Meta: ಶೇ.70 ಸಿಬ್ಬಂದಿಗೆ ಜುಕರ್ ಮೇಲೆ ನಂಬಿಕೆ ಇಲ್ಲ
ಸಮೀಕ್ಷೆಯಲ್ಲಿ ಮೆಟಾ ಉದ್ಯೋಗಿಗಳ ಅಭಿಮತ: ಶೇ.26 ಮಂದಿಗೆ ಮಾತ್ರ ವಿಶ್ವಾಸ
Team Udayavani, Jun 12, 2023, 7:06 AM IST
ವಾಷಿಂಗ್ಟನ್: ಜಾಲತಾಣ ದೈತ್ಯ ಸಂಸ್ಥೆಗಳಾದ ಫೇಸ್ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ಮೆಟಾ ಜಾಗತಿಕ ಮಟ್ಟದಲ್ಲಿ ಇತರೆ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದ್ದರೆ, ಇತ್ತ ಅದೇ ಸಂಸ್ಥೆಯ ಶೇ.70 ಉದ್ಯೋಗಿಗಳಿಗೆ ಸಂಸ್ಥೆ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಅವರ ಮೇಲೆ ನಂಬಿಕೆ ಇಲ್ಲವೆಂದು “ದ ವಾಷಿಂಗ್ಟನ್‌ಪೋಸ್ಟ್” ವರದಿ ಮಾಡಿದೆ.
ಇತ್ತೀಚೆಗಷ್ಟೇ ಸಂಸ್ಥೆಯ ಆಂತರಿಕ ಉದ್ಯೋಗಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಶೇ. 26 ಉದ್ಯೋಗಿಗಳಷ್ಟೇ ಮಾರ್ಕ್ ಅವರ ನಾಯಕತ್ವದ ಬಗ್ಗೆ ನಂಬಿಕೆ ಹೊಂದಿರುವುದಾಗಿ ತಿಳಿಸಿದ್ದಾರೆ. ಕಳೆದವರ್ಷ ಅಕ್ಟೋಬರ್‌ನಲ್ಲಿ ಶೇ.31ರಷ್ಟು ಸಿಬ್ಬಂದಿ ನಾಯಕತ್ವಕ್ಕೆ ಬಹುಪರಾಕ್ ಹಾಕಿದ್ದರು. ಈ ವರ್ಷ ಅದರಲ್ಲಿ ಶೇ.5ರಷ್ಟು ಮಂದಿ ನಿರ್ಣಯ ಬದಲಿಸಿದ್ದಾರೆ. ಇನ್ನು ಈ ವರ್ಷ ಶೇ.43ರಷ್ಟು ಸಿಬ್ಬಂದಿಗೆ ಮಾತ್ರ ಸಂಸ್ಥೆಯಿಂದ ಪ್ರಶಂಸೆ ದೊರೆತಿದ್ದು, ಕಳೆದಬಾರಿ ಈ ಪ್ರಮಾಣ ಶೇ.58ರಷ್ಟಿತ್ತು.
ಕೊರೊನಾ ಬಿಕ್ಕಟ್ಟಿನಿಂದ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ ಬಳಿಕ, ಆರ್ಥಿಕ ಪುನಶ್ಚೇತನ ಹಾಗೂ ಹೂಡಿಕೆ ಕಡಿಮೆ ಮಾಡಿ, ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಜುಕರ್ ಅವರು ತೆಗೆದುಕೊಂಡ ಕೆಲ ನಿರ್ಣಯಗಳೇ ಈ ಫಲಿತಾಂಶಕ್ಕೆ ಕಾರಣವಾಗಿದೆ. ಅದರಲ್ಲೂ ಸಂಸ್ಥೆಯ 21,000 ಉದ್ಯೋಗಿಗಳ ವಜಾ ತೀವ್ರ ಪರಿಣಾಮ ಬೀರಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.