ಇಂಡೋ-ಪೆಸಿಫಿಕ್‌ಗೆ 2 ಯುದ್ಧನೌಕೆ
Team Udayavani, Jun 5, 2023, 7:10 AM IST
ಬರ್ಲಿನ್: ದಕ್ಷಿಣ ಚೀನ ಸಮುದ್ರದ ವಿಚಾರವಾಗಿ ತೈವಾನ್ ಹಾಗೂ ಚೀನ ನಡುವಿನ ಗುದ್ದಾಟದ ಬೆನ್ನಲ್ಲೇ ಇಂಡೋ-ಪೆಸಿಫಿಕ್ ಸಾಗರ ಭದ್ರತೆಯ ಕಾಳಜಿ ಹೆಚ್ಚಿದ್ದು, 2024ರಲ್ಲಿ ಜರ್ಮನಿಯು ಇಂಡೋ-ಪೆಸಿಫಿಕ್‌ಗೆ 2 ಯುದ್ಧನೌಕೆಗಳನ್ನು ಕಳುಹಿಸುವುದಾಗಿ ತಿಳಿಸಿದೆ. ಸಿಂಗಾಪುರದಲ್ಲಿ ನಡೆದ ಶಾಂಗ್ರಿಲಾ ಭದ್ರತ ಸಂವಾದದಲ್ಲಿ ಭಾಗಿಯಾಗಿದ್ದ ವೇಳೆ ಜರ್ಮನಿ ರಕ್ಷಣ ಸಚಿವ ಬೋರಿಸ್ ಪಿಸ್ಟೋರಿಯಸ್ ಈ ಹೇಳಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ನಿಯಮಗಳನ್ನು ಅರ್ಥೈಸಿಕೊಂಡು ಪ್ರಮುಖ ಸಾಗರ ಮಾರ್ಗಗಳ ರಕ್ಷಣೆಗೆ ದೇಶಗಳು ಒಟ್ಟಾಗಿ ನಿಲ್ಲುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಜರ್ಮನಿ ಸಂಪೂರ್ಣ ಸಹಕಾರ ನೀಡಲಿದ್ದು, ಇಂಡೋ-ಪೆಸಿಫಿಕ್ ಸುರಕ್ಷತೆಗಾಗಿ 2021ರಲ್ಲಿ ಯುದ್ಧನೌಕೆಯನ್ನು ಕಳುಹಿಸಿದೆ. 2024ರಲ್ಲಿಯೂ ಇದೇ ಬದ್ಧತೆಯೊಂದಿಗೆ 2 ಯುದ್ಧನೌಕೆಗಳ ಜತೆಗೆ ಅಗತ್ಯ ಸಾಮಗ್ರಿ ಪೂರೈಕೆ ಹಡಗನ್ನೂ ಕಳುಹಿಸಲಿದೆ ಎಂದಿದ್ದಾರೆ. ಯಾವುದೇ ರಾಷ್ಟ್ರಗಳಿಗೆ ಹೆದರಿ ಅಥವಾ ಯಾವುದೇ ರಾಷ್ಟ್ರಗಳನ್ನು ಉದ್ದೇಶಿಸಿ ಈ ನಿರ್ಣಯ ತೆಗೆದುಕೊಂಡಿಲ್ಲ. ಬದಲಿಗೆ ನಾವೆಲ್ಲರೂ (ವಿಶ್ವ ರಾಷ್ಟ್ರಗಳು) ಒಪ್ಪಿ ಸಹಿ ಮಾಡಿರುವ ಕಾನೂನಿನ ರಕ್ಷಣೆಗೆ ನಮ್ಮ ಬದ್ಧತೆ ಯಾಗಿದೆ ಎಂದಿ ದ್ದಾರೆ. ಇಂಡೋ-ಪೆಸಿಫಿಕ್ ಮೇಲೆ ಚೀನ ವಕ್ರದೃಷ್ಟಿ ಬೀರುತ್ತಿದೆ ಎನ್ನುವ ಮಾತುಗಳು ಕೇಳಿಬಂದಿರುವ ನಡುವೆಯೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.