ಉಡುಪಿ ಜಿಲ್ಲೆಯಲ್ಲಿ 206 ಶತಾಯುಷಿ ಮತದಾರರು
Team Udayavani, Apr 1, 2023, 7:29 AM IST
ಉಡುಪಿ: ಮುಂಬರುವ ವಿಧಾನಸಭೆ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, ಜಿಲ್ಲೆಯ 10 ಲಕ್ಷಕ್ಕೂ ಅಧಿಕ ಮತದಾರರಲ್ಲಿ 206 ಮಂದಿ 100 ವರ್ಷ ಮೇಲ್ಪಟ್ಟವರಾಗಿದ್ದಾರೆ.ಜಿಲ್ಲಾ ಚುನಾವಣ ವಿಭಾಗದ ಮಾಹಿತಿ ಪ್ರಕಾರ ಉಡುಪಿ ಕ್ಷೇತ್ರದಲ್ಲಿ 69 ಮಂದಿ ಹೆಚ್ಚು ಶತಾ ಯುಷಿ ಮತದಾರರಿದ್ದಾರೆ. ಬೈಂದೂರಿ ನಲ್ಲಿ 38, ಕುಂದಾಪುರದಲ್ಲಿ 21, ಕಾಪುವಿನಲ್ಲಿ 38 ಹಾಗೂ ಕಾರ್ಕಳದಲ್ಲಿ 43 ಮಂದಿ ಶತಾಯುಷಿಗಳಿದ್ದಾರೆ.ಇವರಲ್ಲಿ ಬಹುತೇಕರು ಮೊದಲ ಚುನಾವಣೆ ಯಿಂದಲೂ ನಿರಂತರವಾಗಿ ಮತದಾನ ಮಾಡಿಕೊಂಡು ಬರುತ್ತಿರುವವರು ಎಂಬುದು ವಿಶೇಷ.
90ರಿಂದ 99 ವರ್ಷದ 4,574 ಮತದಾರರು ಜಿಲ್ಲೆ ಯಲ್ಲಿದ್ದಾರೆ. ಬೈಂದೂರಿನಲ್ಲಿ 754, ಕುಂದಾಪುರದಲ್ಲಿ 861, ಉಡುಪಿಯಲ್ಲಿ 1,226, ಕಾಪುವಿನಲ್ಲಿ 870 ಹಾಗೂ ಕಾರ್ಕಳ ದಲ್ಲಿ 835 ಮತದಾರರಿದ್ದಾರೆ. 80ರಿಂದ 90 ವರ್ಷದ ಮತದಾರರ ಸಂಖ್ಯೆ 24,485 ಇದೆ. ಇವರೆಲ್ಲರೂ ಎಪಿಕ್ ಕಾರ್ಡ್ ಹೊಂದಿದ್ದಾರೆ ಮತ್ತು ಅದರಲ್ಲಿರುವ ವರ್ಷದ ಆಧಾರದಲ್ಲಿ ಅಂಕಿಅಂಶಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ.
80 ವರ್ಷ ಮೇಲ್ಪಟ್ಟವರಿಗೆ ಈ ಬಾರಿ ಅಂಚೆ ಮತದಾ ನದ ಅವಕಾಶ ಕಲ್ಪಿಸಲಾಗಿದೆ. ಶತಾಯುಷಿಗಳೂ ಮನೆಯಿಂ ದಲೇ ಮತ ಚಲಾಯಿಸುವರು. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಆದರೆ, ಅಂಚೆ ಮತದಾನ ಮಾಡುವ ವರು ಮುಂಚಿತವಾಗಿಯೇ ತಮ್ಮ ಬಿಎಲ್‌ಒಗಳ ಮೂಲಕ ಮಾಹಿತಿಯನ್ನು ನೀಡಬೇಕು. ಮತದಾನ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ ಮತದಾನದ ದಿನ ಅಂಚೆ ಮತದಾನ ಮಾಡುತ್ತೇವೆ ಎಂದರೆ ಅವಕಾಶ ಇರದು ಎನ್ನುತ್ತಾರೆ ಅಧಿಕಾರಿಯೊಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.