ರಕ್ಷಣೆಗೆ 4.78 ಲಕ್ಷ ಕೋ.ರೂ. ಮೀಸಲು: ಶೇ.19ರಷ್ಟು ಅಧಿಕ
Team Udayavani, Feb 2, 2021, 5:45 AM IST
ದೇಶದ ರಕ್ಷಣೆಗಾಗಿನ ವೆಚ್ಚಕ್ಕಾಗಿ ಈ ಬಾರಿ ಬಜೆಟ್‌ನಲ್ಲಿ 4.78 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 1.35 ಲಕ್ಷ ಕೋಟಿ ರೂ.ಗಳನ್ನು ಸುಧಾರಿತ ರಕ್ಷಣಾ ಸಾಮಗ್ರಿ ಖರೀದಿಗೆ ಕಾದಿರಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ. 19ರಷ್ಟು ಅಧಿಕವಾಗಿದೆ. ಈ ವರ್ಷ ಮೊದಲ ಬಾರಿಗೆ ಜನಗಣತಿ ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ಇದಕ್ಕೆ 3,768 ಕೋಟಿ ರೂ.ಗಳನ್ನು ಕಾದಿರಿಸಲಾಗಿದೆ. ಇದರ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಯಲ್ಲಿ ಒತ್ತು ನೀಡುವ ಸಂಶೋಧನೆಗಳಿಗೂ ಅನುದಾನ ಮೀಸಲಿಡಲಾಗಿದೆ. ಪೊಲೀಸ್ ಪಡೆ ಬಲವರ್ಧನೆಗೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೂ ಬಜೆಟ್‌ನಲ್ಲಿ ಹಣ ಕಾದಿರಿಸಲಾಗಿದೆ.
ಹೊಸದಿಲ್ಲಿ: ನೆರೆಯ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಗಡಿಯಲ್ಲಿ ಪದೇ ಪದೆ ಕಾಲುಕೆರೆದು ಜಗಳ ಕಾಯು ತ್ತಿರುವ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸೇನೆಗೆ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನ, ಸಮರ ನೌಕೆ ಹಾಗೂ ಇತರ ಸೇನಾ ಪರಿಕರಗಳ ಖರೀದಿ ಸಹಿತ ಸೇನಾಪಡೆಗಳ ಬಲವರ್ಧ ನೆಗೆ ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಿನ ಮೊತ್ತವನ್ನು ಮೀಸಲಿರಿಸಲಾಗಿದೆ.
ರಕ್ಷಣೆಗೆ ಒಟ್ಟಾರೆ ಮೀಸಲಿರಿಸಲಾಗಿರುವ ಮೊತ್ತದಲ್ಲಿ 1.35ಲ.ಕೋ. ರೂ.ಗಳನ್ನು ರಕ್ಷಣ ಸಾಮಗ್ರಿಗಳ ಖರೀದಿಗಾಗಿ ಕಾದಿರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕಳೆದ ಬಾರಿ ರಕ್ಷಣೆಗೆ 4.71ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದ್ದರೆ ಈ ಬಾರಿ 4.78ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿ ಸಲಾಗಿದೆ. ಇದರಲ್ಲಿ ಪಿಂಚಣಿಯನ್ನು ಹೊರತುಪಡಿಸಿದರೆ 3.62ಲಕ್ಷ ಕೋಟಿ ರೂ.ಗಳು ರಕ್ಷಣ ಇಲಾಖೆಗೆ ಲಭಿಸಲಿದೆ. ಕಳೆದ ಸಾಲಿನಲ್ಲಿ ರಕ್ಷಣ ಬಜೆಟ್‌ನಲ್ಲಿ ಒಟ್ಟಾರೆ 1.13ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ವಿನಿಯೋಗವಾಗಿದೆ. ವೇತನ ಪಾವತಿ ಮತ್ತು ಕಟ್ಟಡಗಳ ನಿರ್ವಹಣೆ ಸಹಿತ ಒಟ್ಟಾರೆ ಆದಾಯ ವೆಚ್ಚವು 3.37ಲಕ್ಷ ಕೋಟಿ ರೂ.ಗಳಷ್ಟಾಗಿದ್ದರೆ ಪಿಂಚಣಿ ಪಾವತಿಗಾಗಿ 1.15ಲಕ್ಷ ಕೋಟಿ ರೂ. ವೆಚ್ಚವಾಗಿದೆ.
ರಕ್ಷಣ ಕ್ಷೇತ್ರಕ್ಕೆ 2021-22ನೇ ಸಾಲಿನ ಬಜೆಟ್‌ನಲ್ಲಿ ಕಳೆದ ಬಾರಿಗಿಂತ ಶೇ. 19ರಷ್ಟು ಹೆಚ್ಚಿನ ಮೊತ್ತ ಮೀಸಲಿರಿಸಿರುವುದಕ್ಕೆ ರಕ್ಷಣ ಸಚಿವ ರಾಜನಾಥ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ. ರಕ್ಷಣ ಖಾತೆಗೆ ಕಳೆದ 15ವರ್ಷಗಳಲ್ಲಿಯೇ ಮೀಸಲಿರಿಸಲಾದ ಅತ್ಯಂತ ಅಧಿಕ ಮೊತ್ತ ಇದಾಗಿದೆ ಎಂದು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪೊಲೀಸ್ ಪಡೆಗಳ ಬಲವರ್ಧನೆಗೆ ಒತ್ತು
2021-22ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಗೃಹ ವ್ಯವಹಾರಗಳ ಖಾತೆಗೆ 1,66, 547 ಕೋ. ರೂ. ಅನುದಾನವನ್ನು ನೀಡ ಲಾ ಗಿದೆ. ಈ ಪೈಕಿ ಗರಿಷ್ಠ ಮೊತ್ತ ಪೊಲೀಸ್ ಪಡೆಗಳ ಬಲವರ್ಧನೆ ಮತ್ತು ಜನಗಣತಿ ಸಂಬಂಧಿ ಕಾರ್ಯಗಳಿಗೆ ವಿನಿಯೋಗವಾಗಲಿದೆ.
ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಮತ್ತಿತರ ಪೊಲೀಸ್ ಪಡೆಗಳಿಗೆ 1,03,802.52ಕೋ. ರೂ., ಹೊಸದಾಗಿ ರಚನೆ ಯಾದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಕ್ರಮವಾಗಿ 30,757 ಕೋ. ರೂ. ಮತ್ತು 5,958ಕೋ. ರೂ.ಗಳನ್ನು ಮೀಸಲಿಡಲಾಗಿದೆ.
ಕೇಂದ್ರೀಯ ವಲಯದ ಯೋಜನೆಗಳಿಗೆ 1,641.12ಕೋ. ರೂ. ಮತ್ತು ವಿಪತ್ತು ನಿರ್ವ ಹಣೆಗೆ 481.61ಕೋ. ರೂ.ಗಳನ್ನು ನಿಗದಿಗೊಳಿ ಸಲಾಗಿದೆ. ಇನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಅರ್ಹತೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಲೋಕಪಾಲ್‌ಗೆ 39.67ಕೋ. ರೂ.
ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯಾಗಿರುವ ಲೋಕಪಾಲ್‌ಗೆ ಕೇಂದ್ರ ಸರಕಾರ ತನ್ನ ಮುಂಬರುವ ಬಜೆಟ್‌ನಲ್ಲಿ ಸರಿಸುಮಾರು 40ಕೋ. ರೂ.ಗಳಷ್ಟು ಅನುದಾನವನ್ನು ಮೀಸಲಿರಿಸಿದೆ. ಲೋಕಪಾಲ್ ಸ್ಥಾಪನೆ ಮತ್ತು ನಿರ್ಮಾಣ ಸಂಬಂಧಿ ಕಾರ್ಯಗಳಿಗಾಗಿ ಈ ಬಾರಿ ಲೋಕ ಪಾಲ್‌ಗೆ 39.67ಕೋ. ರೂ. ತೆಗೆದಿರಿಸಲಾಗಿದೆ. ಇದೇ ವೇಳೆ ಕೇಂದ್ರೀಯ ಜಾಗೃತಿ ಆಯೋಗಕ್ಕೆ 38.67ಕೋ. ರೂ.ಗಳನ್ನು ಮುಂಬರುವ ಬಜೆಟ್‌ನಲ್ಲಿ ಕಾದಿರಿಸಲಾಗಿದೆ.
ವರ್ಷಾಂತ್ಯದಲ್ಲಿ ಗಗನಯಾನ
ಇಸ್ರೋ ಕೈಗೊಳ್ಳಲುದ್ದೇಶಿಸಿರುವ ಮಹತ್ವಾಕಾಂಕ್ಷೆಯ ದೇಶದ ಪ್ರಪ್ರಥಮ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ಭಾರತದ ನಾಲ್ಕು ಗಗನಯಾನಿಗಳು ಇದೀಗ ರಷ್ಯಾದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಗಗನಯಾನವನ್ನು ಕೈಗೊಳ್ಳಲುದ್ದೇಶಿಸಲಾಗಿದೆ.
ಅಧಿಕಾರಿ ತರಬೇತಿಗೆ 257 ಕೋಟಿ ರೂ.
ಅಧಿಕಾರಿಗಳಿಗೆ ದೇಶದಲ್ಲಿ ಮತ್ತು ಅಗತ್ಯ ಬಿದ್ದರೆ ವಿದೇಶಿ ನೆಲದಲ್ಲಿ ತರಬೇತಿ ನೀಡಲು ಮತ್ತು ಮೂಲಸೌಕರ್ಯ ಗಳನ್ನು ಹೆಚ್ಚಿಸಲು 257 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. 257.35 ಕೋಟಿ ರೂ.ಗಳಲ್ಲಿ 178.32 ಕೋಟಿ ರೂ.ಗಳನ್ನು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮೀಸಲಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.