ವಾರದಲ್ಲಿ 61 ಕೋಟಿ ಚುನಾವಣಾ ಅಕ್ರಮ
Team Udayavani, Apr 5, 2023, 6:27 AM IST
ಬೆಂಗಳೂರು: ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡ ಒಂದು ವಾರದಲ್ಲಿ ಚುನಾವಣ ಅಕ್ರಮಗಳ ಮೊತ್ತ 61 ಕೋಟಿ ರೂ. ತಲುಪಿದೆ. ಕಳೆದ 24 ಗಂಟೆಗಳಲ್ಲಿ 13 ಕೋಟಿ ರೂ. ಜಪ್ತಿ ಮಾಡಲಾಗಿದೆ. ವೇಳಾಪಟ್ಟಿ ಪ್ರಕಟಗೊಂಡ ಮಾ. 29ರಿಂದ ಇಲ್ಲಿವರೆಗೆ ಪೊಲೀಸರು, ಅಬಕಾರಿ ಅಧಿಕಾರಿಗಳು ಸೇರಿ ವಿವಿಧ ನೀತಿ ಸಂಹಿತೆ ಜಾರಿ ತಂಡಗಳು ಕಾರ್ಯಾಚರಣೆ ನಡೆಸಿ ನಗದು, ಅಕ್ರಮ ಹಣ, ಮದ್ಯ, ಐಷಾರಾಮಿ ವಸ್ತುಗಳು, ಮಾದಕ ಪದಾರ್ಥಗಳು, ಚಿನ್ನಾಭರಣ ಸೇರಿ ಜಪ್ತಿ ಮಾಡಲಾದ ಅಕ್ರಮಗಳ ಒಟ್ಟು ಮೊತ್ತ 60.99 ಕೋಟಿ ರೂ. ಆಗಿದೆ.
ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ 17.36 ಕೋಟಿ ರೂ. ನಗದು, 11.69 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 8.50 ಕೋಟಿ ರೂ. ಮೌಲ್ಯದ 22.691 ಕೆ.ಜಿ. ಬಂಗಾರ, 65.19 ಲಕ್ಷ ಮೌಲ್ಯದ 93.563 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿವೆ. 415 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
ಸಿ.ಟಿ. ರವಿ ಭಾವಚಿತ್ರ ಇದ್ದ 500 ಬ್ಯಾಗ್ ವಶ
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಬಿಜೆಪಿ ಚಿಹ್ನೆಯ ಗುರುತಿರುವ ಫುಡ್‌ಕಿಟ್ ತುಂಬುವ 500 ಬ್ಯಾಗ್‌ಗಳನ್ನು ಫ್ಲೈಯಿಂಗ್ ಸ್ಕ್ವಾಡ್ ತಂಡ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಮಲ್ಲಂದೂರು ರಸ್ತೆಯಲ್ಲಿರುವ ಟ್ರಾನ್ಸ್‌ಪೊರ್ಟ್ ಕಚೇರಿಗೆ ಈ ಬ್ಯಾಗ್‌ಗಳು ಬಂದಿದ್ದವು.
ಮದ್ಯ, ಗಾಂಜಾ ಜಪ್ತಿ
ರಾಮನಗರ: ಜಿಲ್ಲಾದ್ಯಂತ 31.34 ಲೀ. ಮದ್ಯ, 1.640 ಕೆಜಿ ಗಾಂಜಾವನ್ನು ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ 9,768 ರೂ.ಮೌಲ್ಯದ 23.13 ಲೀ. ಮದ್ಯ ಹಾಗೂ ಪೋಲಿಸ್ ಇಲಾಖೆ ಕಾರ್ಯಾಚರಣೆಯಲ್ಲಿ 8,210 ರೂ. ಮೌಲ್ಯದ 8.21 ಲೀ ಮದ್ಯ ವಶಕ್ಕೆ ಪಡೆಯಲಾಗಿದೆ.
4.24 ಲ.ರೂ. ಮಕ್ಕಳ ಬಟ್ಟೆ ವಶ
ಕಲಾದಗಿ: ಗದ್ದನಕೇರಿ ಕ್ರಾಸ್ ಬಳಿ ಗೂಡ್ಸ್ ವಾಹನ ತಪಾಸಣೆ ಮಾಡಿದಾಗ ಅ ಧಿಕೃತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿಕ್ಕ ಮಕ್ಕಳ ಬಟ್ಟೆಯ ಪ್ಯಾಕ್‌ಗಳನ್ನು ಕಲಾದಗಿ ಪೊಲೀಸರು ಜಪ್ತಿ ಮಾಡಿದ್ದಾರೆ. ಸುಮಾರು 4.24 ಲಕ್ಷ ಮೌಲ್ಯದ ಮಕ್ಕಳ ಬಟ್ಟೆಗಳ 106 ಪ್ಯಾಕ್ ಬಂಡಲ್ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
Congress Government 11 ಲಕ್ಷ ಕುಟುಂಬಗಳ ಅನ್ನವನ್ನು ಕಿತ್ತುಕೊಳ್ಳುತ್ತಿದೆ: ಎಚ್‌ಡಿಕೆ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.