![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 3, 2021, 7:20 AM IST
ಹೊಸದಿಲ್ಲಿ: ಭಾರತ ಏಕದಿನ ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆಗೆ ಶುಕ್ರವಾರ 10 ವರ್ಷ ತುಂಬಿದ ಸಂಭ್ರಮ. ಈ ಸಂದರ್ಭದಲ್ಲಿ ಅಂದಿನ ವಿಜೇತ ತಂಡದಲ್ಲಿದ್ದ ಹಾಲಿ ಮತ್ತು ಮಾಜಿ ಆಟಗಾರರು ಈ ಖುಷಿಯನ್ನು ಮೆಲುಕು ಹಾಕಿದ್ದಾರೆ. ಆದರೆ ಗೌತಮ್ ಗಂಭೀರ್ ಮಾತ್ರ ಕೆಲವು “ಸ್ಟ್ರೇಟ್ ಡ್ರೈವ್’ ಮೂಲಕ ಚಾಟಿ ಬೀಸಿದ್ದಾರೆ. ಅಂದಿನ ನಾಯಕ ಧೋನಿ ವಿರುದ್ಧ ತುಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಭಾರತದ ವಿಶ್ವಕಪ್ ಗೆಲುವಿನಲ್ಲಿ ಅನೇಕ ಸಾಧಕರಿದ್ದಾರೆ. ಇವರೆಲ್ಲರ ಪರಿಶ್ರಮವನ್ನು ಸ್ಮರಿಸಲೇಬೇಕು. ಇವರಲ್ಲಿ ಯುವರಾಜ್ ಸಿಂಗ್ ಅಗ್ರಪಂಕ್ತಿಯಲ್ಲಿದ್ದಾರೆ.
ಹಾಗೆಯೇ ಜಹೀರ್ ಖಾನ್ ಕೂಡ. ಆದರೆ ಕೊನೆಯಲ್ಲಿ ಧೋನಿ ಬಾರಿಸಿದ ಸಿಕ್ಸರ್ ಒಂದನ್ನೇ ಹೈಲೈಟ್ ಮಾಡಿ, ಇದರಿಂದಲೇ ಭಾರತ ಗೆದ್ದಿತು ಎಂದು ಬಿಂಬಿಸಲಾಯಿತು, ಇದು ಸರಿಯಲ್ಲ ಎಂಬುದಾಗಿ ಗಂಭೀರ್ ನೇರ ಆರೋಪ ಮಾಡಿದರು.
ಯುವರಾಜ್ ಸಾಧನೆ ಮೂಲೆಗುಂಪು
ಫೈನಲ್ ಹಣಾಹಣಿಯಲ್ಲಿ ಎಂ.ಎಸ್. ಧೋನಿ ಸಿಡಿಸಿದ ಒಂದೇ ಒಂದು ಸಿಕ್ಸರ್ ಅನೇಕ ಎಡಗೈ ಆಟಗಾರರ ಕಠಿನ ಪ್ರಯತ್ನ ಹಾಗೂ ಸಾಹಸವನ್ನು ಮರೆಸಿದೆ ಎಂದು ಗೌತಮ್ ಗಂಭೀರ್ ವಿಷಾದ ವ್ಯಕ್ತಪಡಿಸಿ ದರು. ಇದರಲ್ಲಿ ಅವರು ಯುವರಾಜ್ ಸಿಂಗ್ ಜತೆಗೆ ತನ್ನನ್ನೂ ನೇರವಾಗಿ ಸೇರಿಸಿಕೊಂಡರು.
2011ರ ಎ. ಎರಡರಂದು ಮುಂಬಯಿಯ “ವಾಂಖೇಡೆ ಕ್ರೀಡಾಂಗಣ’ದಲ್ಲಿ ಶ್ರೀಲಂಕಾ ತಂಡದ ಕುಲಶೇಖರ ಅವರ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸುವುದರೊಂದಿಗೆ ಭಾರತ ಎರಡನೇ ಸಲ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಈ ಒಂದು ಸಿಕ್ಸರ್ ಹೆಚ್ಚು ಖ್ಯಾತಿ ಗಳಿಸಿತು. ಆದರೆ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರಿ “ಸರಣಿಶ್ರೇಷ್ಠ’ರಾಗಿ ಮೂಡಿಬಂದ ಯುವರಾಜ್ ಸಿಂಗ್ ಪ್ರದರ್ಶನವನ್ನು ಸರಿಯಾಗಿ ಗುರುತಿಸಲಿಲ್ಲ’ ಎಂದು ಗಂಭೀರ್ ಹೇಳಿದು.
6 ಸಿಕ್ಸರ್ 6 ವಿಶ್ವಕಪ್‌ಗೆ ಸಮ!
“ಎಲ್ಲರೂ ಧೋನಿ ಅವರ ಆ ಒಂದು ಸಿಕ್ಸರೇ ದೊಡ್ಡದೆಂಬಂತೆ ಬಿಂಬಿಸಿದ್ದಾರೆ. ಯುವ ರಾಜ್ ಸಿಕ್ಸರ್ ಸಾಧನೆಯೇನೂ ಕಡಿಮೆಯಲ್ಲ. ಅವರು ವಿಶ್ವಕಪ್‌ನಲ್ಲೇ ಓವರಿಗೆ 6 ಸಿಕ್ಸರ್ ಬಾರಿಸಿದ ಸಾಹಸಿ. ಧೋನಿ ಸಿಕ್ಸರ್‌ಗೆ ಇದನ್ನು ಹೋಲಿಸುವುದಾದರೆ ಯುವರಾಜ್ ಸಾಧನೆ ಭಾರತದ 6 ವಿಶ್ವಕಪ್ ಗೆಲುವಿಗೆ ಸಮ’ ಎಂದು ಗಂಭೀರ್ ವ್ಯಂಗ್ಯವಾಗಿ ಹೇಳಿದರು. 2011ರ ಏಕದಿನ ವಿಶ್ವಕಪ್‌ನಲ್ಲಿ 90.5ರ ಸರಾ ಸರಿಯಲ್ಲಿ 362 ರನ್ ಸಿಡಿಸಿದ್ದ ಯುವಿ, 25.13ರ ಸರಾಸರಿಯಲ್ಲಿ 15 ವಿಕೆಟ್ ಕಬಳಿಸಿ ಮಿಂಚಿದ್ದರು.
ಅದೇ ರೀತಿ ಫೈನಲ್ ಪಂದ್ಯದಲ್ಲಿ ಜಹೀರ್ ಖಾನ್ ಅವರ ಅಮೋಘ ಮೊದಲ ಸ್ಪೆಲ್ ಬೌಲಿಂಗನ್ನೂ ಗೌತಮ್ ಗಂಭೀರ್ ಪ್ರಶಂಸಿಸಿದರು. ಇದರಲ್ಲಿ ಜಹೀರ್ 3 ಓವರ್ ಮೇಡನ್ ಮಾಡಿದ್ದರು. ಜಹೀರ್ ಕೂಡ ಎಡಗೈ ಬೌಲರ್ ಎಂಬುದನ್ನು ಮರೆಯುವಂತಿಲ್ಲ.
ಫೈನಲ್‌ಗೂ ಮೊದಲೇ ಸರಣಿಶ್ರೇಷ್ಠ
“2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿಗೆ ಮುಖ್ಯ ಕಾರಣ ಯುವರಾಜ್ ಸಿಂಗ್. ಅವರು ಕೂಟದುದ್ದಕ್ಕೂ ಆಲ್‌ರೌಂಡ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಜತೆಗೆ ಫೈನಲ್‌ಗೂ ಮುನ್ನವೇ ಸರಣಿಶ್ರೇಷ್ಠ ಪ್ರಶಸ್ತಿ ಕೂಡ ಯುವರಾಜ್‌ಗೆ ನಿಗದಿಯಾಗಿತ್ತು. ಆದರೂ ಯುವಿ ಸಾಧನೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೂಟದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸದ ಧೋನಿ ಅವರ ಫೈನಲ್ ಸಿಕ್ಸರ್ ಮುಂದೆ ಯುವರಾಜ್ ಸಾಧನೆ ಮೂಲೆಗುಂಪಾದದ್ದು ವಿಪರ್ಯಾಸವೇ ಸರಿ’ ಎಂದು ಗಂಭಿರ್ ಬೇಸರ ವ್ಯಕ್ತಪಡಿಸಿದರು.
ಆಗ ಯುವರಾಜ್ ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿತ್ತು. ಅವರನ್ನು ಕ್ಯಾನ್ಸರ್ ಕಾಡಲಾರಂಭಿಸಿತ್ತು. ಪಂದ್ಯವೊಂದರ ವೇಳೆ ಯುವಿ ಮೈದಾನದಲ್ಲೇ ರಕ್ತವನ್ನೂ ಕಾರಿದ್ದರು. ಆದರೆ ಕ್ಯಾನ್ಸರ್‌ಗೆ ಕ್ಯಾರೇ ಎನ್ನದೇ ದೇಶಕ್ಕಾಗಿ ಆಡಿದ ಧೀಮಂತ ಆಟಗಾರ ಈ ಯುವರಾಜ್ ಎಂಬುದನ್ನು ಮರೆಯುವಂತಿಲ್ಲ ಎಂದರು ಗಂಭೀರ್.
ಮತ್ತೋರ್ವ ಹೀರೋ ಗೌತಮ್ ಗಂಭೀರ್ !
ಫೈನಲ್ ಪಂದ್ಯದ ಮತ್ತೋರ್ವ ಎಡಗೈ ಹೀರೋ ಬೇರೆ ಯಾರೂ ಅಲ್ಲ, ಸ್ವತಃ ಗೌತಮ್ ಗಂಭೀರ್! ಚೇಸಿಂಗ್ ವೇಳೆ ಸೆಹವಾಗ್ (0) ಮತ್ತು ತೆಂಡುಲ್ಕರ್ (18) ವಿಕೆಟ್ ಬೇಗನೇ ಉರುಳಿದಾಗ ಭಾರತದ ರಕ್ಷಣೆಗೆ ನಿಂತವರೇ ಗಂಭೀರ್. ಅವರ 97 ರನ್ನುಗಳ (122 ಎಸೆತ, 9 ಬೌಂಡರಿ) ಅಮೋಘ ಕೊಡುಗೆ ಲಭಿಸದೇ ಹೋದಲ್ಲಿ ಭಾರತ ಖಂಡಿತವಾಗಿಯೂ ಇಕ್ಕಟ್ಟಿಗೆ ಸಿಲುಕುತ್ತಿತ್ತು. ಮೊದಲ ಓವರಿನಲ್ಲೇ ಬ್ಯಾಟ್ ಹಿಡಿದು ಬಂದ ಗಂಭೀರ್, 42ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡದ್ದು ಸಾಮಾನ್ಯ ಸಾಧನೆಯೇನಲ್ಲ. ಅವರ ಈ ಸಾಧನೆಗೂ ಸೂಕ್ತ ಮಾನ್ಯತೆ ಲಭಿಸಲಿಲ್ಲ ಎಂಬುದು ಕೂಡ ದುರಂತವೇ ಆಗಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.