![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 29, 2023, 5:00 AM IST
ಮಂಗಳೂರು: ನಗರದ ಎರಡು ಕಡೆ ಒಂದೇ ದಿನ ಬೈಕ್‌ಗಳನ್ನು ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಮಾ. 27ರಂದು ಮಧ್ಯಾಹ್ನ ವೆಲೆನ್ಸಿಯಾದಲ್ಲಿ ಬ್ಯಾಂಕ್‌ವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಅಂದಾಜು 75,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಕಳವಾಗಿದೆ ಎಂದು ನಿತೇಶ್ ಕುಮಾರ್ ಅವರು ಮಂಗಳೂರು ದಕ್ಷಿಣ ಠಾಣೆಗೆ ದೂರು ನೀಡಿದ್ದಾರೆ.
ಕಪಿತಾನಿಯೋದಲ್ಲಿ ಸುಜೀತ್ ಕುಮಾರ್ ಅವರು ಮಾ. 27ರಂದು ಕಪಿತಾನಿಯೋದ ಕಟ್ಟಡವೊಂದರ ಬಳಿ ಅಪರಾಹ್ನ 3.05ಕ್ಕೆ ನಿಲ್ಲಿಸಿದ್ದ ಬೈಕ್ ಸಂಜೆ 5.30ಕ್ಕೆ ಬಂದು ನೋಡುವಾಗ ಕಳವಾಗಿದೆ ಎಂದು ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.