ತಮಿಳುನಾಡು ಸಚಿವರ ಪುತ್ರಿಗೆ ಗೃಹ ಸಚಿವರಿಂದ ಅಭಯ
Team Udayavani, Mar 9, 2022, 6:48 PM IST
ಬೆಂಗಳೂರು : ತಮಿಳು ನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ (24) ಹಾಗೂ ಅವರ ಪತಿ ಸತೀಶ್ ಅವರು ಇಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಸಚಿವರನ್ನು ಭೇಟಿಯಾಗುವ ಪೂರ್ವದಲ್ಲಿ, ಈರ್ವರೂ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆಗಾಗಿ ಮನವಿ ಸಲ್ಲಿಸಿದ್ದರು.
ತನ್ನನ್ನು ಎಂ.ಬಿ.ಬಿ.ಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯ ಕಲ್ಯಾಣಿ ಅವರು, ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದು, ತಮ್ಮ ಪತಿಯವರ ವಿರುದ್ಧ ಸತ್ಯಕ್ಕೆ ದೂರವಾದ ದೂರು ದಾಖಲಿಸುವ ಪ್ರಯತ್ನದ ಬಗ್ಗೆ, ಅನುಮಾನವಿದ್ದು, ರಕ್ಷಣೆ ನೀಡಬೇಕೆಂದು ಗೃಹ ಸಚಿವರಲ್ಲಿ ವಿನಂತಿಸಿದರು.
ಇದನ್ನೂ ಓದಿ : ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸರಕಾರ ಚಿಂತಿಸಬೇಕಾಗಿದೆ :ಜಿ.ಪರಮೇಶ್ವರ್
ತಮಿಳುನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ 2021ರ ಸೆಪ್ಟೆಂಬರ್ನಲ್ಲಿ ಚೆನ್ನೈನಿಂದ ನಾಪತ್ತೆಯಾಗಿದ್ದರು. ಚೆನ್ನೈನಲ್ಲಿ ಜಯಕಲ್ಯಾಣಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಸತೀಶ್ ಕುಮಾರ್ನನ್ನು ಜಯಕಲ್ಯಾಣಿ ಮದುವೆಯಾಗಿದ್ದಾರೆ. ತಮ್ಮ ಪ್ರೀತಿಗೆ ತಂದೆಯ ವಿರೋಧ ಉಂಟಾದ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಗೃಹ ಸಚಿವರಲ್ಲಿ ವಿನಂತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.