್ರ ಸರ್ಕಾರದಿಂದ ವಾಹನ ಉತ್ಪಾದಕರಿಗೆ ಹೊಸ ಕೊಡುಗೆ
– ಪ್ರತಿ ಕಿಲೋವ್ಯಾಟ್ ಪರ್ ಹವರ್ ಮೇಲಿನ ಪ್ರೋತ್ಸಾಹ ಧನ 5,000 ರೂ. ಹೆಚ್ಚಳ
ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ಜನರ ಕೈಗೆಟಕುವಂತೆ ಮಾಡುವಲ್ಲಿ ಮತ್ತೂಂದು ಹೆಜ್ಜೆಯಿಟ್ಟಿರುವ ಸರ್ಕಾರ, “ಫಾಸ್ಟರ್ ಅಡಾಪ್ಷನ್ ಆ್ಯಂಡ್ ಮ್ಯಾನುಫ್ಯಾಕ್ಟರಿಂಗ್ ಆಫ್ ಹೈಬ್ರಿಡ್ ಆ್ಯಂಡ್ ಇಲೆಕ್ಟ್ರಿಕ್ ವೆಹಿಕಲ್ಸ್’ ಯೋಜನೆಯ 2ನೇ ಆವತ್ತಿಯ (ಫೇಮ್-2) ನಿಯಮಾವಳಿಗಳಲ್ಲಿ ಬದಲಾವಣೆ ತಂದಿದೆ.
ಈ ಕುರಿತಂತೆ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದಿಂದ ಅಧಿಸೂಚನೆಯೊಂದು ಹೊರಬಿದ್ದಿದ್ದು, ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕೆ ಮೇಲೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ವಾಹನಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿಯ ಶಕ್ತಿಗೆ ಅನುಗುಣವಾಗಿ ಈ ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದರೆ, ವಾಹನಗಳಲ್ಲಿರುವ ಲಿಥಿಯಂ ಐಯಾನ್ ಬ್ಯಾಟರಿಯ ಪ್ರತಿ ಕಿಲೋವ್ಯಾಟ್ ಪರ್ ಹವರ್ ಶಕ್ತಿಗೆ (kಗಟಜ) 20,000 ರೂ.ಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.
ಈ ಪರಿಷ್ಕರಣೆಗೂ ಮುನ್ನ ಪ್ರತಿ ಕಿಲೋವ್ಯಾಟ್ ಪರ್ ಹವರ್‌ಗೆ 10,000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಈಗ, ಅದನ್ನು 15,000 ರೂ.ಗಳಿಗೆ ಏರಿಸಲಾಗಿದೆ. ಅಲ್ಲದೆ, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾವಣೆಯಾಗಬೇಕು, ಹೈಬ್ರಿಡ್ ಹಾಗೂ ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಬೆಲೆಗಳಲ್ಲಿ ಗಣನೀಯವಾಗಿ ಕಡಿತವಾಗಬೇಕು ಎಂಬ ಆಶಯವನ್ನು ಸಚಿವಾಲಯ ಹೊಂದಿದೆ.
ಬೆಂಗಳೂರು ಕಂಪನಿಯೇ ಮುಂದು
ಫೇಮ್-2 ಯೋಜನೆಯಡಿ, ತಾನು ಪಡೆದ ಲಾಭವನ್ನು ದೇಶದಲ್ಲೇ ಮೊದಲ ಬಾರಿಗೆ ಗ್ರಾಹಕರಿಗೆ ವರ್ಗಾಯಿಸಿದ ಕಂಪನಿಯೆಂದರೆ ಅದು ಬೆಂಗಳೂರು ಮೂಲದ ಎಥರ್ ಎನರ್ಜಿ. ಈ ಕಂಪನಿಯು, ಫೇಮ್-2 ಯೋಜನೆಯಡಿ, ಪ್ರತಿ ಕಿಲೋವ್ಯಾಟ್‌ಗೆ ನೀಡಲಾಗಿದ್ದ 10,000 ರೂ. ಪ್ರೋತ್ಸಾಹ ಧನದ ಲಾಭವನ್ನು ಬಳಸಿಕೊಂಡು ತನ್ನ ವಾಹನಗಳ ಬೆಲೆಯನ್ನು ಇಳಿಸಿತ್ತು. ಹಾಗಾಗಿ, ಆ ಕಂಪನಿಯ 450 ಎಕ್ಸ್ ಮಾದರಿಯ ಸ್ಕೂಟರ್‌ಗಳು 14,500 ರೂ. ಕಡಿ ಮೆಗೆ ಲಭ್ಯವಾದಂತಾದವು. ಈಗ “ಫೇಮ್-2′ ಪರಿಷ್ಕೃತ ನಿಯಮದಡಿ, ಈ ಕಂಪನಿ ಮತ್ತಷ್ಟು ರಿಯಾಯಿತಿ ನೀಡುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.