ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್‌ಗೆ 6 ವರ್ಷ ಜೈಲು
Team Udayavani, Apr 27, 2021, 9:20 PM IST
ಕಲ್ಲಿಕೋಟೆ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಅವಧಿಯಲ್ಲಿ ಭಾರೀ ಸದ್ದು ಮಾಡಿದ್ದ ಸೌರ ಫಲಕ ಹಗರಣಕ್ಕೆ ಸಂಬಂಧಿಸಿದ ವಂಚನೆ ಪ್ರಕರಣವೊಂದರಲ್ಲಿ ಸರಿತಾ ಎಸ್. ನಾಯರ್ ಅವರಿಗೆ 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಸೋಲಾರ್ ಹಗರಣದಲ್ಲಿ ಸರಿತಾ ಅವರು ಎರಡನೇ ಆರೋಪಿಯಾಗಿದ್ದಾರೆ. ವಂಚನೆ ಸೇರಿದಂತೆ 4 ವಿವಿಧ ಅಪರಾಧಗಳಿಗೆ ಸಂಬಂಧಿಸಿ ಕೋರ್ಟ್ ತೀರ್ಪು ನೀಡಿದೆ. ಜತೆಗೆ, ನಾಲ್ಕೂ ಅಪರಾಧಗಳಿಗೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 40 ಸಾವಿರ ರೂ. ದಂಡ ಪಾವತಿಸುವಂತೆಯೂ ಸೂಚಿಸಿದೆ.
ಇದನ್ನೂ ಓದಿ :ಪ್ಲೀಸ್ ನಮ್ಮ ಜನರ ಹಸಿವು ನೀಗಿಸಿ : ಭಾವುಕರಾದ ನಟಿ ಶಿಲ್ಪಾ ಶೆಟ್ಟಿ
ಆರೋಪಿಗಳಾದ ಸರಿತಾ ಹಾಗೂ ಬಿಜು ರಾಧಾಕೃಷ್ಣನ್ ಅವರು ತಮ್ಮ ಕಂಪನಿಗೆ ಫ್ರಾಂಚೈಸಿ ನೀಡುವುದಾಗಿ ಹಾಗೂ ತಮ್ಮ ಮನೆ-ಕಚೇರಿಯಲ್ಲಿ ಸೌರ ಫಲಕ ಅಳವಡಿಸುವುದಾಗಿ ಭರವಸೆ ನೀಡಿ 42.70 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದರು ಎಂದು ಅಬ್ದುಲ್ ಮಜೀದ್ ಎಂಬವರು ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.