ಏಪ್ರಿಲ್ನಲ್ಲಿ UPI ವಹಿವಾಟು ಮೌಲ್ಯ 14.07 ಲಕ್ಷ ಕೋಟಿ
Team Udayavani, May 3, 2023, 8:08 AM IST
ಮುಂಬೈ: ದೇಶದಲ್ಲಿ ಆನ್ಲೈನ್ ಮತ್ತು ಕ್ಷಿಪ್ರ ಪಾವತಿ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಟ್ಟ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಏಪ್ರಿಲ್ನಲ್ಲಿ 890 ಕೋಟಿ ವಹಿವಾಟು ನಡೆಸಿದೆ. ಅದರ ಮೌಲ್ಯವೇ 14.07 ಲಕ್ಷ ಕೋಟಿ ರೂ. ಆಗಿ, ದಾಖಲೆಯೇ ಆಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೇಳಿದೆ. ಕಳೆದ ತಿಂಗಳು ಯುಪಿಐ ವಹಿವಾಟು ಪ್ರಮಾಣ 2022 ಏಪ್ರಿಲ್ಗೆ ಹೋಲಿಕೆ ಮಾಡಿದರೆ ಶೇ.59 ಏರಿಕೆ ಕಂಡಿದೆ.
ಒಂದು ವರ್ಷದ ಹಿಂದಿನದ್ದಕ್ಕೆ ಹೋಲಿಕೆ ಮಾಡಿದರೆ ವಹಿವಾಟು ಮೌಲ್ಯ ಕೂಡ ಶೇ.49 ಹೆಚ್ಚಾಗಿದೆ ಎಂದು ಪಾವತಿ ನಿಗಮ ಹೇಳಿದೆ. ಫೆಬ್ರವರಿಗೆ ಹೋಲಿಕೆ ಮಾಡಿದರೆ, ಮಾರ್ಚ್ನಲ್ಲಿ ವಹಿವಾಟು ಏರಿಕೆಯಾಗಿತ್ತು. ಐಎಂಪಿಎಸ್ ಮೂಲಕ ನಡೆಸಿದ ವಹಿವಾಟು ಪ್ರಮಾಣ ಕೊಂಚ ಇಳಿಕೆಯಾಗಿದ್ದು, 49.6 ಕೋಟಿ ಆಗಿತ್ತು. ಮಾರ್ಚ್ನಲ್ಲಿ 49.7 ಕೋಟಿ ವಹಿವಾಟು ನಡೆದಿತ್ತು. ಇನ್ನು ಫಾಸ್ಟಾಗ್ ವಹಿವಾಟು ದಾಖಲೆಯ 30.5 ಕೋಟಿ ಆಗಿದ್ದು, ಅದರ ಮೌಲ್ಯ 5,149 ಕೋಟಿ ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.