ಜೆಡಿಎಸ್‌ನಲ್ಲೀಗ ದತ್ತ ಸೇರ್ಪಡೆ ಸಂಘರ್ಷ: ಗೌಡರ ಕುಟುಂಬದಲ್ಲಿ ಪರೋಕ್ಷ ಸಮರ
Team Udayavani, Apr 14, 2023, 8:30 AM IST
ಬೆಂಗಳೂರು: ಹಾಸನವಾಯಿತು, ಈಗ ಕಡೂರು ಸರದಿ… ಜೆಡಿಎಸ್‌ನಲ್ಲೀಗ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ನಡುವೆ ಮತ್ತೂಂದು ಸುತ್ತಿನ ಸಮರ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ವೈ.ಎಸ್.ವಿ. ದತ್ತ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಮತ್ತು ಕಡೂರು ಟಿಕೆಟ್ ನೀಡುವ ವಿಚಾರದಲ್ಲಿ ಸಂಘರ್ಷ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ.
ಕಾಂಗ್ರೆಸ್ ಟಿಕೆಟ್ ಸಿಗದೆ ನಿರಾಶರಾಗಿದ್ದ ವೈ.ಎಸ್.ವಿ. ದತ್ತ ಅವರನ್ನು ಮರಳಿ ಜೆಡಿಎಸ್‌ಗೆ ಸೇರಿಸಿಕೊಳ್ಳಲು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇಷ್ಟವಿರಲಿಲ್ಲ. ಆದರೆ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಮತ್ತು ಪುತ್ರ ಪ್ರಜ್ವಲ್ ರೇವಣ್ಣ ಅವರು, ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರಿಸಿಕೊಂಡಿರುವುದು ಮಾತ್ರವಲ್ಲದೆ ಕಡೂರಿನ ಅಭ್ಯರ್ಥಿ ಅವರೇ ಎಂದು ಘೋಷಣೆ ಮಾಡಿದ್ದಾರೆ.
ಈ ವಿದ್ಯಮಾನಗಳು ಗಮನಸೆಳೆದಿದ್ದರೆ, ಅತ್ತ ಕಲಬುರಗಿ ಪ್ರವಾಸದಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರು “ಕಡೂರಿನಲ್ಲಿ ಏನಾಗಿದೆ ಎಂಬ ಬಗ್ಗೆ ನನಗೆ ಅರಿವು ಇಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ಮಾಜಿ ಶಾಸಕ ವೈ.ಎಸ್.ವಿ. ದತ್ತ ಸೇರ್ಪಡೆಗೆ ಪೂರ್ಣ ಸಮ್ಮತಿ ಇಲ್ಲವೆಂಬ ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಇಬ್ಬರು ನಾಯಕರ ನಡುವಿನ ಮನಸ್ತಾಪ ಮತ್ತೂಮ್ಮೆ ಬಯಲಾಗಿದೆ.
ದತ್ತ ಜೆಡಿಎಸ್‌ನಲ್ಲಿ ಶಾಸಕರಾಗಿದ್ದಾಗಲೂ ನನ್ನ ಜತೆ ಹೆಚ್ಚಾಗಿ ಸಂಪರ್ಕ ಇರಲಿಲ್ಲ. ಅವರದೇನಿದ್ದರೂ ದೇವೇಗೌಡರು, ರೇವಣ್ಣ, ಪ್ರಜ್ವಲ್ ಜತೆಗೆ ಮಾತ್ರ ನಿರಂತರ ಸಂಪರ್ಕ. ದತ್ತ ಅವರನ್ನು ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದು ಬಿಡುವುದು ದೇವೇಗೌಡರಿಗೆ ಬಿಟ್ಟದ್ದು, ಅಲ್ಲಿ ಅಭ್ಯರ್ಥಿ ಬದಲಾವಣೆ ಬಗ್ಗೆಯೂ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಮಾಜಿ ಮುಖ್ಯಮಂತ್ರಿಯವರನ್ನು ಕತ್ತಲಲ್ಲಿಟ್ಟು ದತ್ತ ಅವರಿಗೆ ಜೆಡಿಎಸ್ ಪ್ರವೇಶ ನೀಡಲಾಗಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.
ಕುಮಾರಸ್ವಾಮಿ ಜತೆ ಮಾತಾಡಿರುವೆ
ಇದನ್ನು ಅಲ್ಲಗೆಳೆದಿರುವ ಎಚ್.ಡಿ. ರೇವಣ್ಣ, ಎಚ್.ಡಿ. ದೇವೇಗೌಡರೇ ಕರೆ ಮಾಡಿ ಕುಮಾರಸ್ವಾಮಿ ಜತೆ ನಾನು ಮಾತನಾಡಿದ್ದೇನೆ. ನಾನು ಇರುವವರೆಗೂ ದತ್ತ ಕೈ ಬಿಡಬೇಡಿ. ಅವರೇ ನಮ್ಮ ಪಕ್ಷದ ಅಭ್ಯರ್ಥಿ, ನಾನೂ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂದು ಹೇಳಿದರು. ಹೀಗಾಗಿ ನಾವೇ ಬಂದಿದ್ದೇವೆ, ದೇವೇ ಗೌಡರ ಆದೇಶ ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ವೈ.ಎಸ್.ವಿ. ದತ್ತ ಕಾಂಗ್ರೆಸ್‌ಗೆ ಹೋಗಿದ್ದರು. ರಾಜಕಾರಣದಲ್ಲಿ ಇವೆಲ್ಲಾ ಸಾಮಾನ್ಯ. ಆದರೆ ತಾಯಿ ಮನೆ -ತಂದೆ ಮನೆ ಇರುತ್ತದೆ. ಐವತ್ತು ವರ್ಷ ಅವರಿದ್ದ ಮನೆ ಇದೇ. ಈಗ ಮತ್ತೆ ವಾಪಸ್ ಬಂದಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಮೂಲಗಳ ಪ್ರಕಾರ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ದತ್ತ ಮರಳಿ ಜೆಡಿಎಸ್‌ಗೆ ಬರಲು ಆಸಕ್ತಿ ವಹಿಸಿ ದೇವೇಗೌಡರ ಬಳಿ ಕಳುಹಿಸಿದ್ದರು.
ಹಾಸನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಕಡೂರು ಕೂಡ ಬರುವುದರಿಂದ ದತ್ತ ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲು ಎಚ್.ಡಿ. ರೇವಣ್ಣ ಪಟ್ಟು ಹಿಡಿದು ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.