![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 14, 2021, 4:47 PM IST
ರಾಜಸ್ಥಾನ: ಆನ್‌ಲೈನ್ ಗೇಮ್‌ಗಳ ರಿಚಾರ್ಜ್ ಟೋಕನ್ ಪಾವತಿ ವಿಚಾರದಲ್ಲಿ ನಡೆದ ಜಗಳದಲ್ಲಿ 16 ವರ್ಷದ ಬಾಲಕನೋರ್ವ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತು ಹಿಸುಕಿ ಕೊಂದು ಹೊಲದಲ್ಲಿ ಹೂತು ಹಾಕಿರುವ ಘಟನೆ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ನಡೆದಿದೆ.
12 ವರ್ಷದ ಬಾಲಕ ನಾಪತ್ತೆಯಾಗಿರುವ ಕುರಿತು ಅವನ ಚಿಕ್ಕಪ್ಪ ಡಿಸೆಂಬರ್ 9 ರಂದು ದೂರು ನೀಡಿದ್ದರು. ಮೊಬೈಲ್‌ನಲ್ಲಿ PUBG ಮತ್ತು ಇತರ ಆನ್‌ಲೈನ್ ಆಟಗಳನ್ನು ಆಡುವ ಚಟ ಹೊಂದಿದ್ದ ತನ್ನ ಸೋದರಳಿಯ ಡಿ. 9 ರಿಂದ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೋದರ ಸಂಬಂಧಿಗಳು ಒಟ್ಟಿಗೆ ಆಟವಾಡುತ್ತಿದ್ದರು ಎಂದು ಮೃತ ಬಾಲಕನ ಚಿಕ್ಕಪ್ಪ ಹೇಳಿದ ಹೇಳಿಕೆಯಿಂದ ಎಚ್ಚೆತ್ತ ಪೊಲೀಸರು 16 ವರ್ಷದ ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾಗ , ಇಬ್ಬರೂ ಆನ್‌ಲೈನ್ ಗೇಮ್‌ಗಳನ್ನು ಆಡುವಾಗ ಹಣಕ್ಕಾಗಿ ಜಗಳವಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮೃತನ ಚಿಕ್ಕಪ್ಪನಿಂದ 5 ಲಕ್ಷ ರೂ. ಆನ್‌ಲೈನ್ ಆಟಗಳಿಗೆ ಪಾವತಿ ಟೋಕನ್‌ಗಳನ್ನು ಖರೀದಿಸಲು ಸುಲಿಗೆ ಮಾಡಲು ಅವನು ಯೋಜಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಗೇಮಿಂಗ್ ಟೋಕನ್‌ಗಳನ್ನು ಖರೀದಿಸಲು ಅವನು ತನ್ನ ಸೋದರ ಸಂಬಂಧಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ. ಅದನ್ನು ಹಿಂದಿರುಗಿಸಲು ವಿಫಲನಾಗಿದ್ದರಿಂದ ಜಗಳ ನಡೆದು ಸಿಟ್ಟಿಗೆದ್ದು 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.