2023 ಸಿಹಿ ಕಹಿಯ ಸಮ್ಮಿಶ್ರ ಫಲ; ಇಲ್ಲಿದೆ ದ್ವಾದಶ ರಾಶಿಗಳ ವಾರ್ಷಿಕ ರಾಶಿಫಲ


Team Udayavani, Jan 1, 2023, 8:29 AM IST

2023 yearly horoscope

ಸೌರಮಾನ ಮತ್ತು ಚಾಂದ್ರಮಾನ ರೀತಿಯ ಎರಡು ಕ್ರಮಗಳ ಗಣನೆ ನಮ್ಮ ದೇಶದ ಜ್ಯೋತಿರ್ಗಣಿತದಲ್ಲಿ ಆಚರಿಸಲ್ಪಡುತ್ತದೆ. ಈ ಎರಡೂ ರೀತಿಯಲ್ಲೂ ಮುಂದಿನ ಸಂವತ್ಸರವು “ಶೋಭಕೃತ್‌’. ಬ್ರಹ್ಮನ 100 ವರ್ಷ ಆಯುಪ್ರಮಾಣದಲ್ಲಿ ದ್ವಿತೀಯ ಶ್ವೇತುವರಾಹ ಕಲ್ಪದಲ್ಲಿ ವೈವಸ್ವತ ಮನ್ವಂತರದಲ್ಲಿ ಕಲಿಯುಗದ 5125 ನೇ ವರ್ಷದಲ್ಲಿ ನಾವಿದ್ದೇವೆ. ಈ ಸಂವತ್ಸರದಲ್ಲಿ ಬುಧ ಶುಕ್ರರಿಗೆ ರಾಜ ಮಂತ್ರಿ ಪದವಿ. ಇದು ಚಾಂದ್ರ ಪದ್ಧತಿಯಲ್ಲಿ ಬುಧನು ರಾಜನೂ, ಶುಕ್ರನು ಮಂತ್ರಿಯೂ ಆಗಿದ್ದಾರೆ. ಸೌರಮಾನಕ್ಕಾಗುವಾಗ ಇದು ವ್ಯುತ್ಕ್ರಮವಾಗಿರುತ್ತದೆ. ಬುಧ ಶುಕ್ರರು ಮಿತ್ರರು. ಇವರ ಯುತಿ ಯಾವಾಗಲೂ ಮಳೆಯನ್ನು ಸೂಚಿಸುತ್ತದೆ. ಅಂದರೆ ಮಳೆಗಾಲ ಮುಗಿಯಲಾರದು ಎಂದರ್ಥ. ತಿಂಗಳು ತಿಂಗಳು ಮಳೆಯಾಗಬಹುದು.

ಸಸ್ಯಕ್ಕೆ ರವಿ ಅಧಿಪತಿಯಾದರೆ, ಧಾನ್ಯಕ್ಕೆ ಅಧಿಪತಿ ಶನಿ. ಇವರಿಬ್ಬರೂ ಶತ್ರುಗಳೆ. ಹಾಗಾಗಿ ಮಳೆಯು ಧಾನ್ಯ, ಸಸ್ಯಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನೇ ತರಬಹುದು. ಹಾಸ್ಯ ಕಲಾವಿದರಿಗೆ, ಹಾಸ್ಯ( ನಗು ಬರಿಸುವ) ನಾಟಕ, ಸಿನೆಮಾ, ಕಥೆಗಳಿಗೆ ಪ್ರಜೆಗಳಿಂದ ಪುರಸ್ಕಾರ, ಪ್ರಶಂಸೆ ದೊರಕಬಹುದು. ದ್ರವ್ಯ, ಕೋಶ, ಶಸ್ತ್ರಾಸ್ತ್ರಗಳಿಗೆ ಗುರುವು ಒಡೆಯನಾಗಿರುವುದರಿಂದ ಇವುಗಳ ಸದುಪಯೋಗವೇ ಜಾಸ್ತಿಯಾಗುತ್ತದೆ. ಅಂದರೆ ಒಂದೆಡೆ ಭಯೋತ್ಪಾದಕರ ಉಪಟಳವೂ ಇದೆ, ಅದಕ್ಕೆ ತಕ್ಕಂತಹ ಪ್ರಹಾರಗಳೂ ಗುರುವಿನ ಅಧಿಪತ್ಯದಿಂದ ಸಾಧ್ಯವಾಗಲಿವೆ. ಒಂದೆಡೆ ಕುಜನಿಂದ ಸಾಂಕ್ರಾಮಿಕ ರೋಗಗಳೂ, ಅದಕ್ಕೆ ಪರಿಹಾರಾರ್ಥವಾಗಿ ಶುಕ್ರನಿಂದ ದೇವತಾ ಕಾರ್ಯಗಳೂ ನಡೆಯಲಿವೆ. ಒಟ್ಟಿನಲ್ಲಿ ಸಿಹಿಯೂ ಇದೆ, ಕಹಿಯೂ ಇದೆ. ಅದಕ್ಕಾಗಿ ಬೇವು-ಬೆಲ್ಲ ಹಂಚಿ ಸಮಾಜದ ಆರೋಗ್ಯ ಕಾಪಾಡೋಣ

ಹೊಸಬರಿಗೆ ಆಕಾಶ-ಅವಕಾಶ

2023 ಅಂತ್ಯದ ವರೆಗೂ ಶನಿಯು ಕುಂಭ ಮೂಲ ತ್ರಿಕೋಣ ರಾಶಿಯಲ್ಲೇ ಇರುವುದು. ಶನಿಯನ್ನು ಮಾತ್ರ ಮಹಾರಾಜರು ಎಂದು ಕರೆದಿದ್ದಾರೆ. ಯಾಕೆಂದರೆ ಇವನಲ್ಲೇ ರಾಜಕೀಯ ಚತುರತೆ ಇರುವುದು. ಅಂದರೆ politics. Governing the work and ideology ಯನ್ನು politics ಅನ್ನುವುದು. ಅಂತಹ ಶನಿಯು ವರ್ಷವಿಡೀ ತನ್ನ ಮೂಲ ತ್ರಿಕೋಣದಲ್ಲಿ ಇರುವುದು. ಇದು ಉಚ್ಚ ರಾಶಿಗಿಂತ ಬಲಿಷ್ಟ. ಜಗತ್ತಿನಾದ್ಯಂತ ಇದರ ಪ್ರಭಾವ ಇದೆ. ಆದರಲ್ಲೂ ಭಾರತವೇ ಇದನ್ನು ಅನುಷ್ಠಾನಿಸಿ ತೋರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅನೇಕ ರಾಜಕೀಯ ನಡೆಗಳು ಇತರ ರಾಷ್ಟ್ರಗಳಿಗೆ ಮಾದರಿ ಆಗಲಿವೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವ ಭೂಗತ ಸಂಘಟನೆಗಳ ಆರ್ಥಿಕತೆಗೆ ಪೆಟ್ಟು ಕೊಡುವಂಥದ್ದು ಇತ್ಯಾದಿ-ಬಹಳ ಪ್ರಭಾವ ಬೀರಲಿದೆ. ಕರ್ನಾಟಕ ಚುನಾವಣೆಯೂ ಇದೇ ವರ್ಷದಲ್ಲಿ ನಡೆಯಲಿದೆ. ಕೇಂದ್ರದಲ್ಲಿ ಯಾವ ಆಡಳಿತ ನಡೆಯುತ್ತಿದೆಯೋ ಅದೇ ಆಡಳಿತವು ಬಹುಮತ ಪಡೆಯಬಹುದು. ಅಲ್ಲದೆ ಅನೇಕ ಹೊಸ ಮುಖಗಳಿಗೆ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ಹಳೇ ಮುಖಗಳು King maker ಗಳಾಗಲಿದ್ದಾರೆ. ಇನ್ನು ರೋಗ  ‌ಭಯ ಇರುತ್ತದೆಯಾದರೂ ರೋಗ ಬಾಧಿಸದು. ಆದರೂ ಸರಕಾರ ಸೂಚಿಸುವ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿ ರೋಗ ರಹಿತ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ.

ದ್ವಾದಶ ರಾಶಿಗಳ ಲಾಫ

ಮೇಷ

ಜನವರಿಯಿಂದ ವರ್ಷಾಂತ್ಯದವರೆಗೂ ಶನಿ ಮಹಾ ರಾಜರು ಕುಂಭ ರಾಶಿ ಸಂಚಾರ ಇರುವುದು ನಿಮ್ಮ ರಾಶಿಗೆ ಲಾಭ ಸ್ಥಾನ ಆಗುತ್ತದೆ. ಇಷ್ಟರ ವರೆಗೆ ಕರ್ಮದಲ್ಲಿ ಸಾಧನೆ ಮಾಡಿದ್ದಕ್ಕೆ ಬಹಳ ಲಾಭ ತರುತ್ತಾನೆ. ಆದರೂ ಎಪ್ರಿಲ್‌ನಿಂದ ಗುರು ಜನ್ಮ ರಾಶಿಗೆ ಬರುವುದರಿಂದ ಆರೋಗ್ಯದ ಕಡೆಗೆ ಗಮನ ಕೊಡಿ. ಅದರಲ್ಲೂ ನಿಮ್ಮ ಜನನ ಕಾಲದ ನಿಮ್ಮ ಜಾತಕ ಕುಂಡಲಿಯಲ್ಲಿ ಕರ್ಕ ರಾಶಿಯಲ್ಲಿ ಶನಿ ಇರದಿದ್ದರೆ ನಿಮಗೆ ಬರುವ ಲಾಭಗಳಿಗೆ ಭಂಗವನ್ನೂ ತರಬಹುದು. ಅನಾರೋಗ್ಯ, ಅಪವಾದ ಇಂಥ ಜಾತಕರಿಗೆ ಬರಬಹುದು. ಅ. 30ರ ಬಳಿಕ ಕೇತುವು ಇಷ್ಟಸ್ಥಿತಿಗೆ ಬರುವುದರಿಂದ ದುಃಖ ನಾಶವೂ, ಮುಂದಿನ ದಿನಗಳ ಬಗ್ಗೆ ಧೈರ್ಯವೂ ಬರಲಿದೆ. ಗಣಪತಿ ಸೇವೆಯಿಂದ ಬಲ ವೃದ್ಧಿ. ವ್ಯಯದ ರಾಹು ಅಕ್ಟೋಬರ್‌ನ ಬಳಿಕ ಸ್ವಲ್ಪ ಅಧಿಕ ಖರ್ಚು ಮಾಡಿಸಿಯಾನು. ಸಂತಾನಾರ್ಥಿಗಳಿಗೆ ಬಹುದಿನಗಳ ಆಸೆ ಈಡೇರಲಿದೆ. ವಿವಾಹ ಆಗಿರದಿದ್ದವರಿಗೆ ಕಂಕಣ ಬಲ ಕೂಡಿ ಬರಲಿದೆ. ಹಿರಿಯರ ಸೇವಾ ಭಾಗ್ಯ ಒದಗಲಿವೆ. ಗುರು ಸೇವೆ, ಶೈವಾಂಶ ದೇವರ ಸ್ಮರಣೆ ಮಾಡಿ.

ವೃಷಭ

ಎಪ್ರಿಲ್‌ನ ಅನಂತರ ಗುರು ವ್ಯಯಸ್ಥಾನದಲ್ಲಿ ಸಂಚರಿಸುತ್ತಾ ಒಂದೆಡೆ ವಾಹನ, ಗೃಹಲಾಭ ಕೊಡುತ್ತಾನೆ. ಭಾಗ್ಯಸ್ಥಾನ ವೀಕ್ಷಣೆಯಿಂದ ಬಾವಿ, ಸರೋವರ ನಿರ್ಮಾಣ, ನಗರದಲ್ಲಿ ಇರುವವರಿಗೆ ನೀರಿನ ವ್ಯವಸ್ಥೆ ಸುಗಮ ಗೊಳಿಸುತ್ತಾನೆ.ಅಂದರೆ ಖರ್ಚಾಗುತ್ತದೆ ಎಂದರ್ಥ. ಅಕ್ಟೋಬರ್‌ನ ಅನಂತರ ನಾಗದೇವರ ಅನುಗ್ರಹ ಲಭಿಸಲಿದೆ. ಅರ್ಥಾತ್‌ ಲಾಭ ಸ್ಥಾನಕ್ಕೆ ರಾಹು ಪ್ರವೇಶಿಸುತ್ತಾನೆ. ಇದರ ಜತೆಗೆ ವರ್ಷವಿಡೀ ಶನಿ ಮಹಾರಾಜರು ಕರ್ಮ ಸ್ಥಾನಗತರಾಗಿ ಅಧಿಕ ಶ್ರಮವನ್ನುಂಟು ಮಾಡಿಸುತ್ತಾರೆ. ಕೋರ್ಟು ಕಚೇರಿ ವ್ಯವಹಾರ ಅಥವಾ ಕೋರ್ಟ್‌ಗೆ ಖಟ್ಲೆಗಳು ದಾಖಲಾಗಬಹುದು. ಇದು ಎಪ್ರಿಲ್‌ ಅನಂತರದ ವಿದ್ಯಮಾನಗಳು. ಆರೋಗ್ಯ ಸಮಸ್ಯೆ ಕಾಡಬಹುದು. ನೀವು ಐವತ್ತು ದಾಟಿದವರಾಗಿದ್ದರೆ ಪೂರ್ಣವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ

ಮಿಥುನ

ಸಕಲ ದುರಿತ ಕಷ್ಟಗಳಿಂದ ಮುಕ್ತಿ. ಲಾಭ ಸ್ಥಾನದ ಗುರು ನಿಮ್ಮನ್ನು ಉನ್ನತ ಮಟ್ಟಕ್ಕೇರಿಸಬಹುದು. ಚುನಾವಣೆಯಲ್ಲಿ ಗೆಲುವು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬಂದೀತು. ಕೋರ್ಟ್‌ ಮೆಟ್ಟಿಲೇರಿದವರಿಗೆ ಶುಭ ಸುದ್ದಿ ಸಿಕ್ಕೀತು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಯಶಸ್ಸು. ನವಮ ಶನಿಯು ಅಭಿವೃದ್ಧಿಗೆ ಆತಂಕ ತರಲೂ ಬಹುದು. ಯೋಚಿಸಿ ಕೆಲಸ ಮಾಡಿ. ಸೋದರ-ಸೋದರಿಯರಿಗೆ ಹೆಚ್ಚಿನ ಹೊಣೆ ಬಂದೀತು. ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಉಂಟಾದೀತು. ಅಕ್ಟೋಬರ್‌ನ ಬಳಿಕ ರಾಹು ದಶಮಕ್ಕೆ ಪ್ರವೇಶಿಸುವುದರಿಂದ ಸಿನೆಮಾ ನಟರಿಗೆ ಹೆಚ್ಚಿನ ಯಶಸ್ಸು. ಸ್ಪರ್ಧಾ ಪರೀಕ್ಷೆ, ಸಾಧಕರಿಗೆ ಸಮ್ಮಾನಗಳು ಲಭಿಸೀತು. ನಿಮ್ಮದು ದ್ವಿಸ್ವಭಾವ ರಾಶಿ ಆಗಿರುವುದರಿಂದ ಚಂಚಲತೆಯು ಉಪದ್ರವ ಆದೀತು. ಸ್ಪಷ್ಟ ನಿರ್ಧಾರಗಳನ್ನು ತಜ್ಞರ ಸಲಹೆ ಪಡೆದು ಸಾಗಿ. ಸುಬ್ರಹ್ಮಣ್ಯ, ಗಣಪತಿ, ಈಶ್ವರ ಆರಾಧನೆ ಮಾಡಿ.

ಕರ್ಕಾಟಕ

ನಿಮಗೆ ಅಷ್ಟಮ ಶನಿ ಪ್ರಾರಂಭ. ಅಪವಾದ, ಮಾನಸಿಕ ಹಿಂಸೆ, ಅನಾರೋಗ್ಯ, ಧನ ನಷ್ಟ, ಕಾರ್ಯಭಂಗ ಇರಬಹುದು. ಆದರೂ ಗುರು ದಶಮದಲ್ಲಿದ್ದು ಒಂದೆಡೆ ಗೃಹ ವಾಹನ ಪ್ರಾಪ್ತಿ, ಕರ್ಮ ಪರಿವರ್ತನೆ ನೀಡುತ್ತಾನೆ. ಉದ್ಯೋಗಿಗಳಿಗೆ ವರ್ಗಾವಣೆ, ಋಣ ಬಾಧೆ, ಕೋರ್ಟು ಕಚೇರಿ ಅಲೆದಾಟ, ಹೊಸ ಉದ್ಯಮಕ್ಕೆ ಸಾಲ ಇತ್ಯಾದಿ ಗುರುವಿನಿಂದ ಮಿಶ್ರ ಫಲ. ನಿಮ್ಮ ಹತ್ತಿರದ ಬಂಧುಗಳಿಂದ ದುರ್ವಾರ್ತೆಯೂ ಕೇಳಿಬರಬಹುದು. ಅಕ್ಟೋಬರ್‌ ಬಳಿಕ ಕೇತುವು ನಿಮ್ಮ ದುಃಖ ನಿವಾರಣೆಗೆ ನಿಲ್ಲುತ್ತಾನೆ. ತೃತೀಯ ಕೇತು ಶುಭ. ಗಣಪತಿಯ ದರ್ಶನ, ಸೇವೆ ಇತ್ಯಾದಿಯಿಂದ ಸತ#ಲ ವೃದ್ಧಿ. ಆರೋಗ್ಯದ ಕಡೆಗೆ ಗಮನ ಅಗತ್ಯ. ಕಣ್ಣು ಬೇನೆ ಇತ್ಯಾದಿ ಸಂಭವ. ದೂರ್ವಾಯುಷ್ಯ ಹೋಮವೋ ಅಥವಾ ಮೃತ್ಯುಂಜಯ ಹೋಮ ಮಾಡಿಸಿ. ಅಥವಾ ಮೃತ್ಯುಂಜಯ ಜಪವನ್ನು ನೀವೇ ಮಾಡಿ.

ಸಿಂಹ

ವರ್ಷಾರಂಭದಲ್ಲಿ ಎಪ್ರಿಲ್‌ವರೆಗೆ ಅಷ್ಟಮ ಗುರು. ಮೇಲ್ನೋಟಕ್ಕೆ ವ್ಯವಹಾರಗಳೆಲ್ಲವೂ ಸಲೀಸಾಗಿ ನಡೆಯದು. ಆರೋಗ್ಯ ಸಮಸ್ಯೆ ಇದೆ ಎಂದು ಕಾಣಬಹುದು. ಇದು ಭ್ರಮೆಯಷ್ಟೆ. ಎಪ್ರಿಲ್‌ನ ಅನಂತರ ಭಾಗ್ಯ ಪ್ರಾಪ್ತಿ. ಎಪ್ರಿಲ್‌ ವರೆಗೆ ಕುಟುಂಬದ ದೈವ ದೇವರ ಚಿಂತನೆ, ಶುದ್ಧೀಕರಣ ಇತ್ಯಾದಿ ನಡೆಯುತ್ತದೆ. ಜನವರಿ ಏಳರ ಅನಂತರ ಸಪ್ತಮ ಶನಿ. ಅಂತಹ ಬಾಧೆಗಳೇನಿಲ್ಲ. ಅಕ್ಟೋಬರ್‌ನ ಅನಂತರ ಆರೋಗ್ಯ ಸಮಸ್ಯೆ ಇದಿರಾದೀತು. ನಾಗನ ಸೇವೆಯ ಮೂಲಕ ವೈದ್ಯರ ಸಲಹೆಯ ಮೂಲಕ ಕ್ಷೇಮ. ಅಕ್ಟೋಬರ್‌ನ ಅನಂತರ ಮಾತಿನಲ್ಲಿ ಎಚ್ಚರ ಇರಲಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ವಿಶೇಷ ಆಸಕ್ತಿ ಉಂಟಾಗುತ್ತದೆ. ಎಪ್ರಿಲ್‌ ಗೆ ಮೊದಲು ಗೃಹ ವಾಹನ ಲಾಭ. ಅನಂತರದ ದಿನಗಳು ಸಂತಾನಾಪೇಕ್ಷಿಗಳಿಗೆ ಸಂತಾನ ಫಲ ನೀಡುತ್ತದೆ. ರಾಶ್ಯಾಧಿಪ ರವಿಯ ಪ್ರೀತ್ಯರ್ಥ ತ್ರಿಮೂರ್ತಿ ಆರಾಧನೆ ಮಾಡಿ.

ಕನ್ಯಾ

ಜನವರಿ ಏಳರ ಅನಂತರ ನಿಮಗೆ ಕಾಡುತ್ತಿದ್ದ ಪಂಚಮ ಶನಿಯು ಈಗ ಷಷ್ಟಸ್ಥಾನಕ್ಕೆ ಬರುತ್ತಿದ್ದಾನೆ. ಷಷ್ಟವು ಶನಿಗೆ ಶತ್ರುನಾಶ ಸ್ಥಾನ. ಶತ್ರು ಎಂದರೆ ಇಲ್ಲಿ ತೊಂದರೆಗಳು, ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು ಇರಬಹುದು. ಮುಂದೆ ಈ ಸಮಸ್ಯೆ ಇರದು. ಇದರ ಪೂರ್ಣ ಅನುಭವ ಎಪ್ರಿಲ್‌ ವರೆಗೆ ಬರುತ್ತದೆ. ಅನಂತರ ಮತ್ತೆ ಗುರುವು ಮೇಷ ರಾಶಿಗೆ ಅಷ್ಟಮಕ್ಕೆ ಬಂದಾಗ ತೊಂದರೆಗಳ ಭ್ರಮೆ ಉಂಟಾಗುತ್ತದೆ. ಆದರೆ ಅದು ತೊಂದರೆಗಳಾಗಿರವು. ಎಲ್ಲಾದರೂ ಈ ಜಾತಕರಿಗೆ ಜನನ ಕಾಲದಲ್ಲಿ ಶನಿಯು ಕರ್ಕದಲ್ಲಿದ್ದು, ಜನನ ಲಗ್ನವೂ ಕರ್ಕವೇ ಆಗಿದ್ದರೆ ತೊಂದರೆ ನಿವಾರಣೆ ಆಗುವುದೇ ತೊಂದರೆಗೆ ಕಾರಣ ಎನ್ನಬಹುದು. ಜೋತಿಷ ತಜ್ಞರನ್ನೊಮ್ಮೆ ಭೇಟಿ ಮಾಡಿ ಸಂಶಯ ನಿವಾರಿಸಿಕೊಳ್ಳಿ. ಈಶ್ವರನ ಸೇವೆ, ಹನುಮನ ಸೇವೆ ಮಾಡಿ. ಗುರು ಪ್ರೀತ್ಯರ್ಥ ನೃಸಿಂಹ ದೇವರ ದರ್ಶನ ಮಾಡಿ.

ತುಲಾ

ನಿಮಗೆ ಪಂಚಮ ಶನಿ ಒಂದೆಡೆ. ಜನ್ಮಕೇತು. ಶನಿಯ ಪ್ರಭಾವದಿಂದ ಅನಾರೋಗ್ಯ. ಆರಂಭದ 4 ತಿಂಗಳು ಗುರು-ರಾಹುವು ಪ್ರತಿಕೂಲವೆ.ಬೇರೆ ಗ್ರಹರು ಶೀಘ್ರ ಪರಿಭ್ರಮಣೆಯಲ್ಲಿರುವ ಕಾರಣ ಆಗಾಗ ಸ್ವಲ್ಪ ಕ್ಷೇಮ. ಉದ್ಯೋಗಿಗಳಿಗೆ ವರ್ಗಾವಣೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಿದರೂ ಎಪ್ರಿಲ್‌ವರೆಗೆ ಕಷ್ಟ. ಋಣ ಬಾಧೆ ಕಾಡೀತು. ಕೋರ್ಟು ಕಚೇರಿ ಅಲೆದಾಟ ಎಪ್ರಿಲ್‌ ವರೆಗೆ. ಬಳಿಕ ಗುರುವಿನಿಂದ ಕ್ಷೇಮ. ಅವಿವಾಹಿತರಿಗೆ ವಿವಾಹ ಯೋಗ. ಅಕ್ಟೋಬರ್‌ ಬಳಿಕ ರಾಹುವು ಮೀನ ರಾಶಿಗೆ ಬರುವ ಕಾರಣ ಶನಿಯ ಪ್ರಭಾವದ ಕಷ್ಟ ಗೋಚರಿಸದು. ರಾಶ್ಯಾಧಿಪ ಶುಕ್ರನಿಗೆ ರಾಜ-ಮಂತ್ರಿ ಪಟ್ಟವು ಇರುವುದರಿಂದ ಕಷ್ಟಗಳಿದ್ದರೂ ತಕ್ಕ ಪರಿಹಾರ ಲಭಿಸಲಿದೆ. ಸೋದರ ವರ್ಗದಲ್ಲಿ ಕಲಹ ಇದ್ದರೆ ಸುಖಾಂತ್ಯ. ದೇವತಾ ಕಾರ್ಯ, ಶುಭ ಕಾರ್ಯ ನಡೆಯಲಿವೆ. ನವಗ್ರಹ ಧಾನ್ಯ ದಾನ, ಸಾಧ್ಯ ಇದ್ದವರು ನವಗ್ರಹ ಹೋಮ ಮಾಡಿಸಿ.

ವೃಶ್ಚಿಕ

ವರ್ಷಾರಂಭದಲ್ಲಿ ಎಪ್ರಿಲ್‌ ವರೆಗೆ ಪಂಚಮ ಗುರು. ವೃಶ್ಚಿಕ ರಾಶಿ ಜಾತಕರಿಗೆ ಎಪ್ರಿಲ್‌ ವರೆಗೆ ಶುಭ. ವಿದ್ಯಾರಂಭಕ್ಕೆ, ಉಪನಯನಕ್ಕೆ ಯೋಗ್ಯ ಗುರುಬಲ ಇದೆ. ಎಪ್ರಿಲ್‌ ವರೆಗೆ ಭಾಗ್ಯ ಪ್ರಾಪ್ತಿ, ಸ್ಥಾನಮಾನ ಗೌರವಾದರಗಳು, ಧನ ಪ್ರಾಪ್ತಿಯ ಕಾಲ. ಎಪ್ರಿಲ್‌ನ ಬಳಿಕ ವರ್ಷಾಂತ್ಯದವರೆಗೆ ಗುರು ಆರನೆಯ ಮನೆಯಲ್ಲಿ ಇರುವುದರಿಂದ ಸಾಲ ಸೋಲ, ಋಣ ಬಾಧೆ, ಕೋರ್ಟು ಕಚೇರಿ ಅಲೆದಾಟಗಳಿವೆ. ಉದ್ಯೋಗ ವರ್ಗಾವಣೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಧನಾಗಮ ಫಲಗಳಿವೆ. ಕುಟುಂಬ ಕಲಹಗಳು ಉದ್ಭವಿಸೀತು. ಅಕ್ಟೋಬರ್‌ನ ಅನಂತರ ದುಃಖೀತ ಮನೋಭಾವನೆಗಳು ಹೋಗಲಿದೆ. ಗಣಪತಿ ಸೇವೆಯಿಂದ ಲಾಭಗಳಿವೆ. ದುರ್ಗಾ ಸೇವೆ, ದುರ್ಗಾ ಪೂಜೆಗಳಿಂದ ಮಾನಸೋಲ್ಲಾಸ ಪಡೆಯಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಎಪ್ರಿಲ್‌ನ ಅನಂತರ ವರ್ಷಾಂತ್ಯದವರೆಗೆ ಇರಲಿ

ಧನು

ಮೊದಲ ನಾಲ್ಕು ತಿಂಗಳಲ್ಲಿ ವಾಹನ ಖರೀದಿ, ಭೂ ಖರೀದಿ, ಗೃಹ ಪ್ರವೇಶಗಳ ಶುಭ ಫಲಗಳಿವೆ. ಅದೇ ರೀತಿ ಆರೋಗ್ಯದ ಕಡೆಗೂ ಗಮನ ಇರಲಿ. ವಾತಾವರಣ ದೋಷದ ಅನಾರೋಗ್ಯ ಸಮಸ್ಯೆ ಬರಬಹುದು. ಕರ್ಮ ಪರಿವರ್ತನೆ, ಉದ್ಯೋಗಿಗಳಿಗೆ ಸ್ಥಾನ ಪಲ್ಲಟ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಅಧಿಕ ಧನ ವ್ಯಯವೂ ಇದೆ. ದೂರದ ಕುಟುಂಬದ ಸೂತಕಾದಿ ಸುದ್ದಿಗಳೂ ಬರಬಹುದು. ಜನವರಿ ಏಳರ ಅನಂತರದ ಶನಿಯು ನಿಮಗೆ ಸೌಭಾಗ್ಯದಾಯಕನೂ ಆಗಿರುತ್ತಾನೆ. ರಾಜಕಾರಣಿಗಳಿಗೆ ಯಶಸ್ಸಿನ ಕಾಲ ಇದು. ಅಕ್ಟೋಬರ್‌ ಬಳಿಕ ರಾಹು ಕೇತುಗಳು ಅನನುಕೂಲವೆ. ಯಶ ಸ್ಸುಗಳ ಸುರಿಮಳೆಯ ಜತೆಗೆ ನಿರುತ್ಸಾಹವೂ ಬರಬಹುದು. ಕೆಲವೊಮ್ಮೆ ನಿಮ್ಮ ಬಂಧುಮಿತ್ರರೊಡನೆ ಸಂಶಯವೂ ಬರಬಹುದು. ನಾಗಾರಾಧನೆ, ಸುಬ್ರಹ್ಮಣ್ಯ ಸೇವೆಗಳಿಂದ ಭಾವೋದ್ವೇಗ ನಿಯಂತ್ರಣ ಮಾಡಿಕೊಳ್ಳಿ.

ಮಕರ

ದ್ವಿತೀಯ ಶನಿ. ಅದರಲ್ಲೂ ರಾಶ್ಯಾಧಿಪ. ಕುಟುಂಬ ಕಲಹ, ಬಾಯಿಗೆ ಸಂಬಂಧಿಸಿದ ತೊಂದರೆಗಳು ಬರಬಹುದು. ಎಪ್ರಿಲ್‌ ವರೆಗೆ ಗುರು ಅನುಕೂಲವಲ್ಲ. ಆದರೂ ಅವಿವಾಹಿತರಿಗೆ ಕಂಕಣ ಬಲವೂ ಬರಲಿದೆ. ಇದು ಎಪ್ರಿಲ್‌ ಒಳಗೆ ಯೋಗ ಪ್ರಾಪ್ತಿಯ ಕಾಲ. ಎಪ್ರಿಲ್‌ನ ಅನಂತರ ಗೃಹ, ವಾಹನ ಲಾಭ. ಉದ್ಯೋಗ ಪರಿವರ್ತನೆ, ವರ್ಗಾವಣೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಎಪ್ರಿಲ್‌ವರೆಗೆ ಆತಂಕಗಳಿದ್ದರೂ ಭಾಗ್ಯ ಪ್ರಾಪ್ತಿ, ಹಿರಿಯರ ದರ್ಶನ ಭಾಗ್ಯವಿದೆ. ಅಕ್ಟೋಬರ್‌ನ ಅನಂತರ ರಾಹುವು ನಿಮಗೆ ತೃತೀಯದಲ್ಲಿ ಬರುವುದರಿಂದ ಭಾಗ್ಯ ವೃದ್ಧಿಯಾಗುತ್ತದೆ. ದುರ್ಗಾ ಸೇವೆ, ನಾಗ ಸೇವೆ ಮಾಡುವುದರಿಂದ ಶುಭ ಫಲಗಳ ವೃದ್ಧಿಯೂ, ಅಶುಭ ಫಲಗಳ ಕ್ಷೀಣತೆಯೂ ಆಗಲಿದೆ. ರಾಜಕಾರಣಿಗಳಿಗೆ ಎಪ್ರಿಲ್‌ನ ಅನಂತರ ವಿಶೇಷ ಜವಾಬ್ದಾರಿ ಲಭಿಸಲಿದೆ.

ಕುಂಭ

ಜನ್ಮ ಶನಿಯು ಆರೋಗ್ಯಕ್ಕೆ ತೊಂದರೆ. ಸೂಕ್ತ ವೈದ್ಯರ ಸಲಹೆ ಅಗತ್ಯ. ಎಪ್ರಿಲ್‌ ವರೆಗೆ ನಾಯಕತ್ವದಲ್ಲಿ ಕೊರತೆ ಇಲ್ಲ. ಸರಿಯಾಗಿ ನಿಭಾಯಿಸಿದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ, ಯಶಸ್ಸೂ ಇದೆ. ಎಪ್ರಿಲ್‌ನ ಅನಂತರ ಸೋದರ ವರ್ಗದಲ್ಲಿ ಭಿನ್ನಮತ ಅಥವಾ ಆಸ್ತಿ ವಿಚಾರದಲ್ಲಿ ವಿವಾದ ಇದ್ದಿದ್ದಲ್ಲಿ ಬಗೆಹರಿಯಲಿದೆ. ಸಹೋದರರಿಗೆ ಅನಾರೋಗ್ಯ ಉಂಟಾದೀತು. ಕೋರ್ಟು ಕಚೇರಿ ಅಲೆದಾಟ ಎಪ್ರಿಲ್‌ ಒಳಗೆ ತೀರ್ಮಾನಕ್ಕೆ ಬರಬಹುದು. ಅವಿವಾಹಿತರಿಗೆ ಎಪ್ರಿಲ್‌ ಅನಂತರ ವಿವಾಹ ಯೋಗ. ರಾಜಕಾರಣಿಗಳಿಗೆ ಉನ್ನತ ಸ್ಥಾನ, ಚುನಾವಣೆಯಲ್ಲಿ ಗೆಲುವು. ಅಕ್ಟೋಬರ್‌ ನ ಬಳಿಕ ರಾಹು ದ್ವಿತೀಯ, ಕೇತು ಅಷ್ಟಮದಲ್ಲಿ ಬರುವುದರಿಂದ ಚರ್ಮಕ್ಕೆ ಸಂಬಂಧಿಸಿದ ತೊಂದರೆ ಎಸಿಡಿಟಿಯ ಮೂಲಕ ಬರುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ಸೇವೆ, ಈಶ್ವರ ಸೇವೆಗಳಿಂದ ತೊಂದರೆಗೆ ಪರಿಹಾರ.

ಮೀನ

ಎಪ್ರಿಲ್‌ವರೆಗೆ ಒಂದೆಡೆ ವ್ಯಯದ ಶನಿಯಿಂದ ಅಧಿಕ ವ್ಯಯ, ಅನಾರೋಗ್ಯ.ಇದಕ್ಕೆ ಗುರುವೂ ಎಪ್ರಿಲ್‌ ವರೆಗೆ ಜನ್ಮದಲ್ಲೇ ಇರುವುದು ಕಾರಣ. ಅಕ್ಟೋಬರ್‌ ನಲ್ಲಿ ರಾಹುವೂ ಜನ್ಮಕ್ಕೇ ಬರುವುದೂ ಅನಾರೋಗ್ಯ ಸೂಚಕ. ಆ ಹೊತ್ತಿಗೆ ದ್ವಿತೀಯ ಗುರುವು ಪರಿಹಾರ ತರುವನು. ಎಪ್ರಿಲ್‌ ಅನಂತರ ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯೋಗಿಗಳಿಗೆ ಭಡ್ತಿ, ವರ್ಗಾವಣೆ. ಅವಿವಾಹಿತರಿಗೆ ವೈವಾಹಿಕ ದೋಷ ಇದ್ದವರಿಗೆ ಪರಿಹಾರ ಮಾಡಿ ಕೊಂಡಿದ್ದಲ್ಲಿ ವಿವಾಹ ಯೋಗ ಫಲ. ನೀವು ತುಂಬಾ ಮೃದು ಸ್ವಭಾವ ಮತ್ತು ಚಂಚಲತೆಯನ್ನು ಉಳ್ಳವರಾದ ಕಾರಣ ಗ್ರಹರ ಅನನುಕೂಲ ಸ್ಥಿತಿಯಲ್ಲಿ ಭಯ ಬೀಳುತ್ತೀರಿ. ವಿಷ್ಣು ಸಹಸ್ರ ನಾಮ ನಿತ್ಯವೂ ಜಪಿಸಿ. ಈಗಾಗಲೇ ಗರ್ಭಧಾರಣೆ ಆಗಿದ್ದಲ್ಲಿ ಉತ್ತಮ ಸಂತಾನ ಸಿಗಲಿದೆ. ಸಪ್ತಮಕ್ಕೆ ಅಕ್ಟೋಬರ್‌ ನ ಅನಂತರ ಕೇತು ಬರುವುದರಿಂದ ಹಣದ ವ್ಯವಹಾರ, ಬಡ್ಡಿ ಲೇವಾದೇವಿ ವ್ಯವಹಾರದವರು ಎಚ್ಚರಿಕೆಯಿಂದಿರಿ. ಗಣಪತಿ ಸೇವೆಯಿಂದ ಕ್ಷೇಮ.

ಪ್ರಕಾಶ್‌ ಅಮ್ಮಣ್ಣಾಯ,

ಜ್ಯೋತಿರ್ವಿಜ್ಞಾನಂ, ಕಾಪು

ಟಾಪ್ ನ್ಯೂಸ್

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

Dina Bhavishya

Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.