ದೇಶೀಯವಾಗಿ 928 ರಕ್ಷಣಾ ಬಿಡಿಭಾಗ ಉತ್ಪಾದನೆ
Team Udayavani, May 15, 2023, 7:31 AM IST
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿನ ವಿದೇಶಿ ಅವಲಂಬನೆಯನ್ನು ಮೊಟಕುಗೊಳಿಸಲು ದೇಶೀಯವಾಗಿ ಉತ್ಪಾದಿಸಲ್ಪಟ್ಟಿರುವ ರಕ್ಷಣಾ ಸಾಮಗ್ರಿ ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ 928 ಬಿಡಿಭಾಗಗಳು ಹಾಗೂ ಉಪವ್ಯವಸ್ಥೆಗಳ ಖರೀದಿಯ 4ನೇ ಪಟ್ಟಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಇದು ಆತ್ಮನಿರ್ಭರ ಭಾರತದ ನಿಟ್ಟಿನಲ್ಲಿ ಮತ್ತೂಂದು ದೃಢವಾದ ಹೆಜ್ಜೆ.
ಮಿಲಿಟರಿಯ ವಿವಿಧ ಕಡೆ ಬಳಕೆಯಾಗುವಂಥ ಶಸ್ತ್ರಾಸ್ತ್ರಗಳ ಬಿಡಿಭಾಗಗಳು, ಉಪಕರಣಗಳ ಉಪವ್ಯವಸ್ಥೆಗಳನ್ನು ಪಟ್ಟಿಮಾಡಿ ವಿದೇಶಗಳಿಂದ ಅಂಥವುಗಳ ಆಮದನ್ನು ನಿಷೇಧಿಸಲು ಯೋಜಿಸಲಾಗಿದೆ. ಆ ರೀತಿ ನಿಷೇಧಗೊಳ್ಳಲಿರುವ 928 ವ್ಯವಸ್ಥೆಗಳನ್ನು ಇನ್ನಮುಂದೆ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗುತ್ತದೆ ಅಲ್ಲದೇ, ದೇಶಿಯ ಸಂಸ್ಥೆಗಳಿಂದಲೇ ಅವುಗಳನ್ನು ರಕ್ಷಣಾ ಪಡೆಗಳು ಖರೀದಿಸಲಿವೆ. ಈಗಾಗಲೇ ಇಂಥ ಮೂರು ಪಟ್ಟಿಗಳನ್ನು ತಯಾರಿಸಿ ಅನುಮೋದನೆ ಪಡೆಯಲಾಗಿತ್ತು. ಇದೀಗ ನಾಲ್ಕನೇ ಪಟ್ಟಿಗೂ ಭಾನುವಾರ ಸಚಿವಾಲಯ ಅಸ್ತು ಎಂದಿದೆ. ರಕ್ಷಣಾ ಆತ್ಮನಿರ್ಭರತೆಯ ಸಲುವಾಗಿ 2023ರ ಡಿಸೆಂಬರ್‌ನಿಂದ 2028ರ ಡಿಸೆಂಬರ್‌ವರೆಗೆ ನಿರ್ದಿಷ್ಟ ರಕ್ಷಣಾ ವಸ್ತುಗಳ ಆಮದು ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.