IPL 2023: ಮೋಹಿತ್ ಎಂಬ ಮೋಡಿಗಾರ
Team Udayavani, May 29, 2023, 7:11 AM IST
ಅಹ್ಮದಾಬಾದ್: ದ್ವಿತೀಯ ಕ್ವಾಲಿಫೈಯರ್ ಪಂದ್ಯದ ವೇಳೆ ಗುಜರಾತ್ ತಂಡದ ಶುಭಮನ್ ಗಿಲ್ ಮತ್ತು ಮೋಹಿತ್ ಶರ್ಮ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 62 ರನ್ನುಗಳಿಂದ ಸೋತು ಐಪಿಎಲ್‌ನಿಂದ ಹೊರಬಿದ್ದದ್ದು ಈಗ ಇತಿಹಾಸ. ಗಿಲ್ 129 ರನ್ ಬಾರಿಸಿದರೆ, ಮೋಹಿತ್ ಕೇವಲ 10 ರನ್ ವೆಚ್ಚದಲ್ಲಿ 5 ವಿಕೆಟ್ ಉಡಾಯಿಸಿದರು. ಅದೂ ಬರೀ 2.2 ಓವರ್‌ಗಳಲ್ಲಿ!
“ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ ಆಫ್ಗೆ ತಂದವನೂ ನಾನೇ, ಮುಂಬೈಯನ್ನು ಕೂಟದಿಂದ ಹೊರದಬ್ಬಿದವನೂ ನಾನೇ’ ಎಂದು ಗಿಲ್‌ಗೆ ಅನ್ವಯಿಸಿದ ಹೇಳಿಕೆ ವೈರಲ್ ಆಗಿತ್ತು. ಆದರೆ ಮೋಹಿತ್ ಶರ್ಮ ಸಾಧನೆ ಗಿಲ್ ಸಾಹಸಕ್ಕೆ ಸರಿಸಮನಾಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಬೆಸ್ಟ್ ಕಮ್‌ಬ್ಯಾಕ್ ಸ್ಟೋರಿ
ಮೋಹಿತ್ ಶರ್ಮ ಅವರದು “ಬೆಸ್ಟ್ ಕಮ್‌ಬ್ಯಾಕ್ ಸ್ಟೋರೀಸ್’ ಎಂಬುದಾಗಿ ಮಾಜಿ ಕೀಪರ್ ಪಾರ್ಥಿವ್ ಪಟೇಲ್ ಬಣ್ಣಿಸಿದ್ದಾರೆ. “ಈ ಟ್ರ್ಯಾಕ್ ಮೇಲೆ 233 ರನ್ನನ್ನೂ ಚೇಸ್ ಮಾಡಬಹುದು ಎಂದು ನಾವು ಮಾತಾಡಿಕೊಳ್ಳುತ್ತಿದ್ದೆವು. ಸೂರ್ಯಕುಮಾರ್ ಇರುವಷ್ಟು ಹೊತ್ತು ಮುಂಬೈ ಮೇಲೆ ನಿರೀಕ್ಷೆ ಇರಿಸಲಾಗಿತ್ತು. ಆದರೆ ಮೋಹಿತ್ ಶರ್ಮ ಇದನ್ನು ತಲೆಕೆಳಗಾಗಿಸಿದರು. 5 ವಿಕೆಟ್ ಉರುಳಿಸಲು ಅವರು 4 ಓವರ್‌ಗಳ ಕೋಟಾವನ್ನೂ ತೆಗೆದುಕೊಳ್ಳಲಿಲ್ಲ’ ಎಂಬುದು ಪಾರ್ಥಿವ್ ಅವರ ಅಚ್ಚರಿಯ ಉದ್ಗಾರ.
“2022ರ ಹರಾಜಿನಲ್ಲಿ ಮೋಹಿತ್ ಶರ್ಮ ಯಾರಿಗೂ ಬೇಡವಾಗಿದ್ದರು. ಕೇವಲ ನೆಟ್ ಬೌಲರ್ ಆಗಿ ಕಾಣಿಸಿಕೊಳ್ಳಬೇಕಾಯಿತು. ನಾವು ಅದಷ್ಟೋ ಪುನರಾಗಮನದ ಕತೆಗಳನ್ನು ಕೇಳಿದ್ದೇವೆ. ಆದರೆ ಮೋಹಿತ್ ಶರ್ಮ ಅವರ ಕಮ್‌ಬ್ಯಾಕ್ ವಿಶಿಷ್ಟ ಹಾಗೂ ವಿಭಿನ್ನವಾದುದು’ ಎಂದು ಪಾರ್ಥಿವ್ ಪ್ರಶಂಸಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.