![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 6, 2022, 8:23 PM IST
ಬೆಂಗಳೂರು: ಪಂಚಮಸಾಲಿ ಲಿಂಗಾಯತರಿಗೆ ಮಾತ್ರವಲ್ಲ; ಇಡೀ ವೀರಶೈವ-ಲಿಂಗಾಯತ ಸೇರಿ ಅವಕಾಶ ವಂಚಿತ ಎಲ್ಲ ಸಮುದಾಯಗಳಿಗೂ 2ಎ ಮೀಸಲಾತಿ ನೀಡಬೇಕೆಂದು ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಮಂಗಳವಾರ ಬೆಂಗಳೂರು ಪ್ರಸ್‌ಕ್ಲಬ್ ಹಮ್ಮಿಕೊಂಡಿದ್ದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 2ಎ ಮೀಸಲಾತಿಯಿಂದ ಸಾಕಷ್ಟು ಸಮುದಾಯಗಳು ವಂಚಿತವಾಗಿವೆ. ಹಾಗಾಗಿ, ಕೇವಲ ಪಂಚಮಸಾಲಿಗೆ ಸೀಮಿತವಾಗದೆ, ವೀರಶೈವ-ಲಿಂಗಾಯತರು ಒಳಗೊಂಡಂತೆ ಎಲ್ಲ ಸಮುದಾಯಗಳಿಗೂ ಈ ಸೌಲಭ್ಯ ಸಿಗುವಂತಾಗಬೇಕೆಂದು ಹೇಳಿದರು.
ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.26ರಷ್ಟು ಅಂದರೆ ಅಂದಾಜು 1.25 ಕೋಟಿ ವೀರಶೈವ-ಲಿಂಗಾಯತ ಸಮುದಾಯದವರು ಇದ್ದಾರೆ. ಇದರಲ್ಲಿ 80 ಲಕ್ಷ ಪಂಚಮಸಾಲಿಗಳಿದ್ದು, 18 ಜನ ಈ ಸಮುದಾಯಕ್ಕೆ ಸೇರಿದ ಶಾಸಕರಿದ್ದಾರೆ. ಇವರ ಮೀಸಲಾತಿ ಕೂಗು ಈಗ ವಿಧಾನಸೌಧಕ್ಕೆ ಕೇಳಿಸುತ್ತಿದೆ. ಇನ್ನು ಲಿಂಗಾಯತದಲ್ಲಿನ ಒಳಪಂಗಡಗಳಾದ ಸಾದರ ಲಿಂಗಾಯತದ ಆರು ಜನ ಶಾಸಕರು, ಬಣಜಿಗರಲ್ಲಿ ಐದು ಜನ, ಜಂಗಮ ಮತ್ತು ನೊಣಬ ಲಿಂಗಾಯತರಲ್ಲಿ ತಲಾ ಇಬ್ಬರು ಶಾಸಕರಿದ್ದಾರೆ. ಒಟ್ಟಾರೆ ಅತಿ ಹೆಚ್ಚು ಶಾಸಕರನ್ನು ಈ ಸಮುದಾಯ ಒಳಗೊಂಡಿದೆ. ಆದಾಗ್ಯೂ 2ಎ ಸೌಲಭ್ಯದಿಂದ ವಂಚಿತ ಆಗಿದೆ ಎಂದು ಹೇಳಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.