ಅಜ್ಞಾತ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ 66% ಆದಾಯ : ವರದಿ
Team Udayavani, Mar 12, 2023, 7:20 PM IST
ನವದೆಹಲಿ : 2021-22ರಲ್ಲಿ 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇಕಡಾ 66 ಕ್ಕಿಂತ ಹೆಚ್ಚು ಚುನಾವಣಾ ಬಾಂಡ್‌ಗಳಿಂದ ಮತ್ತು ಅಜ್ಞಾತ ಮೂಲಗಳಿಂದ ಬಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಹೇಳಿದೆ.
ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಎನ್‌ಸಿಪಿ, ಸಿಪಿಐ, ಸಿಪಿಐ(ಎಂ) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಏಳು ಪಕ್ಷಗಳ ಆದಾಯ ಅಜ್ಞಾತ ಮೂಲಗಳಿಂದ ಶೇ.66.04.ಬಂದಿದೆ ಎಂದು ಹೇಳಿದೆ.
ಅಧಿಕೃತ ಡೇಟಾವನ್ನು ಉಲ್ಲೇಖಿಸಿ ಚುನಾವಣಾ ಸುಧಾರಣೆಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಎಡಿಆರ್, 2021-22ರಲ್ಲಿ ಏಳು ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ 2,172 ಕೋಟಿ ರೂಪಾಯಿ ಸಂಗ್ರಹಿಸಿವೆ ಎಂದು ಹೇಳಿದೆ. 83.41 ರಷ್ಟು ಆದಾಯವು (1,811.94 ಕೋಟಿ ರೂ.) ಅಜ್ಞಾತ ಮೂಲಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ.
ಆದಾಯ ತೆರಿಗೆ ರಿಟರ್ನ್ಸ್ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದ ದೇಣಿಗೆ ಹೇಳಿಕೆಗಳ ವಿಶ್ಲೇಷಣೆಯು ಈ ಪಕ್ಷಗಳ ಆದಾಯದ ಮೂಲಗಳು ಹೆಚ್ಚಾಗಿ ತಿಳಿದಿಲ್ಲ ಎಂದು ತೋರಿಸುತ್ತದೆ.
ಎಡಿಆರ್ ಪ್ರಕಾರ, ಅಜ್ಞಾತ ಮೂಲವು ರಾಜಕೀಯ ಪಕ್ಷಗಳು ವಾರ್ಷಿಕ ಆಡಿಟ್ ವರದಿಯಲ್ಲಿ ಮೂಲವನ್ನು ನೀಡದೆ ಘೋಷಿಸಿದ ಆದಾಯವಾಗಿದೆ. ಅಜ್ಞಾತ ಮೂಲಗಳಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳು, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ವಿವಿಧ ಆದಾಯ, ಸ್ವಯಂಪ್ರೇರಿತ ಕೊಡುಗೆಗಳು ಮತ್ತು ಸಭೆಗಳ ಕೊಡುಗೆಗಳು ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.