ಅನುಮಾನಾಸ್ಪದವಾಗಿ ನಿಂತಿತ್ತು ಕಾರು! ಕಾರಿನಲ್ಲಿತ್ತು ಬರೋಬ್ಬರಿ 2.94 ಕೋಟಿ. ರೂ
Team Udayavani, Sep 3, 2020, 12:51 PM IST
ಶ್ರೀನಿವಾಸಪುರ: ಕೋಟ್ಯಂತರ ರೂ. ಇಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ಕಾರು ಹಾಗೂ ಅದರಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ತಾಲೂಕಿನ ರೋಜರನಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ.
ತಾಲೂಕಿನ ರೋಜರನಹಳ್ಳಿ ಕ್ರಾಸ್‌ನಲ್ಲಿ ನಿಂತಿದ್ದ ಕಾರನ್ನು ಸಿಪಿಐ ರಾಘವೇಂದ್ರ ಪ್ರಕಾಶ್, ಎಸ್ಪಿ ಕಾರ್ತೀಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಕಾರಿನಲ್ಲಿದ್ದ ಕೋಲಾರ ಮೂಲದ ಚಂಪಕ್ ಸ್ಟುಡಿಯೋ ಅಮರನಾಥ್ (50), ಚಂದ್ರಶೇಖರ್ (40) ಅವರನ್ನು ಬಂಧಿಸಿದ್ದಾರೆ. ಉಳಿದಂತೆ ರಾಮಪ್ಪ ತಪ್ಪಿಸಿಕೊಂಡಿದ್ದು, ಕಾರು, ಅದರಲ್ಲಿದ್ದ ಒಟ್ಟು 2.94 ಕೋಟಿ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರಿನಲ್ಲಿದ್ದ ಮೂರು ಮಂದಿ ಹಣದ ಸಮೇತ ರೋಜರನಹಳ್ಳಿ ಕ್ರಾಸ್‌ನಲ್ಲಿ ಯಾವುದೋ ವ್ಯವಹಾರ ಮಾಡಲು ಮಂಗಳವಾರ ಮಧ್ಯಾಹ್ನದಿಂದಲೇ ಯಾರಿಗೋ ಕಾದಿದ್ದರೆಂಬ ಅನುಮಾನಗಳು ಹುಟ್ಟಿಕೊಂಡಿವೆ. ಜಮೀನು ಖರೀದಿಸುವ ಸಲುವಾಗಿ ಈ ಹಣ ತಂದಿದ್ದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಆದರೆ, ಈ ಹಣ ಡಬ್ಲಿಂಗ್‌ಗಾಗಿ ತಂದ್ದಾರೆಂಬ ಅನುಮಾನವನ್ನು ಪಟ್ಟಣ ಠಾಣೆ ಸಿಪಿಐ ರಾಘವೇಂದ್ರ ಪ್ರಕಾಶ್ ವ್ಯಕ್ತಪಡಿಸಿದ್ದಾರೆ.
ಎಸ್ಪಿ ಕಾರ್ತೀಕ್‌ರೆಡ್ಡಿ, ಡಿಎಸ್‌ಪಿ ನಾರಾಯಣಸ್ವಾಮಿ ಭೇಟಿ ನೀಡಿದ್ದರು. ಸದ್ಯ ಹಣ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಹಣ ಎಲ್ಲಿಂದ ಬಂತು, ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಿಎಸ್‌ಐ ನಾರಾಯಣಪ್ಪ, ಗೌನಿಪಲ್ಲಿ ಪಿಎಸ್‌ಐ ವರಲಕ್ಷ್ಮೀ, ರಾಯಲ್ಪಾಡು ಪಿಎಸ್‌ಐ ಲಕ್ಷ್ಮೀನರಸಿಂಹಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.