5 ಸಾವಿರದ ಒಳಗಿನ ಅಂತರ 43 ಅಭ್ಯರ್ಥಿಗಳಿಗೆ ಜಯ
Team Udayavani, May 15, 2023, 8:14 AM IST
ರಾಜ್ಯ ವಿಧಾನಸಭೆ ಚುನಾವಣ ಫಲಿತಾಂಶ ಹಲವಾರು ಅಚ್ಚರಿಗಳಿಗೂ ಕಾರವಾಗಿದ್ದು, ಹಲವಾರು ಕಡೆಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿಯೂ ಕಂಡು ಬಂದಿದೆ. ಈ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದಲ್ಲಿ ಸುಮಾರು 23 ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದ್ದು, ಮೂರು ಪಕ್ಷಗಳಿಂದ 43 ಅಭ್ಯರ್ಥಿಗಳು “5000 ಓಟ್ ಕ್ಲಬ್’ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಐದು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಸಚಿವರಾದ ವಿ. ಸುನಿಲ್ ಕುಮಾರ್, ಶಿವರಾಂ ಹೆಬ್ಟಾರ್, ಸಿ.ಸಿ.ಪಾಟೀಲ್ ಸಹಿತ ಬಿಜೆಪಿಯ 17 ಶಾಸಕರು ಇದೇ ಅಂತರದಲ್ಲಿ ಜಯಗಳಿಸಿದ್ದಾರೆ. ಜೆಡಿಎಸ್‌ನ ಮೂರು ಶಾಸಕರು ಈ ಪಟ್ಟಿಯಲ್ಲಿದ್ದಾರೆ.
ಕಡಿಮೆ ಅಂತರದಲ್ಲಿ ಗೆದ್ದು- ಸೋತವರ ಪಟ್ಟಿ ಹೀಗಿದೆ….
ಶೃಂಗೇರಿ(ಕಾಂಗ್ರೆಸ್) -ಟಿ.ಡಿ.ರಾಜೇಗೌಡ
ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ವಿರುದ್ಧ 201 ಮತಗಳ ಗೆಲುವು
ಮೂಡಿಗೆರೆ(ಕಾಂಗ್ರೆಸ್) ನಯನಾ ಮೋಟಮ್ಮ
ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ವಿರುದ್ಧ 722 ಮತಗಳ ಗೆಲುವು
ಕಾರ್ಕಳ(ಬಿಜೆಪಿ) ವಿ. ಸುನಿಲ್ ಕುಮಾರ್
ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ವಿರುದ್ಧ 4,602 ಮತಗಳ ಗೆಲುವು
ತುಮಕೂರು ನಗರ(ಬಿಜೆಪಿ) ಜ್ಯೋತಿಗಣೇಶ್
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ 3,198 ಮತಗಳ ಗೆಲುವು
ತುಮಕೂರು ಗ್ರಾ.(ಬಿಜೆಪಿ) ಬಿ.ಸುರೇಶ್ ಗೌಡ
ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ವಿರುದ್ಧ 4,594 ಮತಗಳ ಗೆಲುವು
ಬಂಗಾರಪೇಟೆ (ಕಾಂಗ್ರೆಸ್)
ಎಸ್.ಎನ್.ನಾರಾಯಣಸ್ವಾಮಿ
ಜೆಡಿಎಸ್ ಅಭ್ಯರ್ಥಿ – ಮಲ್ಲೇಶ್ ಬಾಬು ವಿರುದ್ಧ 4,711 ಮತಗಳ ಗೆಲುವು
ಮಾಲೂರು(ಕಾಂಗ್ರೆಸ್)ಕೆ.ವೈ. ನಂಜೇಗೌಡ
ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ 248 ಮತಗಳ ಗೆಲುವು
ಹೊಸಕೋಟೆ(ಕಾಂಗ್ರೆಸ್)ಶರತ್ ಬಚ್ಚೇಗೌಡ
ಬಿಜೆಪಿ ಅಭ್ಯರ್ಥಿ ಎನ್.ನಾಗರಾಜ್ ವಿರುದ್ಧ 4,787 ಮತಗಳ ಗೆಲುವು
ದೇವನಹಳ್ಳಿ(ಕಾಂಗ್ರೆಸ್)ಕೆ.ಎಸ್.ಮುನಿಯಪ್ಪ
ಜೆಡಿಎಸ್ ಅಭ್ಯರ್ಥಿ ನಾರಾಯಣಸ್ವಾಮಿ ವಿರುದ್ಧ 4,631 ಮತಗಳ ಗೆಲುವು
ಮಂಡ್ಯ(ಕಾಂಗ್ರೆಸ್)ರವಿಕುಮಾರ್ ಗಣಿಗ
ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ವಿರುದ್ಧ 2,019 ಮತಗಳ ಗೆಲುವು
ನಾಗಮಂಗಲ(ಕಾಂಗ್ರೆಸ್)ಎನ್.ಚಲುವನಾರಾಯಣ ಸ್ವಾಮಿ
ಜೆಡಿಎಸ್‌ನ ಸುರೇಶ್ ಗೌಡ ವಿರುದ್ಧ 4,414 ಮತಗಳ ಗೆಲುವು
ರಾಯಭಾಗ(ಬಿಜೆಪಿ)ದುರ್ಯೋಧನ ಐಹೊಳೆ
ಪಕ್ಷೇತರ ಶಂಭು ಕಲ್ಲೋಳಕರ 54,533 ವಿರುದ್ಧ 2,631 ಮತ ಗೆಲುವು
ಬೆಳಗಾವಿ ಉತ್ತರ(ಕಾಂಗ್ರೆಸ್)ಆಸಿಫ್ ಸೇs…
ಬಿಜೆಪಿ ರವಿ ಪಾಟೀಲ ವಿರುದ್ಧ 5,041 ಮತಗಳ ಗೆಲುವು
ಕಿತ್ತೂರು(ಕಾಂಗ್ರೆಸ್)ಬಾಬಾಸಾಹೇಬ ಪಾಟೀಲ
ಬಿಜೆಪಿ ಮಹಾಂತೇಶ ದೊಡ್ಡಗೌಡರ ವಿರುದ್ಧ 2,993 ಮತಗಳ ಗೆಲುವು
ಬೈಲಹೊಂಗಲ(ಕಾಂಗ್ರೆಸ್)ಮಹಾಂತೇಶ ಕೌಜಲಗಿ
ಬಿಜೆಪಿ ಜಗದೀಶ ಮೆಟಗುಡ್ಡ ವಿರುದ್ಧ 2,778 ಮತಗಳ ಗೆಲುವು
ಜಮಖಂಡಿ(ಬಿಜೆಪಿ) ಜಗದೀಶ ಗುಡಗುಂಟೆ
ಕಾಂಗ್ರೆಸ್ ನ ಆನಂದ ನ್ಯಾಮಗೌಡ ವಿರುದ್ಧ 4,761 ಮತಗಳ ಗೆಲುವು
ಅಫಜಲಪುರ(ಕಾಂಗ್ರೆಸ್)ಎಂ.ವೈ. ಪಾಟೀಲ
ಬಿಜೆಪಿ ಮಾಲೀಕಯ್ಯ ಗುತ್ತೇದಾರ ವಿರುದ್ಧ 4,594 ಮತಗಳ ಗೆಲುವು
ಚಿಂಚೋಳಿ(ಬಿಜೆಪಿ) ಡಾ| ಅವಿನಾಶ ಜಾಧವ
ಕಾಂಗ್ರೆಸ್ ಸುಭಾಷ ರಾಠೊಡ ವಿರುದ್ಧ 858 ಮತಗಳ ಗೆಲುವು
ಕಲಬುರಗಿ ಉತ್ತರ(ಕಾಂಗ್ರೆಸ್)ಕನೀಜ್ ಫಾತೀಮಾ
ಬಿಜೆಪಿ ಚಂದ್ರಕಾಂತ ಪಾಟೀಲ ವಿರುದ್ಧ 2,712 ಮತಗಳ ಗೆಲುವು
ಯಾದಗಿರಿ(ಕಾಂಗ್ರೆಸ್)ಚನ್ನಾರೆಡ್ಡಿ ತುನ್ನೂರ
ಬಿಜೆಪಿ ವೆಂಕಟರೆಡ್ಡಿ ಮುದ್ನಾಳ ವಿರುದ್ಧ 3,673 ಮತಗಳ ಗೆಲುವು
ಗುರಮಿಠಕಲ್(ಜೆಡಿಎಸ್) ಶರಣಗೌಡ ಕುಂದಕೂರ
ಕಾಂಗ್ರೆಸ್‌ನ ಬಾಬುರಾವ್ ಚಿಂಚನಸೂರ್ ವಿರುದ್ಧ 2,510 ಮತಗಳ ಗೆಲುವು
ಹುಮನಾಬಾದ್(ಬಿಜೆಪಿ) ಸಿದ್ದು ಪಾಟೀಲ
ಕಾಂಗ್ರೆಸ್‌ನ ರಾಜಶೇಖರ ಪಾಟೀಲ ವಿರುದ್ಧ 1,594 ಮತಗಳ ಗೆಲುವು
ಬೀದರ್ ದಕ್ಷಿಣ(ಬಿಜೆಪಿ) ಡಾ| ಶೈಲೇಂದ್ರ ಬೆಲ್ದಾಳ
ಕಾಂಗ್ರೆಸ್‌ನ ಅಶೋಕ ಖೇಣಿ ವಿರುದ್ಧ 1,263 ಮತಗಳ ಗೆಲುವು
ರಾಯಚೂರು(ಬಿಜೆಪಿ) ಡಾ| ಶಿವರಾಜ ಪಾಟೀಲ.
ಕಾಂಗ್ರೆಸ್ ಮೊಹಮ್ಮದ್ ಶಾಲಂ ವಿರುದ್ಧ 3,732 ಮತಗಳ ಗೆಲುವು
ಲಿಂಗಸಗೂರು(ಬಿಜೆಪಿ) ಮಾನಪ್ಪ ವಜ್ವಲ್
ಕಾಂಗ್ರೆಸ್‌ನ ಡಿ.ಎಸ್.ಹಲಗೇರಿ ವಿರುದ್ಧ 2,809 ಮತಗಳ ಗೆಲುವು
ನರಗುಂದ(ಬಿಜೆಪಿ) ಸಿ.ಸಿ. ಪಾಟೀಲ್.
ಕಾಂಗ್ರೆಸ್‌ನ ಬಿ. ಆರ್. ಯಾವಗಲ್ ವಿರುದ್ಧ 1791 ಮತಗಳ ಗೆಲುವು
ಹಳಿಯಾಳ (ಕಾಂಗ್ರೆಸ್)ಆರ್. ವಿ. ದೇಶಪಾಂಡೆ.
ಬಿಜೆಪಿಯ ಸುನೀಲ್ ಹೆಗಡೆ ವಿರುದ್ಧ 3623 ಮತಗಳ ಗೆಲುವು
ಕುಮಟಾ(ಬಿಜೆಪಿ) ದಿನಕರ ಶೆಟ್ಟಿ
ಜೆಡಿಎಸ್‌ನ ಸೂರಜ್ ನಾಯ್ಕ ವಿರುದ್ಧ 673 ಮತಗಳ ಗೆಲುವು
ಕಾರವಾರ(ಕಾಂಗ್ರೆಸ್)ಸತೀಶ ಸೈಲ್
ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ 2,415 ಮತಗಳ ಗೆಲುವು
ಹೂವಿನ ಹಡಗಲಿ (ಬಿಜೆಪಿ) ಕೃಷ್ಣ ನಾಯಕ್.
ಕಾಂಗ್ರೆಸ್‌ನ ಪರಮೇಶ್ವರ್ ನಾಯಕ್ ವಿರುದ್ಧ 1,444 ಮತಗಳ ಗೆಲುವು
ಹರಿಹರ (ಬಿಜೆಪಿ)ಬಿ. ಪಿ. ಹರೀಶ್.
ಕಾಂಗ್ರೆಸ್‌ನ ಎಸ್. ನಂದಗಾವಿ ವಿರುದ್ಧ 4,300 ಮತಗಳ ಗೆಲುವು
ಯಲ್ಲಾಪುರ (ಬಿಜೆಪಿ) ಶಿವರಾಮ ಹೆಬ್ಟಾರ್
ಕಾಂಗ್ರೆಸ್‌ನ ವಿ. ಎಸ್. ಪಾಟೀಲ್ ವಿರುದ್ಧ 3,759 ಮತಗಳ ಗೆಲುವು
ಜಗಳೂರು (ಕಾಂಗ್ರೆಸ್)ಎಂ. ದೆವೇಂದ್ರಪ್ಪ
ಬಿಜೆಪಿಯ ಎಸ್. ವಿ. ರಾಮಚಂದ್ರ ವಿರುದ್ಧ 874 ಮತಗಳ ಗೆಲುವು
ಭದ್ರಾವತಿ- (ಕಾಂಗ್ರೆಸ್) ಬಿ. ಕೆ. ಸಂಗಮೇಶ್ವರ್
ಜೆಡಿಎಸ್‌ನ ಶಾರದಾ ಅಪ್ಪಾಜಿ ಗೌಡ ವಿರುದ್ಧ 2705 ಮತಗಳ ಗೆಲುವು
ಹೊಳೆನರಸೀಪುರ (ಜೆಡಿಎಸ್) ಎಚ್.ಡಿ.ರೇವಣ್ಣ.
ಕಾಂಗ್ರೆಸ್‌ನ ಶ್ರೇಯಸ್ ಎಂ. ವಿರುದ್ಧ 3,152 ಮತಗಳ ಗೆಲುವು
ಸಕಲೇಶಪುರ (ಬಿಜೆಪಿ) ಸಿಮೆಂಟ್ ಮಂಜುನಾಥ್.
ಜೆಡಿಎಸ್‌ನ ಕುಮಾರಸ್ವಾಮಿ ವಿರುದ್ಧ 2,056 ಮತಗಳ ಗೆಲುವು
ಪುತ್ತೂರು (ಕಾಂಗ್ರೆಸ್)ಅಶೋಕ್ ಕುಮಾರ್ ರೈ
ಪಕ್ಷೇತರ ಅರುಣ್ ಕುಮಾರ್ ಪುತ್ತಿಲ ವಿರುದ್ಧ 4,149 ಮತಗಳ ಗೆಲುವು.
ಮಡಿಕೇರಿ (ಕಾಂಗ್ರೆಸ್) ಡಾ| ಮಂಥರ್ ಗೌಡ.
ಬಿಜೆಪಿಯ ಅಪ್ಪಚ್ಚು ರಂಜನ್ ವಿರುದ್ಧ 4,402 ಮತಗಳ ಗೆಲುವು
ವಿರಾಜಪೇಟೆ (ಕಾಂಗ್ರೆಸ್) ಎ.ಎಸ್.ಪೊನ್ನಣ್ಣ
ಬಿಜೆಪಿಯ ಕೆ.ಜಿ.ಬೋಪಯ್ಯ ವಿರುದ್ಧ 4,291 ಮತಗಳ ಗೆಲುವು
ಚಾಮರಾಜ (ಕಾಂಗ್ರೆಸ್) ಕೆ.ಹರೀಶ್ ಗೌಡ
ಬಿಜೆಪಿಯ ಎಲ್.ನಾಗೇಂದ್ರ ವಿರುದ್ಧ 4,094 ಮತಗಳ ಗೆಲುವು
ಹುಣಸೂರು (ಜೆಡಿಎಸ್) ಜೆ.ಡಿ.ಹರೀಶ್.
ಕಾಂಗ್ರೆಸ್‌ನ ಮಂಜುನಾಥ್ ವಿರುದ್ಧ 2,412 ಮತಗಳ ಗೆಲುವು
ಗಾಂಧಿ ನಗರ (ಕಾಂಗ್ರೆಸ್)ದಿನೇಶ್ ಗುಂಡೂರಾವ್
ಬಿಜೆಪಿಯ ಸಪ್ತಗಿರಿಗೌಡ ವಿರುದ್ಧ 105 ಮತಗಳ ಗೆಲುವು.
ಜಯನಗರ (ಬಿಜೆಪಿ)ರಾಮಮೂರ್ತಿ.
ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ವಿರುದ್ಧ 16 ಮತಗಳ ಗೆಲುವು.
ರಾಮಮೂರ್ತಿಗೆ 16 ಮತಗಳ ಅಂತರದ ಗೆಲುವು
ಶೃಂಗೇರಿಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಬಿಜೆಪಿಯ ಜೀವರಾಜ್ ವಿರುದ್ಧ 201 ಮತಗಳ ಅಂತರದ ಗೆಲುವು ಕಂಡರೆ, ಬೆಂಗಳೂರಿನ ಗಾಂಧಿನಗರದಲ್ಲಿ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್, ಬಿಜೆಪಿಯ ಸಪ್ತಗಿರಿ ಗೌಡ ವಿರುದ್ಧ 105 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿಯ ರಾಮಮೂರ್ತಿ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ವಿರುದ್ಧ 16 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಈ ಬಾರಿಯ ಚುನಾವಣೆಯಲ್ಲಿನ ಅತೀ ಸಣ್ಣ ಅಂತರದ ಜಯವಾಗಿದೆ. ಮೂಡಿಗೆರೆಯಲ್ಲಿ ಕಾಂಗ್ರೆಸ್‌ನ ನಯನಾ ಮೋಟಮ್ಮ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ವಿರುದ್ಧ 722 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಒಟ್ಟಾರೆ ಸಂಖ್ಯಾ ಬಲ ಕುಸಿತದ ವಿಚಾರದಲ್ಲಿ ಈ ಐದು ಸಾವಿರ ಓಟ್ ಕ್ಲಬ್ ಮಹತ್ವದ ಪಾತ್ರ ವಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.