ಮಹಿಳಾ ದಿನಾಚರಣೆ : ವಿಭಿನ್ನವಾಗಿ ಶುಭ ಕೋರಿದ ‘777 ಚಾರ್ಲಿ’ತಂಡ
Team Udayavani, Mar 8, 2022, 4:07 PM IST
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ’ ಚಿತ್ರ ತಂಡ ಮಹಿಳಾ ದಿನಾಚರಣೆಗೆ ವಿಭಿನ್ನವಾಗಿ ಶುಭ ಕೋರಿ ಗಮನ ಸೆಳೆದಿದೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಿಯ ಫೋಟೋವನ್ನು ಟ್ವೀಟ್ ಮಾಡಿ ಪ್ರತಿ ಮಹಿಳೆಯರು ಆಚರಿಸುವ, ಎಳ್ದಕ್ಕಾಗಿ ಇವಳು. ಮಹಿಳಾ ದಿನಾಚರಣೆಯ ಶುಭಾಶಯಗಳು. ನಮ್ಮ ಬಾಸ್ ಲೇಡಿ ಶುಭ ಹಾರೈಸುತ್ತಾಳೆ ಎಂದು ಎಂದು ಶುಭ ಕೋರಲಾಗಿದೆ.
ಸದ್ಯ ಚಾರ್ಲಿ ತೆರೆಗೆ ಬರುವ ತಯಾರಿಯಲ್ಲಿದ್ದು, ನಾಯಿಯ ಅಭಿನಯ ಈಗಾಗಲೇ ಎಲ್ಲರನ್ನೂ ಮೋಡಿ ಮಾಡಿದೆ.
Celebrating every woman there is, for all that she is. Happy women’s day♥️#WomensDay #777Charlie pic.twitter.com/9cuPPdRfLZ
— 777 Charlie (@777CharlieMovie) March 8, 2022
ಕಿರಣ್ ರಾಜ್ ಸಿನಿಮಾಗೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಸಂಗೀತಾ ಶೃಂಗೇರಿ ಚಾರ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಪಂಚಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ‘777 ಚಾರ್ಲಿ ‘ ಸಿನಿಮಾದ ಟೀಸರ್ ಗಳು ಈಗಾಗಲೇ ಗಮನ ಸೆಳೆದಿವೆ.
ಲೈಫ್ ಆಫ್ ಚಾರ್ಲಿ (Life of Charlie) ಎಂಬ ಅಡಿ ಶೀರ್ಷಿಕೆಯಿರುವ ‘777 ಚಾರ್ಲಿ ‘ ಸಿನಿಮಾದಲ್ಲಿ ನಾಯಿ ರಕ್ಷಿತ್ ಶೆಟ್ಟಿಯವರನ್ನು (ಧರ್ಮ) ಭೇಟಿಯಾದ ಬಳಿಕ ಏನೆಲ್ಲ ನಡೆಯುತ್ತದೆ ಎಂಬುದು ಈ ಸಿನಿಮಾದ ಕತೆ. ರಾಜ್ ಬಿ. ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರು ತಾರಾಗಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.