ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್‌ನಷ್ಟು ಲಸಿಕೆ ಆವಶ್ಯಕತೆ
Team Udayavani, May 8, 2021, 8:54 PM IST
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1,94,788 ಮಂದಿ ಮೊದಲ ಬಾರಿಗೆ ಹಾಗೂ 56,836 ಮಂದಿ ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವಧಿ ಆದ 40 ಸಾವಿರ ಮಂದಿ ಹಾಗೂ ಅವಧಿ ಮೀರಿದ 10 ಸಾವಿರ ಮಂದಿ ಇನ್ನಷ್ಟೇ ಲಸಿಕೆ ಪಡೆದುಕೊಳ್ಳಬೇಕಿದೆ. ಈ ಪೈಕಿ 18,500 ಮಂದಿ ಕೋವ್ಯಾಕ್ಸಿನ್ ಹಾಗೂ 21,500 ಮಂದಿ ಕೋವಿಶೀಲ್ಡ್ ಪಡೆಯಲು ಬಾಕಿ ಉಳಿದಿದ್ದಾರೆ.
ಜಿಲ್ಲೆಗೆ 18 ವರ್ಷದ ಮೇಲ್ಪಟ್ಟವರನ್ನು ಸೇರಿಸಿದರೆ 4ರಿಂದ 5 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಪ್ರಸ್ತುತ ಇರುವ 45 ವರ್ಷ ಮೇಲ್ಪಟ್ಟ ಸುಮಾರು 1.5 ಲಕ್ಷ ಮಂದಿ ಮೊದಲ ಡೋಸ್ ಪಡೆಯಲು ಬಾಕಿ ಉಳಿದಿದ್ದಾರೆ.
1 ಆಯಿಲ್‌ನಲ್ಲಿ 10 ಡೋಸ್ ಲಸಿಕೆ ಇರಲಿದ್ದು, ಜನ ಪೂರ್ಣ ಪ್ರಮಾಣದಲ್ಲಿ ಆಗಮಿಸದಿದ್ದರೆ ಲಸಿಕೆ ವ್ಯರ್ಥವಾಗುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ :ಅಫ್ಘಾನಿಸ್ತಾನ : ಶಾಲೆ ಬಳಿ ಬಾಂಬ್ ಸ್ಫೋಟ : 25 ಜನರ ದುರ್ಮರಣ
ಸದ್ಯಕ್ಕೆ ಲಸಿಕೆ ಇಲ್ಲ
ಜಿಲ್ಲೆಯಲ್ಲಿ 500ರಿಂದ 2000 ಡೋಸ್‌ಗಳಷ್ಟು ಲಸಿಕೆ ಬರುತ್ತಿದ್ದು, ಇದನ್ನು ಆದ್ಯತೆಯ ಮೇರೆಗೆ ಬಾಕಿ ಉಳಿದವರಿಗೆ ನೀಡಲಾಗುತ್ತದೆ. ಜಿಲ್ಲೆಯ 73 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದ್ದರೂ ಸದ್ಯಕ್ಕೆ ಲಸಿಕೆ ಎಲ್ಲಿಯೂ ಲಭ್ಯವಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಪ್ರಥಮ ಡೋಸ್ ಸದ್ಯಕ್ಕೆ ಬೇಡ
ವಿನಾ ಕಾರಣ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಲಸಿಕೆಯ ಅಭಾವ ಇರುವ ಕಾರಣ ಎರಡನೇ ಬಾರಿಗೆ ಹಾಕಲು ಬಾಕಿಯಿರುವವರಿಗೆ ಮಾತ್ರ ಈಗ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಎರಡನೆಯ ಡೋಸ್ ತೆಗೆದುಕೊಳ್ಳುವವರಿಗೆ ಬರುತ್ತಿರುವ ವ್ಯಾಕ್ಸಿನ್ ಕೊಡಲಾಗುತ್ತಿದೆ. ವ್ಯಾಕ್ಸಿನ್ ಪೂರೈಕೆಯಾಗುತ್ತಿದ್ದಂತೆ ಮಾಧ್ಯಮದಲ್ಲಿ ಪ್ರಕಟಿಸಿ ವಿತರಿಸಲಿದ್ದೇವೆ. ಆಗ ಸಾರ್ವಜನಿಕರು ಬಂದು ಸ್ವೀಕರಿಸಬೇಕು. ಈಗ ಪೂರೈಕೆ ಇಲ್ಲದ ಕಾರಣ ಲಸಿಕೆ ಕೇಂದ್ರಕ್ಕೆ ಅನಗತ್ಯವಾಗಿ ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ. ಸರಕಾರ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದೆ. ಆದರೆ ಸರಕಾರದ ಆದೇಶ ಬಂದಿಲ್ಲ. ಬಂದ ಬಳಿಕ ಪತ್ರಕರ್ತರಿಗೂ ಆದ್ಯತೆಯಲ್ಲಿ ವ್ಯಾಕ್ಸಿನ್ ನೀಡುತ್ತೇವೆ.
– ಜಿ.ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.