![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 1, 2023, 5:06 AM IST
ಕಾಸರಗೋಡು: ಮದ್ಯ ಲಭಿಸದ ಕಾರಣದಿಂದ ತಿರುವನಂತಪುರ ಅರಿಮನ ನಿವಾಸಿ ಸಜಿನ್ ಪಾಲೆಸ್ ಆಲಿಯಾಸ್ ಉಣ್ಣಿ (34) ಮೊಬೈಲ್ ಟವರ್‌ಏರಿ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಕಾಸರಗೋಡಿನ ಐ.ಸಿ. ಭಂಡಾರಿ ರಸ್ತೆಯಲ್ಲಿ ನಡೆದಿದೆ.
ಬಿವರೇಜ್ ಕಾರ್ಪೊರೇಶನ್‌ನ ಚಿಲ್ಲರೆ ಮದ್ಯ ಮಾರಾಟದಂಗಡಿಗೆ ಉಣ್ಣಿ ಮದ್ಯ ಖರೀದಿಗೆ ಬಂದಿದ್ದು, ಮದ್ಯ ಸಿಗದ ಕಾರಣದಿಂದ ಅಲ್ಲೇ ಪಕ್ಕದಲ್ಲಿರುವ ವೇರ್ ಹೌಸ್ ಕಟ್ಟಡದ ಮೇಲಿನ ಮೊಬೈಲ್ ಟವರ್‌ಗೇರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗು ಅಗ್ನಿಶಾಮಕ ದಳದವರು ಮನವೊಲಿಸಿದರೂ ಕೆಳಗಿಳಿಯಲಿಲ್ಲ. ಅದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಮಂದಿಯಲ್ಲಿ ಯಾರೋ ಕೆಳಗಿಳಿದರೆ ಮದ್ಯ ನೀಡುವುದಾಗಿ ಹೇಳಿದ್ದರಿಂದ ಸಂತಸಗೊಂಡು ಟವರ್‌ನಿಂದ ಆತ ಕೆಳಗಿಳಿದ. ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಕರೆದೊಯ್ದರು. ಅನಂತರ ಜನ ನಿಟ್ಟುಸಿರು ಬಿಡುವಂತಾಯಿತು.
You seem to have an Ad Blocker on.
To continue reading, please turn it off or whitelist Udayavani.