ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ


Team Udayavani, Nov 27, 2021, 11:00 PM IST

ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಬ್ರುಸೆಲ್ಸ್‌/ನವದೆಹಲಿ: ದಕ್ಷಿಣ ಆಫ್ರಿಕಾ, ಸಿಂಗಾಪುರಗಳಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ ಬಿ.1.1.529 (ಬೋಟ್ವಾನಾ ರೂಪಾಂತರಿ) ಮತ್ತೆ ಐರೋಪ್ಯ ಒಕ್ಕೂಟದ ಬೆಲ್ಜಿಯಂ, ಇಸ್ರೇಲ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿ, ಕೆಲ ದೇಶಗಳಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಣೆ ಮಾಡಲಾಗಿದೆ. ಜತೆಗೆ ಆಫ್ರಿಕಾ ಖಂಡದ ರಾಷ್ಟ್ರಗಳಿಂದ ವಿಮಾನಯಾನಕ್ಕೆ ನಿಷೇಧ, ಗಡಿಗಳಲ್ಲಿ ಮತ್ತೆ ಬಿಗಿ ತಪಾಸಣೆ ಕ್ರಮವನ್ನು ಶುರು ಮಾಡಿವೆ. ಫ್ರಾನ್ಸ್‌ 48 ಗಂಟೆಗಳ ಕಾಲ ಆಫ್ರಿಕಾ ಖಂಡದಿಂದ ವಿಮಾಯಾನ ನಿಷೇಧಿಸಿ ಆದೇಶ ಹೊರಡಿಸಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು, ಸಿಂಗಾಪುರ, ಯುನೈಟೆಡ್‌ ಕಿಂಗ್‌ಡಮ್‌ ಜಪಾನ್‌ ಸರ್ಕಾರಗಳು ಆಫ್ರಿಕಾ ಖಂಡದ ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್ವಾನಾ, ಲೆಸೆತೋ ಮತ್ತು ಎಸ್ವೆತಿನಿಗಳಿಂದ ವಿಮಾನ ಹಾರಾಟ ನಿಷೇಧಿಸಿವೆ.

ಇಸ್ರೇಲ್‌ನಲ್ಲಿ ಬೋಟ್ಲ್ವಾನಾ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಗಳು ಇವೆ ಎಂದು ಪ್ರಧಾನಿ ನೆಫ್ವಾಲಿ ಬೆನ್ನೆಟ್‌ ಹೇಳಿದ್ದಾರೆ.

ನಾಲ್ಕನೇ ಅಲೆ:
ಜರ್ಮನಿಯಲ್ಲಿ ಹೊಸ ಮೈತ್ರಿಕೂಟ ಮುಂದಿನ ತಿಂಗಳು ಅಧಿಕಾರಕ್ಕೆ ಬರುತ್ತಿರುವಂತೆಯೇ ಸೋಂಕಿನ 4ನೇ ಅಲೆ ಕಾಣಿಸಿಕೊಳ್ಳಲಾರಂಭಿಸಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ಯುರೋಪ್‌ನಲ್ಲಿ 76 ಸಾವಿರ ಕೇಸುಗಳು ದೃಢಪಟ್ಟಿವೆ.

ಈಗಲೇ ಹೇಳಲಾಗದು:
ಹೊಸ ರೂಪಾಂತರಿ ಎಷ್ಟು ಅಪಾಯಕಾರಿ ಎಂಬ ಬಗ್ಗೆ ತಕ್ಷಣಕ್ಕೆ ಏನನ್ನೂ ಹೇಳಲಾಗದು. ಅದಕ್ಕೆ ಇನ್ನೂ ಕೆಲವು ವಾರಗಳು ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಕ್ರಿಯ ಸೋಂಕು ಏರಿಕೆ :
ದೇಶದಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 10,549 ಹೊಸ ಕೇಸುಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 488 ಮಂದಿ ಅಸುನೀಗಿದ್ದಾರೆ. ಈ ಪೈಕಿ ಕೇರಳದಲ್ಲಿಯೇ 384 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 1,10,133ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.33 ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಡಿ.15ರಿಂದ ಅಂತಾರಾಷ್ಟ್ರೀಯ ವಿಮಾನಯಾನ
ಜಗತ್ತಿನ ಕೆಲವು ಭಾಗಗಳಲ್ಲಿ ಬೋಟ್ಸ್ವಾನಾ ರೂಪಾಂತರಿ ಸೋಂಕು ಪತ್ತೆಯಾಗಿರುವಂತೆಯೇ ಡಿ.15ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಶುರು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸದ್ಯ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೂಡ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲು ನಿರ್ಧರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ 14 ದೇಶಗಳನ್ನು ಹೊರತು ಪಡಿಸಿ ವಿಮಾನಯಾನ ಶುರುವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಯು.ಕೆ, ಸಿಂಗಪುರ್‌, ಚೀನಾ, ಬ್ರೆಜಿಲ್‌, ಬಾಂಗ್ಲಾದೇಶ, ಮಾರಿಷಸ್‌, ಜಿಂಬಾಬ್ವೆ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಬೋಟ್ಸಾ$Ìನಾ, ಇಸ್ರೇಲ್‌ ಮತ್ತು ಹಾಂಕಾಂಗ್‌ಗಳಿಗೆ ವಿಮಾನಯಾನ ಇರುವುದಿಲ್ಲ.

ಭಾರತದಲ್ಲಿ ಮೂರನೇ ಅಲೆ ಇಲ್ಲ: ಗುಲೇರಿಯಾ
“ಭಾರತದಲ್ಲಿ ಈ ಹಿಂದೆ ಬಂದುಹೋಗಿರುವ ಕೊರೊನಾ ಅಲೆಗಳಿಗಿಂತ ಹೆಚ್ಚು ಮಾರಕವಾಗಿರುವ ಕೊರೊನಾ ಮೂರನೇ ಅಲೆಯು ಭಾರತಕ್ಕೆ ಅಪ್ಪಳಿಸುವ ಭೀತಿ ಸದ್ಯಕ್ಕಿಲ್ಲ” ಎಂದು ನವದೆಹಲಿಯ ಅಖೀಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್‌) ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಅಭಯ ನೀಡಿದ್ದಾರೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಮತ್ತು ಎರಡನೇ ಕೊರೊನಾ ಅಲೆ ಬಂದು ಅಪ್ಪಳಿಸಿದ ರೀತಿಯಲ್ಲಿ ಮೂರನೇ ಅಲೆ ಬರುವುದಿಲ್ಲ. ನಮ್ಮಲ್ಲಿ ಅನೇಕರು ಲಸಿಕೆ ಪಡೆದುಕೊಂಡಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿರಲಿದ್ದಾರೆ. ಸದ್ಯಕ್ಕೆ ಲಸಿಕೆಯ ಮೂರನೇ ಡೋಸ್‌ ಲಸಿಕೆಯ ಅಗತ್ಯತೆಯೂ ಕಂಡುಬರುತ್ತಿಲ್ಲ’ ಎಂದಿದ್ದಾರೆ.

ಏನಿದು ಬೋಟ್ಸ್ವಾನಾ ರೂಪಾಂತರಿ?
ದಕ್ಷಿಣ ಆಫ್ರಿಕಾದ ಅತಿ ಜನನಿಬಿಡ ಪ್ರಾಂತ್ಯವಾದ ಗುಟೆಂಗ್‌ನಲ್ಲಿ ಈ ವೈರಾಣುವಿರುವ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅತ್ತ, ಹಾಂಕಾಂಗ್‌, ಬೋಟ್ಸ್ವಾನಾದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಇದೇ ಮಾದರಿಯ ವೈರಾಣು ಪತ್ತೆಯಾಗಿದೆ. ಇದರ ಹೊರತಾಗಿಯೂ ಬೋಟ್ಸ್ವಾನಾ ರೂಪಾಂತರಿ ಎಂದು ವಿಜ್ಞಾನಿಗಳು ಹೆಸರಿಸಿದ್ದಾರೆ.

ಹೆಚ್ಚು ಶಕ್ತಿಶಾಲಿ
ಸಾಮಾನ್ಯವಾಗಿ ಕೊರೊನಾ ವೈರಾಣುವಿನ ಮೇಲೆ ಪೊಟೀನ್‌ನಿಂದ ಕೂಡಿದ ಮುಳ್ಳಿನಂಥ ಆಕಾರವಿರುತ್ತದೆ. ಬಿ.1.1.529 ರೂಪಾಂತರಿ ವೈರಾಣುವಿನಲ್ಲಿ ಈ ಪ್ರೋಟೀನ್‌, ಕನಿಷ್ಟ 30 ಬಾರಿಯಾದರೂ ರೂಪಾಂತರ ಹೊಂದಿದೆ ಎಂದು ಹೇಳಲಾಗಿದೆ. ಹಾಗಾಗಿ, ಇದು ಈವರೆಗಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಹರಡಬಲ್ಲದು ಎನ್ನಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬುಧವಾರ-ಗುರುವಾರಗಳಂದು ದಾಖಲಾಗಿರುವ 1,100 ಹೊಸ ಕೊರೊನಾ ಪ್ರಕರಣಗಳಲ್ಲಿ ಶೇ. 90ರಷ್ಟು ಹೊಸ ರೂಪಾಂತರಿ ಪತ್ತೆಯಾಗಿರುವುದು ಇದರ ತ್ವರಿತ ಹರಡುವಿಕೆಗೆ ಸಾಕ್ಷಿಯಾಗಿದೆ.

ಸಮಾಧಾನಕರ ಸಂಗತಿ!
ಕೊರೊನಾಕ್ಕೆ ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಎಲ್ಲಾ ಲಸಿಕೆಗಳು ಈ ಹೊಸ ರೂಪಾಂತರಿ ವೈರಾಣುವನ್ನು ಹತ್ತಿಕ್ಕುವಲ್ಲಿ ಶಕ್ತವಾಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನು, ಈ ವೈರಾಣುವಿನಿಂದ ಈವರೆಗೆ ಕಂಡಿರದ ಅತಿ ಭೀಕರ ಕೊರೊನಾ ರೋಗ ಉಂಟಾಗುತ್ತದೆ ಎಂಬುದಂತೂ ಸುಳ್ಳು ಎಂದೂ ವಿಜ್ಞಾನಿಗಳು ತಿಳಿಸಿದ್ದಾರೆ. ಇವೆರಡೂ ವಿಚಾರಗಳು, ಹೊಸ ರೂಪಾಂತರಿಯ ಭೀತಿಯ ನಡುವೆಯೂ ಈ ವಿಚಾರ ಸಮಾಧಾನ ಹಾಗೂ ಆತ್ಮವಿಶ್ವಾಸ ತರುವಂಥದ್ದಾಗಿವೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್‌ ಗಂಡಸು: ಮಸ್ಕ್ ತಂದೆ

Trump-musk

Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

India cuts import duty on American Bourbon Whiskey

Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.