“ಗೆಣ್ಗ್ ಬೇಸೂಕ್‌ಬಂದದ್ದಾ?’: ಜಿ.ಪಂ. ಸಭೆಯಲ್ಲಿ ಆಕ್ರೋಶ


Team Udayavani, Apr 6, 2021, 2:30 AM IST

“ಗೆಣ್ಗ್ ಬೇಸೂಕ್‌ಬಂದದ್ದಾ?’: ಜಿ.ಪಂ. ಸಭೆಯಲ್ಲಿ ಆಕ್ರೋಶ

ಉಡುಪಿ: ಸಿದ್ದಾಪುರ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯದವರ ಕಾಲನಿಯ ಬಾವಿ ನಿರ್ಮಾಣಕ್ಕೆ ಸಂಬಂಧಿಸಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ವಿಷಯ ಚರ್ಚೆಗೆ ಬಂದಾಗ ಸಂಬಂಧಪಟ್ಟ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯವರು ತನಿಖೆಗೆ ಬಂದುದನ್ನು ಉಲ್ಲೇಖೀಸಿ, “ಅವರು ವರದಿ ನೀಡಲಿಲ್ಲ’ ಎಂದರು. ಹಾಗಿದ್ದರೆ “ಅವರು ಗೆಣ್ಗ್ ಬೇಸೂಕ್‌ ಬಂದದ್ದಾ?’ (ಕುಂದಾಪುರ ಕನ್ನಡದಲ್ಲಿ ಗೆಣಗು, ಗೆಣ್ಗ್= ಗೆಣಸು) ಎಂದು ಸದಸ್ಯ ರೋಹಿತ್‌ಕುಮಾರ್‌ ಶೆಟ್ಟಿ ಪ್ರಶ್ನಿಸಿದರು.

“ಹಾಗೆಲ್ಲ ಮಾತನಾಡುವುದು ಸರಿಯಲ್ಲ’ ಎಂದು ಸಿಇಒ ಡಾ| ನವೀನ್‌ ಭಟ್‌ ಕಿವಿಮಾತು ಹೇಳಿದರು.
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಈ ಅವಧಿಯ ಕೊನೆಯ ಸಾಮಾನ್ಯ ಸಭೆ ನಡೆದಾಗ, ಬಿಸಿ ಬಿಸಿ ಚರ್ಚೆ ನಡೆಯಿತು.

ನೀರಿನ ಪ್ರಮಾಣ ಕಡಿಮೆ ಇದ್ದರೆ ಗುತ್ತಿಗೆದಾರರು ಹೊಣೆಯೆ?
ಬೇಸಗೆಯಲ್ಲಿ ನೀರು ಕಡಿಮೆಯಾಗುವುದು ಸಹಜ. ಕೆಲಸ ಆಗದೆ ಇದ್ದರೆ, ಕಳಪೆ ಕಾಮಗಾರಿಯಾಗಿದ್ದರೆ ಪಾವತಿಸುವುದು ಬೇಡ. ಬಂದ ಸಿಮೆಂಟ್‌ನ್ನು ಮಾರುವು ದಿಲ್ವಾ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ ಪ್ರಶ್ನಿಸಿದರು.

ಅಧಿಕಾರಿಗಳಿಗೆ ತರಾಟೆ
ಕೆಆರ್‌ಡಿಎಲ್‌, ಸಣ್ಣ ನೀರಾವರಿ ಇಲಾಖೆಯಿಂದ ಆಗುವ ಕಾಮಗಾರಿ ವೈಖರಿಗೆ ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಯಿಂದ ಹೊಗೆ ತೆಗೆದು ಮಾರಾಟ ಮಾಡಲಾಗುತ್ತಿದೆ ವಿನಾ ಏಲಂ ಹಾಕಿ ಮಾರುವ ಕ್ರಮವಿಲ್ಲ. ಟೆಂಡರ್‌ಗಳು ಬೆಂಗಳೂರಿನಲ್ಲಿ ಆಗುತ್ತದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಆದ ಕಾಮಗಾರಿಗಳಿಗೆ ಪಿಡಿಒ ಪ್ರಮಾಣಪತ್ರ ಬೇಕಾಗಿಲ್ಲ. ಕಾಮಗಾರಿಹಸ್ತಾಂತರವೂ ಆಗುವುದಿಲ್ಲ ಎಂದು ಬಾಬು ಶೆಟ್ಟಿ, ಉದಯ ಕೋಟ್ಯಾನ್‌ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಹತ್ತು ದಿನಗಳಲ್ಲಿ ನನಗೆ ಎಲ್ಲ ಕಾಮಗಾರಿಗಳ ಪಟ್ಟಿ ಬರಬೇಕು, ಗ್ರಾ.ಪಂ. ಪಿಡಿಒಗಳ ಪ್ರಮಾಣ
ಪತ್ರ ಬೇಕು ಎಂದು ಸಿಇಒ ತಿಳಿಸಿದರು.

ಕಡಿಮೆ ಮೊತ್ತ-ಕಳಪೆ ಕೆಲಸ
ಶೇ.40ಕ್ಕಿಂತ ಕಡಿಮೆ ಹಣವನ್ನು ತೋರಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಇಂತಹವರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಅಷ್ಟಕ್ಕಷ್ಟೆ. ಆದರೆ ಇವರಿಗೆ ಹಣ ಪಾವತಿಸಿದರೆ ಎಂಜಿನಿಯರರೇ ಹೊಣೆ ಹೊರಬೇಕು. ಉಪ್ಪೂರು, ಹಾವಂಜೆಯಲ್ಲಿ ಹೀಗೆ ಆಗಿದೆ ಎಂದು ಸದಸ್ಯ ಜನಾರ್ದನ ತೋನ್ಸೆ ಎಚ್ಚರಿಸಿದರು. ಇಂತಹವರು ಮತ್ತೆ ಕಾಮಗಾರಿ ಕ್ಷೇತ್ರಕ್ಕೆ ಬರುವುದೇ ಬೇಡ ಎಂದು ಪ್ರತಾಪ್‌ ಹೆಗ್ಡೆ ಆಗ್ರಹಿಸಿದರು. “ಮೇಲೆ ರಿಂಗ್‌ ತೋರುತ್ತದೆ. ಆಳವಿರುವುದಿಲ್ಲ. ಇಂತಹ ಕಾಮಗಾರಿ ಕಂಡಾಗ ತಡೆ ಹಿಡಿದಿದ್ದೇನೆ. ಇದನ್ನೂ ತನಿಖೆ ನಡೆಸಿ ತಪ್ಪಿದ್ದರೆ ಟೆಂಡರ್‌ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡುತ್ತೇನೆ’ ಎಂದು ಸಿಇಒ ಭರವಸೆ ನೀಡಿದರು.

ಪರಿಹಾರ ಪಾವತಿಗೆ ಅದಾಲತ್‌
ಕಲ್ಯಾಣಪುರ, ಕೆಮ್ಮಣ್ಣಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಪ್ರವಾಹಪೀಡಿತರಿಗೆ ಹಣ ಪಾವತಿ ಆಗಲಿಲ್ಲ ಎಂದು ಜನಾರ್ದನ ತೋನ್ಸೆ ಹೇಳಿದರು. 38 ಮಂದಿಗೆ ಇಂತಹ ಸಮಸ್ಯೆಯಾಗಿದ್ದು ವಾರದೊಳಗೆ ಸರಿ ಪಡಿಸುವುದಾಗಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ತಿಳಿಸಿದರು. ಮುಂದಿನ ವಾರ ಲೀಡ್‌ ಡಿಸ್ಟ್ರಿಕ್ಟ್ ಮ್ಯಾನೇಜರ್‌ ಸಹಕಾರದಲ್ಲಿ ಅದಾಲತ್‌ ಏರ್ಪಡಿಸಿ ಸಮಸ್ಯೆ ಸರಿಪಡಿಸಲು ಸಿಇಒ ಸೂಚಿಸಿದರು.

ವನ್ಯಜೀವಿಗಳಿಂದ ತೊಂದರೆ
ಹಾವಂಜೆ, ಉಪ್ಪೂರಿನಲ್ಲಿ ಮಂಗಗಳು, ಚಿರತೆ, ಕಾಡು ಹಂದಿ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಜನಾರ್ದನ ತೋನ್ಸೆ ಹೇಳಿದಾಗ, ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸುತ್ತಿದ್ದೇವೆ. ಇದರಿಂದ ಮಂಗಗಳ ಸಮಸ್ಯೆ ಬಗೆಹರಿಯ ಬಹುದು. ಉಳಿದಂತೆ ಐದು ವರ್ಷಗಳಲ್ಲಿ ಚಿರತೆಯೂ ಸೇರಿದಂತೆ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಬೆಳೆ ಹಾನಿ ಉಂಟಾದವರಿಗೆ 25 ಲ.ರೂ. ಪರಿಹಾರ ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಡಿಎಫ್ಒ ಆಶೀಶ್‌ ರೆಡ್ಡಿ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಕೊಕ್ಕರ್ಣೆ ಸಮೀಪದ ಕೋಟಂಬೈಲಿ ನಲ್ಲಿ ಕಳಪೆ ಕಾಮಗಾರಿ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಇದು ಲೋಕಾಯುಕ್ತರಿಂದ ತನಿಖೆ ನಡೆಸ ಬೇಕಾದ ಪ್ರಕರಣ ಎಂದು ಜನಾರ್ದನ ತೋನ್ಸೆ ಗಮನ ಸೆಳೆದರು. “ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಬರೆದುಕೊಳ್ಳಲಾಗಿದೆ. ಅವರ ವಿರುದ್ಧ ಕ್ರಮ ನಡೆಯುತ್ತದೆ ಎಂಬ ವಿಶ್ವಾಸವಿದೆ’ ಎಂದು ಅಧ್ಯಕ್ಷರು ಉತ್ತರಿಸಿದರು. “ಜಿ.ಪಂ. ಅಧ್ಯಕ್ಷರು, ಸಿಇಒ ಅವರಿಗೆ ತನಿಖೆ ನಡೆಸುವ ಅಧಿಕಾರವಿದೆ, ಕ್ರಮ ಕೈಗೊಳ್ಳುವುದು ಸರಕಾರದಿಂದ ಆಗಬೇಕಾಗಿದೆ. ವಾರಾಹಿ ನೀರಾವರಿ ನಿಗಮದಿಂದ ಆದ ಕಾಮಗಾರಿ ಇದಾಗಿದ್ದು ತನಿಖೆಗೆ ಸರಕಾರದಿಂದ ಸೂಚನೆ ಬಂದಿದೆ’ ಎಂದು ಸಿಇಒ ಹೇಳಿದರು.

ಪರದಾಟ
ಪರವಾನಿಗೆದಾರ ಸರ್ವೆಯರ್‌ಗಳು ಮುಷ್ಕರ ಹೂಡಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಜ. 16ರಿಂದ 51 ಲೈಸನ್ಸ್‌ ಸರ್ವೆಯರುಗಳು ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ಹೂಡಿದ್ದಾರೆ. 3,426 ಅರ್ಜಿಗಳಲ್ಲಿ 1,220 ಅರ್ಜಿ ವಿಲೇವಾರಿ ಆಗಿದೆ.
ಒಟ್ಟು 10,000 ಅರ್ಜಿಗಳು ಬಾಕಿ ಇದೆ. ಸರಕಾರಿ ಸರ್ವೆಯರ್‌ ಗಳು 33 ಮಂದಿ ಇದ್ದಾರೆ. ಎ. 7ರಿಂದ ಕೆಲಸಕ್ಕೆ ಹಾಜ ರಾಗುವುದಾಗಿ ಮುಷ್ಕರನಿರತರು ಹೇಳಿದ್ದಾರೆ. ರಾಜ್ಯದಲ್ಲಿ 2,000 ಹೊಸ ಸರ್ವೆಯರುಗಳ ನೇಮಕ ಆಗುತ್ತಿದೆ. ಇವರಿಗೆ ಕಡಿಮೆ ಸಮಯದ ಅಗತ್ಯ ತರಬೇತಿ ಕೊಟ್ಟು ನೇಮಕಾತಿ ಮಾಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಟಾಪ್ ನ್ಯೂಸ್

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

14-bng

Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್‌!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.