ಮುಗ್ದ ಭಾವದ ಮೂಲಕ ಪದ್ಮಶ್ರೀ ಸ್ವೀಕರಿಸಿದ ಹಿರ್ಬಾಯಿ ಇಬ್ರಾಹಿಂ ಲೋಬಿ; ವಿಡಿಯೋ
ಸಹೋದರ ನರೇಂದ್ರ....; ಮೋದಿ ಅವರನ್ನು ನೋಡಿ ಭಾವೋದ್ವೇಗ
Team Udayavani, Mar 23, 2023, 8:33 AM IST
ನವದೆಹಲಿ: ಬುಡಕಟ್ಟು ಸಮುದಾಯದ ಜೀವನವನ್ನು ಉನ್ನತೀಕರಿಸಲು ನೀಡಿದ ಕೊಡುಗೆಗಾಗಿ ಸಮಾಜ ಸೇವಕಿ 70 ವರ್ಷದ ಹಿರ್ಬಾಯಿ ಇಬ್ರಾಹಿಂ ಲೋಬಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಿದರು.
ಗುಜರಾತ್‌ನ ಸಿದ್ದಿ ಬುಡಕಟ್ಟು ಸಮುದಾಯದ ಮಹಿಳೆಯರ ಸಬಲೀಕರಣಕ್ಕಾಗಿ ಸಾಮಾಜಿಕ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ತರಲು ಹೆಸರುವಾಸಿಯಾದ ಲೋಬಿ, ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ತಮ್ಮ ಹಾವಭಾವದ ಮೂಲಕ ಜನರ ಹೃದಯವನ್ನು ಗೆದ್ದರು.
#WATCH | Hailing from the Siddi tribe, Hirbai Ibrahim Lobi receives the Padma Shri award from President Droupadi Murmu. She works for the upliftment and development of the Siddi tribal community. pic.twitter.com/OBQy4Yh4ON
— ANI (@ANI) March 22, 2023
ವೀಡಿಯೋದಲ್ಲಿ, ಪ್ರಶಸ್ತಿ ಪಡೆಯಲು ನಡೆದುಕೊಂಡು ಹೋಗುತ್ತಿರುವಾಗ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಹಲವಾರು ಕೇಂದ್ರ ಸಚಿವರು ಕುಳಿತಿದ್ದ ಮೊದಲ ಸಾಲಿನ ಬಳಿ ಸ್ವಲ್ಪ ಸಮಯ ನಿಂತು ಧೈರ್ಯದಿಂದ ಮಾತನಾಡಿದರು. ಪ್ರಧಾನಿ ಮೋದಿಯವರ ಬುಡಕಟ್ಟು ಜನಾಂಗದವರ ಉದಾತ್ತ ಕೆಲಸಕ್ಕಾಗಿ ಶ್ಲಾಘಿಸಿದರು. ಅಪರೂಪದ ಆಶೀರ್ವಾದದ ಅಭಿವ್ಯಕ್ತಿಯಲ್ಲಿ, ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಿದರು.
“ಮೇರೆ ಪ್ಯಾರೆ ನರೇಂದ್ರ ಭಾಯ್ ಆಪ್ನೆ ಮೇರಿ ಝೋಲಿ ಖುಸಿಯೋಂ ಸೇ ಭರ್ ದಿ” (ನನ್ನ ಪ್ರೀತಿಯ ಸಹೋದರ ನರೇಂದ್ರ, ನೀವು ನನ್ನ ಚೀಲವನ್ನು ಅನ್ನು ಸಂತೋಷದಿಂದ ತುಂಬಿದ್ದೀರಿ ಎಂದು ಹೇಳಿದರು. ಸಭಾಂಗಣದಲ್ಲಿ ಆಕೆಯ ಭಾವೋದ್ವೇಗಕ್ಕೆ ಚಪ್ಪಾಳೆ ತಟ್ಟಿದರು.
ತಮ್ಮ ಆಶೀರ್ವಾದವನ್ನು ತಿಳಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭುಜದ ಮೇಲೆ ತನ್ನ ಎರಡೂ ಕೈಗಳನ್ನು ಇರಿಸುವ ಮೂಲಕ ಪ್ರೀತಿ ವ್ಯಕ್ತಪಡಿಸಿದರು. ಮುರ್ಮು ಅವರು ಬುಡಕಟ್ಟು ಸಮುದಾಯದಿಂದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿರುವುದರಿಂದ ಲೋಬಿ ಅವರು ರಾಷ್ಟ್ರಪತಿಗಳ ಬಗ್ಗೆ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.