Today ಸಚಿವ ಸೋಮಣ್ಣ ಸಭೆ: ಕರಾವಳಿ ಭಾಗದ ರೈಲ್ವೇ ಕುರಿತ ಸುದೀರ್ಘ ಬೇಡಿಕೆಗಳ ಪಟ್ಟಿ
Team Udayavani, Jul 17, 2024, 6:42 AM IST
ಮಂಗಳೂರು : ಮಂಗಳೂರು ರೈಲ್ವೇ ಪ್ರತ್ಯೇಕ ವಿಭಾಗ, ಕೊಂಕಣ ರೈಲ್ವೇಯನ್ನು ರೈಲ್ವೇ ಇಲಾಖೆಯೊಂದಿಗೆ ಸೇರ್ಪಡೆ, ಹಲವು ಹೊಸ ರೈಲು, ಹಲವು ರೈಲುಗಳ ವಿಸ್ತರಣೆ, ಸೇವೆಯಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ಬುಧವಾರ (ಜು.17) ದಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮುಂದಿಡಲು ವಿವಿಧ ರೈಲ್ವೇ ಯಾತ್ರಿ ಸಂಘದವರು ಸಿದ್ಧರಾಗಿದ್ದಾರೆ.
ಈಗಾಗಲೇ ಕೆಲವು ಮನವಿಗಳನ್ನು ಸಂಸದರಾದ ಕ್ಯಾ|ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರ ಗಮನಕ್ಕೆ ತಂದಿದ್ದಾರೆ. ಹಲವು ವಿಷಯಗಳ ಕುರಿತು ತಾವೇ ಬಂದು ಚರ್ಚಿಸುವುದಾಗಿ ಹೇಳಿದಂತೆ ವಿ. ಸೋಮಣ್ಣನವರು ಜು.17ರಂದು ಬೆಳಗ್ಗೆ 10.45ಕ್ಕೆ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಅಲ್ಲದೆ ದಕ್ಷಿಣ ರೈಲ್ವೇ, ನೈರುತ್ಯ ರೈಲ್ವೇ ಹಿರಿಯ ಅಧಿಕಾರಿಗಳು ಭಾಗವಹಿಸುವರು.
ಪ್ರಮುಖ ಬೇಡಿಕೆಗಳು
– ಸಕಲೇಶಪುರ-ಸುಬ್ರಹ್ಮಣ್ಯ ಭಾಗದ ರೈಲ್ವೇ ಹಳಿಯನ್ನು ಮೇಲ್ದರ್ಜೆಗೇರಿಸಬೇಕು, ಆ ಮೂಲಕ ಘಾಟ್ ಸೆಕ್ಷನ್‌ನ ಎಲ್ಲಾ ಸ್ಟೇಷನ್‌ಗಳಲ್ಲೂ ಕ್ರಾಸಿಂಗ್‌ಗೆ ಅವಕಾಶ ಕೊಡಬೇಕು ಹಾಗೂ ಸರಾಸರಿ ವೇಗವನ್ನು ಗಂಟೆಗೆ 30ರಿಂದ 35 ಕಿ.ಮೀಗೆ ಏರಿಸಬೇಕು. ಕಡಗರವಳ್ಳಿ ಹಾಗೂ ಯಡಕುಮರಿಯಲ್ಲಿ ಕ್ಯಾಚ್ ಸ್ಲೆಡಿಂಗ್ ನಿರ್ಮಿಸಬೇಕು.
ಬೆಳಗ್ಗೆ ಹಾಗೂ ಸಂಜೆಯ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ರೋಡ್ ವರೆಗೆ ವಿಸ್ತರಿಸಬೇಕು. ಬೆಂಗಳೂರು-ಮಂಗಳೂರು-ಕಣ್ಣೂರುನಂ 16511/12 ರೈಲಿನ ಈಗಿನ ವೇಳೆಯನ್ನು ಬದಲಾಯಿಸಬಾರದು.
– ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರಸ್ ರೈಲು ಮಂಗಳೂರು ಸೆಂಟ್ರಲ್ ಮೂಲಕ ಹೋಗುತ್ತಿದ್ದು ಈ ಮಾರ್ಗ ಬದಲಾಯಿಸಬಾರದು. ಬೆಂಗಳೂರು ಕಣ್ಣೂರು ಎಕ್ಸ್‌ಪ್ರೆಸ್ ರೈಲಿಗೆ ಸುಧಾರಿತ ಎಲ್‌ಎಚ್‌ಬಿ ಕೋಚ್ ಒದಗಿಸಬೇಕು.
ಮಂಗಳೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ಮಧ್ಯೆ ಇರುವ 3 ಕಿ.ಮೀ ದೂರದಲ್ಲಿ ಹಳಿ ದ್ವಿಗುಣ ಮಾಡಬೇಕು, ಮಂಗಳೂರು ಸೆಂಟ್ರಲ್ ಅನ್ನು ವಿಶ್ವದರ್ಜೆ ನಿಲ್ದಾಣವಾಗಿಸಬೇಕು.
– ಬಂದರು ಗೂಡ್ಸ್‌ಶೆಡ್ ಅನ್ನು ಟ್ರೈನ್ ಪಾರ್ಕಿಂಗ್, ನಿರ್ವಹಣ ಯಾರ್ಡ್ ಮಾಡುವ ಜತೆ ಸೂಕ್ತವಾದ ರಸ್ತೆ ಮೇಲ್ಸೇತುವೆಯನ್ನು ಪಾಂಡೇಶ್ವರದಲ್ಲಿ ನಿರ್ಮಿಸಬೇಕು.
– ಹಿಂದೆ ಸಂಚರಿಸುತ್ತಿದ್ದ ಮಂಗಳೂರು-ಮಾತಾ ವೈಷ್ಣೋದೇವಿ ಕಾಟ್ರ ನವಯುಗ ಎಕ್ಸ್‌ಪ್ರೆಸ್ ಅನ್ನು ಸುಬ್ರಹ್ಮಣ್ಯ ರಸ್ತೆ ಅರಸೀಕೆರೆ ಪುಣೆ ಹೊಸದಿಲ್ಲಿ ಮಾರ್ಗವಾಗಿ ಮರು ಪರಿಚಯಿಸಬೇಕು.
– 12133/34 ಸಿಎಸ್‌ಟಿಎಂ ಮುಂಬಯಿ ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕು ಹಾಗೂ 12134 ರೈಲು ಮಂಗಳೂರಿನಿಂದ ಸಂಜೆ 4 ಕ್ಕೆ ಬಿಡುವಂತಾಗಬೇಕು.
– ಗುಜರಾತ್ ಸಂಪರ್ಕಿಸುವ ಮಂಗಳೂರು- ಭಾವನಗರ ರೈಲಿಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಅದನ್ನು ಪರಿಚಯಿಸಲು ಕ್ರಮ ಕೈಗೊಳ್ಳುವುದು.
-ಬೆಂಗಳೂರು-ಮಂಗಳೂರು-ಕಣ್ಣೂರುನಂ.16511/12 ರೈಲನ್ನು ಕೋಝಿಕೋಡ್‌ಗೆ ವಿಸ್ತರಿಸುವ ಆಲೋಚನೆಯನ್ನು ಕೈ ಬಿಡಬೇಕು.
-ಮಂಗಳೂರು-ವಿಜಯಪುರ ಮಧ್ಯೆ ಸಂಚರಿಸುವ 07377/78 ರೈಲುಗಳು ಈಗಲೂ ವಿಶೇಷ ರೈಲುಗಳಾಗಿಯೇ ಓಡುತ್ತಿರುವುದು ಪ್ರಯಾಣಿಕರಿಗೆ ದುಬಾರಿಯಾಗುತ್ತಿದೆ, ಹಾಗಾಗಿ ಅವುಗಳನ್ನು ಸಾಮಾನ್ಯ ರೈಲುಗಳಾಗಿ ಪರಿವರ್ತಿಸಬೇಕು.
– 16575/76 ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೂ ವಿಸ್ತರಿಸಬೇಕು ಎನ್ನುವುದಕ್ಕೆ ದಕ್ಷಿಣ ರೈಲ್ವೇಯವರು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಮಂಡಳಿ ಅನುಮೋದನೆ ದೊರಕುವಂತೆ ಕ್ರಮ ಕೈಗೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.