ಅರ್ಥೂರ್ ರೋಡ್ ಜೈಲಿಗೆ ಭೇಟಿ ಬೆನ್ನಲ್ಲೇ ಶಾರುಖ್ ನಿವಾಸಕ್ಕೆ ಎನ್ ಸಿಬಿ ತಂಡ!
Team Udayavani, Oct 21, 2021, 1:43 PM IST
ಮುಂಬಯಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಗುರುವಾರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬಯಿಯ ಮನ್ನತ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಡ್ರಗ್ಸ್ ಸೇವನೆ ಹಿನ್ನೆಲೆಯಲ್ಲಿ ಆರ್ಥರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್‌ನನ್ನು ಶಾರುಖ್ ಖಾನ್ ಅವರು ಭೇಟಿಯಾಗಿ ಮಾತುಕತೆ ನೆಡೆಸಿದ ಬೆನ್ನಲ್ಲೇ ಅಧಿಕಾರಿಗಳು ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮರಳಿದ್ದಾರೆ.
Mumbai | A team of Narcotics Control Bureau (NCB) is currently present at actor Shah Rukh Khan’s residence ‘Mannat’
Earlier today, Shah Rukh Khan met son Aryan at Arthur Road Jail
Bombay High Court to hear Aryan Khan’s bail application on 26th October pic.twitter.com/SyzoWVi9UL
— ANI (@ANI) October 21, 2021
ಜಾಮೀನು ನೀಡಲು ಮುಂಬಯಿಯ ವಿಶೇಷ ನ್ಯಾಯಾಲಯ ನಿರಾಕರಿಸಿದ ಹಿನ್ನಲೆಯಲ್ಲಿ ಆರ್ಯನ್ ಪರ ವಕೀಲರು ಬಾಂಬೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಾಂಬೆ ಹೈಕೋರ್ಟ್ ಅಕ್ಟೋಬರ್ 26 ರಂದು ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದರಿಂದ ಆರ್ಯನ್ ಕನಿಷ್ಠ 5 ದಿನಗಳ ಕಾಲ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲೇ ಇರಬೇಕಾಗಿದೆ.
ಆರ್ಯನ್ ಬಂಧನದ ಬಳಿಕ ಇದೆ ಮೊದಲ ಬಾರಿ ಶಾರುಖ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಪುತ್ರನ ಭೇಟಿಗಾಗಿ ಜೈಲಿಗೆ ಆಗಮಿಸಿದ್ದರು.
ನಟಿಗೆ ಸಂಕಷ್ಟ
ಇನ್ನೊಂದೆಡೆ ಎನ್ ಸಿಬಿ ತಂಡವು ನಟಿ ಅನನ್ಯ ಪಾಂಡೆ ಅವರ ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶಾಕ್ ನೀಡಿದೆ. ಕ್ರೂಸ್ ಶಿಪ್ ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಆರ್ಯನ್ ಅನನ್ಯ ಪಾಂಡೆ ಅವರೊಂದಿಗೆ ಚಾಟ್ ಮಾಡುತ್ತಿರುವುದನ್ನು ಎನ್ ಸಿಬಿ ಬಯಲಿಗೆಳೆದಿತ್ತು.
Mumbai | A team of Narcotics Control Bureau arrives at the residence of actor Ananya Pandey. A team of NCB is also present at Shah Rukh Khan’s residence
Visuals from Ananya Pandey’s residence pic.twitter.com/U5ssrIxpph
— ANI (@ANI) October 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.