ಈ ನಗರದಲ್ಲಿ ಮನೆ ಬೆಲೆ ಬರೀ 85 ರೂ!
ವಲಸೆ ಹೋಗುವ ಯುವ ಸಮುದಾಯವನ್ನು ಹಿಡಿದಿಡುವ ಪ್ರಯತ್ನ
Team Udayavani, Jun 12, 2020, 9:10 PM IST
ಸಾಂದರ್ಭಿಕ ಚಿತ್ರ.
ಸಿನ್ಕ್ ಫ್ರಾಂಡಿ: ಯಾರಿಗುಂಟು, ಯಾರಿಗಿಲ್ಲ ಒಂದು ಮನೆ ಬೇಲೆ ಕೇವಲ 85 ರೂ.! ಮೊದಲು ಬಂದವರಿಗೆ ಆದ್ಯತೆ… ಕೋವಿಡ್-19 ವ್ಯಾಪಿಸಿರುವ ಈ ಪರಿಸ್ಥಿತಿಯಲ್ಲಿ ಜೋಕ್ ಮಾಡುತ್ತಿದಾರೆ ಅಂದುಕೊಳ್ಳಬೇಡಿ. ಇದು ನಿಜ. ಆದರೆ ಭಾರತದಲ್ಲಿ ಅಲ್ಲ, ಇಟಲಿಯಲ್ಲಿ.
ಇಟಲಿಯ ಕಲಾಬ್ರಿಯಾ ಪ್ರಾಂತ್ಯದ ದಕ್ಷಿಣಕ್ಕಿರುವ ಸಿನ್ಕ್ ಫ್ರಾಂಡಿಯಲ್ಲಿ ಕೇವಲ ಒಂದು ಯುರೋಗೆ (85.79 ರೂ.) ಒಂದಿಡೀ ಮನೆ ಕೊಡುವ ಆಫರ್ ನೀಡಲಾಗಿದೆ. ಹಾಗಾದ್ರೆ ಅದೊಂದು ಕೋವಿಡ್-19ಗೆ ತುತ್ತಾಗಿ ತತ್ತರಿಸಿರುವ ನಗರವೇ ಇರಬೇಕು ಎಂಬುದು ನಿಮ್ಮ ಊಹೆಯಾಗಿದ್ದರೆ, ಅದು ತಪ್ಪು. ಸಿನ್ಕ್ ಫ್ರಾಂಡಿ ಒಂದು ಕೋವಿಡ್-19 ಮುಕ್ತ ನಗರ.ಇಂತಹ ಸಂಕಷ್ಟದ ದಿನಗಳಲ್ಲೂ ಈ ರೀತಿಯ ಭರ್ಜರಿ ಆಫರ್ ನೀಡುವುದರ ಹಿಂದಿನ ಉದ್ದೇಶ, ಕೋವಿಡ್-19 ಕಾರಣದಿಂದ ಕೆಲಸ ಹುಡುಕಿಕೊಂಡು ಬೇರೆ ದೇಶ ಅಥವಾ ಪ್ರಾಂತ್ಯಗಳಿಗೆ ವಲಸೆ ಹೋಗುವ ಯುವ ಸಮುದಾಯವನ್ನು ಸೆಳೆಯುವುದಾಗಿದೆ. ಇದು ಅಲ್ಲಿನ ಮೇಯರ್ ಮೈಕೆಲ್ ಕೋನಿಯಾರ ಐಡಿಯಾ ಆಗಿದ್ದು, ಇದಕ್ಕೆ “ಆಪರೇಷನ್ ಬ್ಯೂಟಿ’ ಎಂಬ ಹೆಸರಿಡಲಾಗಿದೆ.
“ಈ ಆಪರೇಷನ್ ಬ್ಯೂಟಿ ಯೋಜನೆಯ ಪ್ರಮುಖ ಭಾಗವಾಗಿ, ಪಟ್ಟಣದ ಹಳೆಯ ಹಾಗೂ ಬಳಸದೇ ಇರುವ ಭಾಗಗಳಲ್ಲಿನ ಖಾಲಿ ಮನೆಗಳ ಮಾಲೀಕರನ್ನು ಹುಡುಕಿ, ಸಂಪರ್ಕಿಸಿ ಅವರಿಂದ ಮನೆ ಪಡೆಯಲಾಗಿದೆ, ಎಂದು ಮೇಯರ್ ಮೈಕೆಲ್ ಕೋನಿಯಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.