ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್
Team Udayavani, Feb 27, 2021, 11:44 PM IST
ಹೊಸದಿಲ್ಲಿ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಹತ್ತಿರ ಗುರುವಾರ ಅನುಮಾನಾಸ್ಪದವಾಗಿ ಕಂಡುಬಂದಿದ್ದ ಎಸ್‌ಯುವಿ ಕೇಸ್‌ನ ತನಿಖೆ ಮುಂದುವರಿದಷ್ಟೂ ಹೊಸ ಹೊಸ ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ.
ಫೆ. 24ರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆ ಕಾರು, ಅಂಬಾನಿ ನಿವಾಸದ ಹತ್ತಿರದಲ್ಲಿರುವ ಕಾರ್ಮಿಕೆಲ್ ರಸ್ತೆಯಲ್ಲಿರುವ ವಿಜಯ್ ಸ್ಟೋರ್ಸ್ ಎಂಬ ದಿನಸಿ ಅಂಗಡಿಯ ಮುಂದೆ ಬಂದು ನಿಂತಿದೆ. ದಿನಸಿ ಅಂಗಡಿಯ ಬಾಗಿಲಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮರಾದಲ್ಲಿ ಇದು ಸೆರೆಯಾಗಿದೆ. ಹಾಗೆ ಬಂದು ನಿಂತ ಕಾರಿನಿಂದ ಚಾಲಕ ಕೆಳಗಿಳಿದಿಲ್ಲ. ರಾತ್ರಿ 3 ಗಂಟೆಯವರೆಗೆ ಅದರಲ್ಲೇ ಇದ್ದಾನೆ. ಅನಂತರ ಇಳಿದು ಹೊರಟುಹೋಗಿದ್ದಾನೆ. ಆತ ತಲೆಗವಚ ಹೊಂದಿರುವ ಜರ್ಕಿನ್ ಮಾದರಿಯ ಹೂಡಿ ದಿರಿಸು ಧರಿಸಿದ್ದರಿಂದ ಹಾಗೂ ಅದು ರಾತ್ರಿ ವೇಳೆ ಆಗಿದ್ದರಿಂದ ಆತನ ಗುರುತು ಪತ್ತೆಯಾಗಿಲ್ಲ. ಆದರೆ ಆತನನ್ನು ಸದ್ಯದಲ್ಲೇ ಶೋಧಿಸಿ ಬಂಧಿಸುವುದಾಗಿ ಮುಂಬಯಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ
ಮಾಹಿತಿ ಬಹಿರಂಗ: ಎಸ್‌ಯುವಿನಲ್ಲಿ ದೊರಕಿರುವ, ಮುಕೇಶ್ ಹಾಗೂ ಅವರ ಪತ್ನಿ ನೀತು ಅಂಬಾನಿಯವರನ್ನು ಉದ್ದೇಶಿಸಿ ಬರೆಯಲಾಗಿರುವ ಬೆದರಿಕೆ ಪತ್ರದ ಕೆಲವು ಮಾಹಿತಿ ಬಹಿರಂಗವಾಗಿವೆ. ಎಸ್‌ಯುವಿಯಲ್ಲಿ ಸಿಕ್ಕಿರುವ 20 ಜಿಲೆಟಿನ್ ಕಡ್ಡಿಗಳನ್ನು ನಾವು ಜೋಡಿಸಿಲ್ಲ. ಆದರೆ ಮುಂದೆ ಇವನ್ನು ಜೋಡಿಸಿ ತಂದು ದಾಳಿ ಮಾಡುವುದು ನಮಗೆ ದೊಡ್ಡ ವಿಷಯವೇನಲ್ಲ ಎಂಬರ್ಥದಲ್ಲಿ ಪತ್ರದಲ್ಲಿ ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.