ವಂದೇ ಭಾರತ್ ಮಿಷನ್ ಯೋಜನೆ: ಸಿಂಗಾಪುರದಿಂದ ಈವರೆಗೆ 87,055 ಭಾರತೀಯರು ಸ್ವದೇಶಕ್ಕೆ ವಾಪಸ್
ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಯೋಜನೆಯನ್ನು ಕಳೆದ ವರ್ಷ ಮೇ 6ರಂದು ಆರಂಭಿಸಿತ್ತು.
Team Udayavani, May 24, 2021, 10:43 AM IST
ಸಿಂಗಾಪುರ್: ವಂದೇ ಭಾರತ್ ಮಿಷನ್ ನೆರವಿನಡಿ ಕಳೆದ ವರ್ಷದ ಮೇ ನಿಂದ ಈವರೆಗೆ 87,055 ಮಂದಿ ಭಾರತೀಯರು ಸಿಂಗಾಪುರದಿಂದ ಭಾರತಕ್ಕೆ ವಾಪಸ್ ಆಗಿರುವುದಾಗಿ ಭಾರತೀಯ ಹೈಕಮಿಷನ್ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ 19 ಬಗ್ಗೆ ಸುಳ್ಳು ಹೇಳಿಕೆ: ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ವಿರುದ್ಧ ಎಫ್ ಐಆರ್
ಕಳೆದ ವರ್ಷದಿಂದ ಇಡೀ ಜಗತ್ತನ್ನೇ ಕಂಗೆಡಿಸಿದ್ದ ಕೋವಿಡ್ 19 ಸೋಂಕಿನಿಂದಾಗಿ ಭಾರತೀಯರು ಉದ್ಯೋಗ ನಷ್ಟ, ಕುಟುಂಬದಲ್ಲಿನ ಕೋವಿಡ್ 19 ಸಾವಿನ ಪ್ರಕರಣದ ಕಾರಣದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಕಾರಣವಾಗಿದೆ ಎಂದು ಭಾರತೀಯ ಹೈಕಮಿಷನ್ ವಿವರಿಸಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಈವರೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸಿದ 629 ವಿಮಾನಗಳಲ್ಲಿ ಸುಮಾರು 87,055 ಪ್ರಯಾಣಿಕರನ್ನು ಕರೆದೊಯ್ದಿರುವುದಾಗಿ ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಂಗಾಪುರ್ ಸರ್ಕಾರದ ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಪ್ರತಿದಿನ 180 ಭಾರತೀಯರು ಭಾರತಕ್ಕೆ ಮರಳಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ. ಕೋವಿಡ್ ನಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಭಾರತ ನಿರ್ಬಂಧ ಹೇರಿತ್ತು. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ವಂದೇ ಭಾರತ್ ಮಿಷನ್ ಯೋಜನೆಯನ್ನು ಕಳೆದ ವರ್ಷ ಮೇ 6ರಂದು ಆರಂಭಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.