ಮುತ್ತಿನ ಪ್ರಕರಣ: ಗೇರ್ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್
Team Udayavani, Jan 25, 2022, 4:26 PM IST
ಮುಂಬಯಿ : ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ತಾರೆ ರಿಚರ್ಡ್ ಗೇರ್ ಅವರು ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣದಲ್ಲಿ ಸಿಲುಕಿದ ಸುಮಾರು 15 ವರ್ಷಗಳ ನಂತರ, ನಟಿ ಶಿಲ್ಪಾ ಶೆಟ್ಟಿಯವರನ್ನು ಮುಂಬೈ ನ್ಯಾಯಾಲಯವು ಪ್ರಕರಣದಿಂದ ಬಿಡುಗಡೆ ಮಾಡಿದೆ.
ಶಿಲ್ಪಾ ಶೆಟ್ಟಿ ಕೃತ್ಯದಲ್ಲಿ ಸಂತ್ರಸ್ತೆ ಎಂದು ತೋರುತ್ತದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್ ಅವರಿದ್ದ ನ್ಯಾಯಾಲಯ ಪೀಠ ಜನವರಿ 18 ರಂದು ಶಿಲ್ಪಾ ಶೆಟ್ಟಿಯವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿತ್ತು. ಸೋಮವಾರ ವಿವರವಾದ ಆದೇಶದ ಪ್ರತಿ ಲಭ್ಯವಾಗಿದೆ.
2007 ರಲ್ಲಿ, ರಾಜಸ್ಥಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಗೇರ್ ಅವರು ವೇದಿಕೆಯಲ್ಲೇ ಶಿಲ್ಪಾರನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟಿದ್ದು ದೇಶದಲ್ಲಿ ಸಂಚಲನ ಮೂಡಿಸಿತ್ತು.
ಹಲವರು ದೂರುಗಳನ್ನು ನೀಡಿದ್ದರು. ದೂರುಗಳ ನಂತರ, ಗೆರ್ ಮತ್ತು ಶೆಟ್ಟಿ ಇಬ್ಬರ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಶ್ಲೀಲತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಶಿಲ್ಪಾ ಶೆಟ್ಟಿ ಆರೋಪಿ ನಂ.1 ಆಗಿ ಮತ್ತು ರಿಚರ್ಡ್ ಗೆರ್ ಅವರ ವಿರುದ್ಧ ದೂರು ದಾಖಲಾಗಿತ್ತು. ಚುಂಬನದ ಘಟನೆಯ ಬಳಿಕ ಭಾರತದ ಹಲವೆಡೆ ತೀವ್ರ ಪ್ರತಿಭಟನೆಗಳನ್ನು ನಡೆಸಲಾಗಿತ್ತು.
2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.
ದೂರಿಗೆ ಲಗತ್ತಿಸಲಾದ ಯಾವುದೇ ಸುದ್ದಿ ವರದಿಗಳು ಸಾಮಾನ್ಯ ಉದ್ದೇಶವನ್ನು ಪ್ರದರ್ಶಿಸಿಲ್ಲ ಎಂದು ಮುಂಬೈ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಸಹ ಆರೋಪಿ ಗೆರೆ ಮುತ್ತು ಕೊಟ್ಟಾಗ ಪ್ರತಿಭಟಿಸಲಿಲ್ಲ ಎಂಬುದು ಶೆಟ್ಟಿ ವಿರುದ್ಧದ ಆರೋಪ. “ಇದು ಯಾವುದೇ ಕಲ್ಪನೆಯ ಮೂಲಕ ಅವಳನ್ನು ಯಾವುದೇ ಅಪರಾಧದ ಸಂಚುಗಾರ್ತಿ ಅಥವಾ ಅಪರಾಧಿಯನ್ನಾಗಿ ಮಾಡುವುದಿಲ್ಲ” ಎಂದು ಆದೇಶವು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.