ಲಾಕ್‌ನಿಂದ 78 ಸಾವಿರ ಕೋಟಿ ನಷ್ಟ : ಬಾರ್ಕ್ಲೇಸ್ ಸಮೀಕ್ಷಾ ವರದಿ ಮುನ್ನೆಚ್ಚರಿಕೆ
Team Udayavani, Apr 13, 2021, 6:40 AM IST
ಹೊಸದಿಲ್ಲಿ: ಕೊರೊನಾ ಸೋಂಕು ಪ್ರಸರಣವನ್ನು ತಡೆಯಲು ಕರ್ನಾಟಕ ಸಹಿತ, ಮಹಾರಾಷ್ಟ್ರ, ಒರಿಸ್ಸಾ, ದಿಲ್ಲಿ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‌ಡೌನ್ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಸಾಂಕ್ರಾಮಿಕವನ್ನು ಹಿಡಿತಕ್ಕೆ ತರುವ ದೃಷ್ಟಿಯಿಂದ ಇದು ಸಮಯೋಚಿತವಾದರೂ ಇದರಿಂದ ಆರ್ಥಿಕವಾಗಿ ತೀರಾ ನಷ್ಟವುಂಟು ಮಾಡುತ್ತದೆ ಎಂದು ಬಾಕ್ಲೇìಸ್ ಸಂಸ್ಥೆಯ ಸಮೀಕ್ಷಾ ವರದಿ ಹೇಳಿದೆ. ಮೇ ಅಂತ್ಯದ ವರೆಗೂ ಹೀಗೇ ಮುಂದುವರಿದರೆ, 78 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಎಪ್ರಿಲ್‌ನ ಆರಂಭದಿಂದಲೇ ನಿರ್ಬಂಧಗಳು ಜಾರಿಯಾಗಿವೆ. ಸದ್ಯಕ್ಕೆ ಈ ನಿರ್ಬಂಧಗಳನ್ನು ಹಿಂಪಡೆಯುವ ಸಾಧ್ಯತೆ ತೀರಾ ಕಡಿಮೆ. ಮೇ ತಿಂಗಳಲ್ಲಿ ಕೊರೊನಾ ಉಚ್ಛಾ†ಯ ಮಟ್ಟಕ್ಕೆ ಹೋಗುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಮೇ ತಿಂಗಳೂ ಕೂಡ ಇದೇ ರೀತಿ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ. ಇಂಥ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗಳಿಂದ ವಾರಕ್ಕೆ ಸರಾಸರಿ 9 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗುತ್ತದೆ. ಮೇ ಅಂತ್ಯದ ವರೆಗೆ ಹೀಗೇ ಮುಂದುವರಿದರೆ 78,784 ಕೋಟಿ ರೂ. ನಷ್ಟವಾಗುತ್ತದೆ. ಅಂದರೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಗೆ ಶೇಕಡಾ 0.34 ಅಂಶಗಳಷ್ಟು ನಷ್ಟವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದರ ದುಷ್ಪರಿಣಾಮ, 2022-23ರ ಹಣಕಾಸು ವರ್ಷದ ಮೇಲೆ ಬೀಳಲಿದೆ. ಆ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲೇ ಭಾರತದ ಅಂದಾಜು ಜಿಡಿಪಿಯು ಶೇ. 1.4 ಅಂಶಗಳಷ್ಟು ಕುಂಠಿತವಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ನಷ್ಟದ ರಾಜ್ಯಗಳಲ್ಲಿ ಕರ್ನಾಟಕ ಟಾಪ್ 3: ಸಮೀಕ್ಷಾ ವರದಿಯಲ್ಲಿ ರಾಜ್ಯವಾರು ಉಂಟಾ ಗುವ ನಷ್ಟವನ್ನು ಪಟ್ಟಿ ಮಾಡಲಾಗಿದ್ದು ಅತೀ ಹೆಚ್ಚು ನಷ್ಟ ಎಪ್ರಿಲ್-ಮೇ ತಿಂಗಳುಗಳ ನಿರ್ಬಂಧ ಗಳಿಂದ ಮಹಾರಾಷ್ಟ್ರಕ್ಕೆ ಹೆಚ್ಚು ನಷ್ಟ ಎಂದು ಹೇಳಲಾಗಿದೆ. ಆ ರಾಜ್ಯಕ್ಕೆ 35,265 ಕೋಟಿ ರೂ.ಗಳಷ್ಟು ನಷ್ಟವಾಗಲಿದೆ. ಇನ್ನು 2ನೇ ಅತಿ ಹೆಚ್ಚು ನಷ್ಟಕ್ಕೊಳಗಾಗುವ ರಾಜ್ಯವೆಂದರೆ ಗುಜರಾತ್. ಅಲ್ಲಿ ಮುಂದಿನ ಎರಡು ತಿಂಗಳಲ್ಲಿ 11,254 ಕೋಟಿ ರೂ. ನಷ್ಟವಾಗಲಿದೆ. ಅತೀ ಹೆಚ್ಚು ನಷ್ಟಕ್ಕೊಳಗಾಗುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು ಒಟ್ಟಾರೆ 8,253 ಕೋಟಿ ರೂ. ಕೈ ಜಾರಿ ಹೋಗಲಿದೆ ಎಂದು ವಿವರಿಸಲಾಗಿದೆ.
ಭೋಪಾಲ್ ಲಾಕ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸೋಮವಾರ ಮಧ್ಯರಾತ್ರಿ ಯಿಂದ 7 ದಿನಗಳ ವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಎ. 19ರ ಬೆಳಗಿನ ಜಾವ 6ರ ವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಮಧ್ಯಪ್ರದೇಶ ಸರಕಾರ ಘೋಷಿಸಿದೆ. ಈ ಅವಧಿಯಲ್ಲಿ ಅತ್ಯಗತ್ಯ ಸೇವೆಗಳು, ಲಸಿಕೆ ಅಭಿಯಾನ, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ದಿನಸಿ ಅಂಗಡಿಗಳು, ಆ್ಯಂಬುಲೆನ್ಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ಕೂಲಿಗಾರರ ಓಡಾಟ, ಕೃಷಿ ಸಂಬಂಧಿತ ಸೇವೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ನಡುವೆ ಗುಜರಾತ್‌ನಲ್ಲಿ ಕೊರೊನಾ ಸೋಂಕು ಅಧಿಕವಾಗುತ್ತಿದ್ದಂತೆ ರಾಜ್ಯಾದ್ಯಂತ ಎಲ್ಲಾ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾ ವಧಿವರೆಗೆ ಮುಚ್ಚುವಂತೆ ಸರಕಾರ ಆದೇಶಿಸಿದೆ. ಮತ್ತೂಂದೆಡೆ, ಹರ್ಯಾಣದಲ್ಲಿ ಅನಿರ್ದಿ ಷ್ಟಾವಧಿವರೆಗೆ ನೈಟ್ ಕರ್ಫ್ಯೂ ಜಾರಿಗೊಳಿ ಸಲಾಗಿದೆ. ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ ಚಾಲ್ತಿಯಲ್ಲಿರಲಿದೆ.
ಎಲ್ಲರಿಗೂ ಲಸಿಕೆ ಸಿಗಲಿ: ದೇಶದಲ್ಲಿ ನಡೆಯು ತ್ತಿರುವ ಕೊರೊನಾ ಲಸಿಕೆ ಅಭಿಯಾನದ ಪ್ರಯೋಜನ ಎಲ್ಲಾ ವಯಸ್ಸಿನವರಿಗೂ ಸಿಗುವಂತೆ ಕೋರಿ, ತಹಸೀನ್ ಪೂನಾವಾಲಾ ಎಂಬುವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸರಕಾರ, ಕೇವಲ 45 ವರ್ಷ ದಾಟಿದವರಿಗಷ್ಟೇ ಲಸಿಕೆ ನೀಡುತ್ತಿದೆ. ಕೊರೊನಾ ಸಾಂಕ್ರಾಮಿಕವು ಅತಿ ವೇಗವಾಗಿ ಎಲ್ಲೆಡೆಯೂ ಹರಡುತ್ತಿರು ವುದರಿಂದ ಲಸಿಕೆಯ ಸೌಲಭ್ಯ ಎಲ್ಲರಿಗೂ ಸಿಗುವಂತಾಗಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಲಾಕ್‌ಡೌನ್ ನಷ್ಟ ತಪ್ಪಿಸಲು ಎಲ್ಲರೂ ಕೈ ಜೋಡಿಸಿ
ಇಡೀ ದೇಶದ ಆರ್ಥಿಕತೆ ಕುಸಿದರೆ ಜನಜೀವನ ಹೇಗಾಗುತ್ತದೆ ಎಂಬುದಕ್ಕೆ ಕಳೆದ ವರ್ಷದ ಲಾಕ್‌ಡೌನ್ ಅವಧಿಯೇ ಪಾಠ ಕಲಿಸಿಕೊಟ್ಟಿದೆ. ಹಾಗಾಗಿ, ನಿರ್ಬಂಧ ಗಳು ತೆರವಾಗಬೇಕಾದರೆ ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕೊರೊನಾ ನಿರ್ಮೂಲನೆಗಾಗಿ ಸರಕಾರಗಳ ಜತೆಗೆ ಕೈ ಜೋಡಿಸ ಬೇಕು ಎಂದು ತಜ್ಞರು ಹೇಳಿದ್ದಾರೆ. ಸರಕಾರ ಕೂಡ ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿ, ಲಾಕ್‌ಡೌನ್ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.