ಮಹಾರಾಷ್ಟ್ರದಲ್ಲಿ 50 ಸಾವಿರ ಸೋಂಕು
ಒಂದೇ ದಿನ 3 ಸಾವಿರ ಸೋಂಕು, 58 ಸಾವು
Team Udayavani, May 25, 2020, 5:59 AM IST
ಹೊಸದಿಲ್ಲಿ/ಮುಂಬಯಿ: ದೇಶದ ಕೋವಿಡ್ 19 ಸೋಂಕು ನಿಯಂತ್ರಣವಿಲ್ಲದೆ ಸಾಗುತ್ತಿದೆ. ಮಹಾರಾಷ್ಟ್ರದಲ್ಲಿ ರವಿವಾರ ಒಂದೇ ದಿನ 3,041 ಕೇಸುಗಳು ದಾಖಲಾಗಿವೆ. ಈ ಮೂಲಕ ಅಲ್ಲಿ ಸೋಂಕಿನ ಪ್ರಕರಣ 50 ಸಾವಿರ ದಾಟಿದೆ. ಜತೆಗೆ 58 ಮಂದಿ ಕೊನೆಯುಸಿ ರೆಳೆದಿದ್ದಾರೆ.
ಮುಂಬಯಿಯಲ್ಲಿಯೇ 1,635 ಸೋಂಕು ಖಚಿತವಾಗಿದೆ. ಹೀಗಾಗಿ, ದೇಶದ ವಾಣಿಜ್ಯ ನಗರಿ ಎಂಬ ಖ್ಯಾತಿ ಪಡೆದಿರುವ ಮುಂಬಯಿಯಲ್ಲಿ ಕೋವಿಡ್ 19 ನಿಯಂತ್ರಣ ಸಾಧ್ಯವಾಗಿಲ್ಲವೇ ಎಂಬ ಆತಂಕ ವ್ಯಕ್ತವಾಗಿದೆ. ಸತತ ಎಂಟು ದಿನಗಳ ಕಾಲ ರಾಜ್ಯದಲ್ಲಿ ದಿನವೂ 2 ಸಾವಿರಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ದೃಢಪಟ್ಟಿವೆ.
50 ಸಾವಿರಕ್ಕಿಂತ ಅಧಿಕ ಸೋಂಕಿನ ಪ್ರಕರಣಗಳ ಪೈಕಿ ಮುಂಬಯಿಯಲ್ಲಿಯೇ 30 ಸಾವಿರಕ್ಕಿಂತ ಅಧಿಕ ಸೋಂಕುಗಳು ಇವೆ. ಜತೆಗೆ 988 ಮಂದಿ ಅಸುನೀಗಿದ್ದಾರೆ. ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶ ಸೇರಿದಂತೆ ಮುಂಬಯಿಯಲ್ಲಿ ಸೋಂಕಿನ ಸ್ಥಿತಿ ಭಾರೀ ಕಳವಳ ಹುಟ್ಟಿಸುವ ಸ್ಥಿತಿಯಲ್ಲಿದೆ. ಮಹಾರಾಷ್ಟ್ರಾ ದ್ಯಂತ 4,99,387 ಮಂದಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇದ್ದಾರೆ. 35,107 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ.
ಇನ್ನು ಪುಣೆಯಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 5 ಸಾವಿರ ದಾಟಿದ್ದರೆ, 251 ಮಂದಿ ಜೀವ ಕಳೆದುಕೊಂಡಿದ್ದಾರೆ. ನಾಸಿಕ್‌ನಲ್ಲಿ 1,570, ಲಾತೂರ್‌ನಲ್ಲಿ 1,570, ಕೊಲ್ಹಾಪುರ ದಲ್ಲಿ 504 ಕೇಸುಗಳು ದೃಢಪಟ್ಟಿವೆ.
ಗುಜರಾತ್‌ನಲ್ಲಿ: ಕೋವಿಡ್ 19 ಮ್ಯಾಪ್‌ನಲ್ಲಿ 2ನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 394 ಹೊಸ ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 279 ಅಹ್ಮದಾಬಾದ್‌ನಲ್ಲಿಯೇ ದೃಢಪಟ್ಟಿವೆ. 29 ಮಂದಿ ಸಾವಿಗೀಡಾಗಿದ್ದರೆ, 28 ಅಹ್ಮದಾ ಬಾದ್‌ನಲ್ಲಿಯೇ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಹೊಸದಾಗಿ 765, ರಾಜಸ್ಥಾನದಲ್ಲಿ 152 ಕೇಸುಗಳು ದೃಢಪಟ್ಟಿವೆ.
ಸತತ 3ನೇ ದಿನ: ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಶನಿವಾರದಿಂದ ರವಿವಾರದ ಅವಧಿಯಲ್ಲಿ ದೇಶದಲ್ಲಿ 6,767 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಸತತ ಮೂರನೇ ದಿನ ಸೋಂಕಿನ ಸಂಖ್ಯೆ 6 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 147 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಗುಣ ಮುಖರಾಗುವವರ ಸಂಖ್ಯೆ 54,440ಕ್ಕೆ ಏರಿಕೆಯಾಗಿದೆ. ಹೀಗಾಗಿ ಅಂಥವರ ಶೇಕಡವಾರು ಪ್ರಮಾಣ ಕೂಡ 41.28ಕ್ಕೆ ಹೆಚ್ಚಿದೆ.
ವಾಕ್ಸಿನ್‌ನಂತೆ ಕೆಲಸ ಮಾಡಿದೆ:
ಇನ್ನೊಂದೆಡೆ ದೇಶದಲ್ಲಿ ಜಾರಿಗೊಳಿಸಲಾಗಿ ರುವ ಲಾಕ್‌ಡೌನ್ ಮತ್ತು ಇತರ ನಿಯಮಗಳು ಸೋಂಕು ತಡೆಯುವಲ್ಲಿ ಕೆಲಸ ಮಾಡಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್ ತಿಳಿಸಿದ್ದಾರೆ. ಲಾಕ್‌ಡೌನ್‌ಗಿಂತ ಮೊದಲು ಸೋಂಕು ದ್ವಿಗುಣಗೊಳ್ಳುವ ಅವಧಿ 3.4 ದಿನ ಆಗಿತ್ತು. ಈಗ 13 ದಿನಗಳಿಗಿಂತ ಹೆಚ್ಚಾಗಿದೆ ಎಂದರು. ಜಗತ್ತಿನ ಇತರ ದೇಶಗಳಲ್ಲಿ ಸೋಂಕು ಸ್ಥಿತಿ ನಿಯಂತ್ರಣ ಸಾಧ್ಯವೇ ಇಲ್ಲ ಎಂದು ತಿಳಿದಾಗ ಲಾಕ್‌ಡೌನ್ ಮಾಡಲು ನಿರ್ಧರಿಸಲಾಯಿತು.
ಸಿದ್ಧಗೊಂಡಿರಬೇಕು: ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಮತ್ತು ಇತರ ಸಂಬಂಧಿತ ಮೂಲಭೂತ ವ್ಯವಸ್ಥೆಗಳನ್ನು ಮುಂದಿನ ಎರಡು ತಿಂಗಳ ಪರಿಸ್ಥಿತಿ ಗಮನಿಸಿಕೊಂಡು ಮತ್ತಷ್ಟು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಹೀಗೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ತಮಿಳುನಾಡು, ಗುಜರಾತ್, ದಿಲ್ಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನ ದೇಶದ ಒಟ್ಟು ಶೇ.70ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಸೂಚನೆ ಮಹತ್ವ ಪಡೆದಿದೆ. ಆರು ರಾಜ್ಯಗಳ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸ್ಥಳಗಳಲ್ಲಿ ನಿಕಟವಾಗಿ ಪರಿಸ್ಥಿತಿ ಗಮನಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.