ವಾಹನ ಅಪಘಾತದಲ್ಲಿ ವೈದ್ಯೆಯ ಸಾವು: 1.20 ಕೋ. ರೂ. ನಷ್ಟ ಪರಿಹಾರ ನೀಡಲು ತೀರ್ಪು
Team Udayavani, Jun 28, 2023, 5:26 AM IST
ಕಾಸರಗೋಡು: ಕಾರವಾರ-ಬೆಳ್ಳಾರಿಯ ಅರೆಬೈಲ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ 2021ರ ಫೆ. 2ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಸಾವಿಗೀಡಾದ ಹೊಸದುರ್ಗ ಕಾಟ್ಟುಕುಳಂಗರೆಯ ಡಾ| ಆರ್. ಪೂಜಾ ಗೌರಿ (23) ಅವರ ಕುಟುಂಬಕ್ಕೆ ಒಟ್ಟು 1.20 ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಎಂ.ಎ.ಸಿ.ಟಿ.(ವಾಹನ ಅಪಘಾತ ನಷ್ಟ ಪರಿಹಾರ ನ್ಯಾಯಾಲಯ) ತೀರ್ಪು ನೀಡಿದೆ.
ಇದರಂತೆ ಎಚ್ಡಿಎಫ್ಸಿ ಇರ್ಗೊ ಜನರಲ್ ಇನ್ಶೂರೆನ್ಸ್ ಕಂಪೆನಿ ಈ ನಷ್ಟ ಪರಿಹಾರ ನೀಡಬೇಕಾಗಿದೆ. ನಷ್ಟ ಪರಿಹಾರ ಮೊತ್ತವಾಗಿ 97,61,440 ರೂ. ಮತ್ತು ಇದರ ಶೇ. 8ರಷ್ಟು ಬಡ್ಡಿ ದರ ಹಾಗೂ ನ್ಯಾಯಾಲಯದ ವೆಚ್ಚ ಸೇರಿದಂತೆ 1.20 ಕೋಟಿ ರೂ. ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ.
ಡಾ| ಸೌಮ್ಯಾ ಗೌರಿ ಸಹಿತ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಎದುರು ಭಾಗದಿಂದ ಬಂದ ಪಿಕಪ್ ಢಿಕ್ಕಿ ಹೊಡೆದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.