ಕೊಲೆಗೆ ಯತ್ನ: ಅಳಕೆ ಗ್ಯಾಂಗ್ ನ ನಾಲ್ವರನ್ನು ಬಂಧಿಸಿದ ಮಂಗಳೂರು ಪೊಲೀಸರು
Team Udayavani, Dec 4, 2021, 3:42 PM IST
ಮಂಗಳೂರು : ಅಳಕೆ ಮತ್ತು ಬೋಳೂರು ಗ್ಯಾಂಗ್ ಗಳ ನಡುವಿನ ದ್ವೇಷ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲವಾರು ದಾಳಿ ನಡೆಸಿದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 28 ರ ನಸುಕಿನ 2 ಗಂಟೆಯ ವೇಳೆಗೆ ಅಂಕಿತ್ ಮತ್ತು ಶ್ರವಣ್ ಎನ್ನುವವರ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದ ಆರೋಪಿಗಳಾದ ಅಳಕೆ ಗ್ಯಾಂಗಿನ ಹತ್ಯೆಗೀಡಾದ ಇಂದ್ರಜಿತ್ ಸ್ನೇಹಿತರಾದ ನವನೀತ್ ಅಶೋಕನಗರ , ಹೇಮಂತ್ ಹೊಯಿಗೆ ಬೈಲ್ , ದೀಕ್ಷಿತ್ ಬೋಳೂರು, ಮತ್ತು ಆರೋಪಿಗಳು ತಲೆ ಮರೆಸಿಕೊಳ್ಳಲು ನೆರವಾದ ಸಂದೇಶ್ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಇತರರ ಬಂಧನ ಬಾಕಿ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಬಳಸಿದ 3 ತಲವಾರುಗಳು, 3 ದ್ವಿಚಕ್ರ ವಾಹನಗಳನ್ನು ಮತ್ತು ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಈ ಹಿಂದೆಯೂ ಅಪರಾಯಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಹೇಮಂತ್ ಮೂರು ಪ್ರಕರಣಗಳಲ್ಲಿ, ನವನೀತ್ 2 ಪ್ರಕರಣಗಳಲ್ಲಿ ಮತ್ತು ದೀಕ್ಷಿತ್ 1 ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದರು.
2020 ರಲ್ಲಿ ಇಂದ್ರಜಿತ್ ನನ್ನ ಬೋಳೂರು ಗ್ಯಾಂಗ್ ಹತ್ಯೆ ಮಾಡಿತ್ತು.
2014 ರಲ್ಲಿ ಬೋಳೂರು ಗ್ಯಾಂಗ್ ನ ತಲ್ವಾರ್ ಜಗ್ಗ ಸೇರಿ ಮೂವರ ಹತ್ಯೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.