ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ
Team Udayavani, Dec 2, 2020, 5:20 PM IST
ಅಹಮದಾಬಾದ್: ಗುಜರಾತ್‌ನ ಏಕತಾ ಪ್ರತಿಮೆಯ ಪ್ರವೇಶ ಶುಲ್ಕ ನಿರ್ವಹಿಸುವ ಸಂಸ್ಥೆಯ ಸಿಬ್ಬಂದಿ 5.24 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಡೋದರಾದಲ್ಲಿರುವ ಖಾಸಗಿ ಬ್ಯಾಂಕ್‌ನ ಮೂಲಕ ಮತ್ತೂಂದು ಸಂಸ್ಥೆಗೆ ಕೇವಡಿಯಾದಲ್ಲಿರುವ ಏಕತಾ ಪ್ರತಿಮೆಯ ಪ್ರವೇಶ ಶುಲ್ಕ ಸಂಗ್ರಹಿಸುವ ಹೊಣೆಯನ್ನು ನೀಡಲಾಗಿತ್ತು. 2018ರ ಅಕ್ಟೋಬರ್‌ನಿಂದ ಅದು ಜಗತ್ತಿನಾದ್ಯಂತದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಣ ಸಂಗ್ರಹಿಸಲು ನೇಮಕಗೊಂಡಿದ್ದ ಸಂಸ್ಥೆಯ ಕೆಲವರು 5,24,77,375 ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ಕೇವಡಿಯಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಡಿವೈಎಸ್‌ಪಿ ವಾಣಿ ದುಹಾಟ್ ಬುಧವಾರ ತಿಳಿಸಿದ್ದಾರೆ.
ಇದನ್ನೂ ಓದಿ:ನ್ಯಾಯಾಧೀಶರುಗಳ ಪತ್ನಿಯರ ವಿರುದ್ಧ ಅಶ್ಲೀಲ ಹೇಳಿಕೆ; ನಿವೃತ್ತ ಜಡ್ಜ್ ಕರ್ಣನ್ ಬಂಧನ
ಏಕತಾ ಪ್ರತಿಮೆಯ ಆಡಳಿತ ಮಂಡಳಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಅದೇನಿದ್ದರೂ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಯ ನಡುವಿನ ವಿಚಾರ. ನಮಗೆ ಸಂದಾಯವಾಗಬೇಕಾಗಿರುವ ಮೊತ್ತವನ್ನು ಬ್ಯಾಂಕ್ ಈಗಾಗಲೇ ನೀಡಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.